ಆತ್ಮಧ್ಯಾನದ ನಾದ

Author : ಅಬ್ದುಲ್ ಹೈ ತೋರಣಗಲ್ಲು

Pages 72

₹ 99.00




Year of Publication: 2021
Published by: ಕಾವ್ಯಮನೆ ಪ್ರಕಾಶನ
Address: #220 ವಿರೇಂದ್ರ ಪಾಟೀಲ ಬಡಾವಣೆ, 1ನೇ ಬ್ಲಾಕ್, ಸೇಡಂ ರೋಡ್, ಕಲ್ಬುರ್ಗಿ- 585105
Phone: 7829464653

Synopsys

‘ಆತ್ಮಧ್ಯಾನದ ನಾದ’ ಅಬ್ದುಲ್ ಹೈ ತೋರಣಗಲ್ಲು ಅವರ ಗಜಲ್ ಸಂಕಲನ. ಈಸಂಕಲನಕ್ಕೆ ಕವಿ ಅಲ್ಲಾಗಿರಿರಾಜ್ ಕನಕಗಿರಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಯುವ ಬರಹಗಾರರ ಪಾಲಿಗೆ ಕಾಲುದಾರಿಯ ಕಂದೀಲಾಗಿ, ಮನೆಗೆ ಯಜಮಾನಂತೆ ಸದಾ ಆಶಯ ನುಡಿಗಳನ್ನಾಡುವ ಹೈ ತೋ ಈಗ ಗಜಲ್ ಗರಡಿ ಮನೆಯಲ್ಲಿ ಕಾಣಿಸಿಕೊಂಡು ಆತ್ಮಧ್ಯಾನದ ನಾದದ ಮೂಲಕ ಏಕತಾರಿ ಹಿಡಿದು ಹೊರಟಿದ್ದು ಯೋಗಾ ಯೋಗ’ ಎನ್ನುತ್ತಾರೆ ಅಲ್ಲಾಗಿರಿರಾಜ್ ಕನಕಗಿರಿ. ಜೊತೆಗೆ ಕಥೆ, ಕವನ ಕಾದಂಬರಿ ವಿಮರ್ಶೆ ನಾಟಕದೊಳಗಿನ ದನಿಯಾಗಿದ್ದ ಹೈ ತೋ ಅವರ ಗಜಲ್ ದಾಟಿಯೂ ಸೂಕ್ಷ್ಮ ಸಂವೇದನೆಯ ಆತ್ಮ ದ್ಯಾನವಾಗಿದೆ. ಪ್ರೀತಿ ಇಲ್ಲದೆ ಏನು ಇಲ್ಲ ಎನ್ನುವ ತತ್ವಾದರ್ಶನಗಳನ್ನು ಪಾಲಿಸುವ ಕಾವ್ಯನವೆ ವಿಚಾರಧಾರೆ ಹಂಚಿಕೊಂಡ ಹೈ ತೋ ಅವರು ಈಗಗಾಗಲೇ ಅನೇಕ ಕೃತಿಗಳ ಮೂಲಕ ಪದಕ್ಕೆ ಪದ ಕಟ್ಟಿ ಹಾಡಿದ್ದಾರೆ. ಈಗ ಆತ್ಮ ಧ್ಯಾನದ ನಾದದೊಂದಿಗೆ ಗಜಲ್ ಕಾವ್ಯ ಪ್ರಕಾರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ಸಾಹಿತ್ಯ ಓದುಗರ ಮುಂದೆ ಸಂದಲ್ ಆಗಬಯಸುವ ಅವರ ಮೊದಲ ಕಸರತ್ತಿಗೆ ನನ್ನದೊಂದು ಧ್ಯಾನದ ಸಲಾಂ ಇರಲಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಅಬ್ದುಲ್ ಹೈ ತೋರಣಗಲ್ಲು

ಲೇಖಕ ಅಬ್ದುಲ್ ಹೈ ತೋರಣಗಲ್ಲು ಅವರು ಕಾವ್ಯಮನೆ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾಗಿಯೂ ಸೇವೆ ಕಾರ್ಯನಿರ್ವಹಿಸಿದ್ದರು. ಕಥೆ, ಕಾವ್ಯ, ಸಾಹಿತ್ಯ ವಿಮರ್ಶೆ ವೈಚಾರಿಕ ಲೇಖನಗಳು, ಚಾರಿತ್ರಿಕ ಅಧ್ಯಯನ ಗಜಲ್ ಹೀಗೆ ವಿವಿಧ ಕ್ಷೇತ್ರದಲ್ಲಿ ಆಸಕ್ತಿಹೊಂದಿದ್ದಾರೆ. ಕಾವ್ಯಮನೆ, ಗಜಲ್ ನಾದಲೋಕ, ಗಜಲ್ ಸಂಭ್ರಮ, ಗಜಲ್ ತೊರೆ, ಒಲಿದಂತೆ ಹಾಜುವೆ, ಸೇರಿದಂತೆ ಹಲವು ಸಾಹಿತ್ಯಿಕ ಗುಂಪುಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಗಜಲ್ ಸಂಕಲನ ‘ಆತ್ಮಧ್ಯಾನದ ನಾದ’ 2021ರಲ್ಲಿ ಕಾವ್ಯಮನೆ ಪ್ರಕಾಶನದಿಂದಲೇ ಪ್ರಕಟವಾಗಿದೆ ...

READ MORE

Related Books