ಅವಳು ಕತೆಯಾದಳು ಎಂಬುದು ಈ ಕಥೆಯ ಹೆಸರು. ಹೆಸರಿನಿಂದಲೇ ಇದೊಂದು ಸ್ತ್ರೀ ಕೇಂದ್ರಿತ ಕತೆಯೆಂಬುದು ತಿಳಿದುಬಿಡುತ್ತದೆ. ಅಂತೆಯೇ ಇಲ್ಲಿ ಒಬು ಹುಡುಗಿಯ ಕತೆಯಿದೆ. ಬಹುಶಃ ಯಶವಂತ ಚಿತ್ತಾಲರ ಕತೆಯಾದಳು ಹುಡುಗಿ ಎಂಬ ಹೆಸರೂ ನೆನಪಿಗೆ ಬರುತ್ತದೆ. ಆದರೆ ಇಲ್ಲಿಯ ಕತೆಯೇ ಬೇರೆ. ಮನುವಿನ ಈ ವಯಸ್ಸು ಪ್ರೇಮಕತೆಗಳನ್ನು ಬರೆಯುವಂತದ್ದು. ಹಾಗಾಗಿ ಯಾವುದೋ ಪ್ರೇಮಕಥೆಯೇ ಇರಬಹುದು ಎಂದುಕೊಂಡರೆ ಅದು ಸುಳ್ಳು ಎಂಬುದು ಕತೆ ಓದುತ್ತಾ ಹೋದಂತೆ ಗಮನಕ್ಕೆ ಬರುತ್ತದೆ.
ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ ಕೃತಿಗಳು ಪ್ರಕಟಣಾ ಹಂತದಲ್ಲಿವೆ. ಕೃತಿಗಳು : ನಿಬ್ಬೆರಗು ...
READ MORE