ಅಯಂ ಮೇ ಹಸ್ತೋ ಭಗವಾನ್

Author : ಲೀಲಾ ಬಸವರಾಜು

₹ 120.00




Published by: ಸ್ವಾಮಿ ವಿವೇಕಾನಂದ ಯೋಗ ಪ್ರಕಾಶನ
Address: ನಂ.9, ಅಪ್ಪಾಜಪ್ಪ ಅಗ್ರಹಾರ, ಚಾಮರಾಜಪೇಟೆ, ಬೆಂಗಳೂರು- 560018 \n
Phone: 26608645

Synopsys

'ಮುದ್ರಾ' ಎಂಬ ಶಬ್ದವು ಸಂಸ್ಕೃತದಲ್ಲಿ ಅತ್ಯಂತ ಅರ್ಥಪೂರ್ಣವಾದ ಶಬ್ದ ಪರಬ್ರಹ್ಮ ಮಹಿಷಿಯಾದ ಲಲಿತಾತ್ರಿಪುರಸುಂದರಿಯು ಪ್ರಕಾಶ ಮತ್ತು ವಿಮರ್ಶ ಎಂಬ ಚೈತನ್ಯಗಳಿಂದ ಕೂಡಿದವಳು. ಅವಳು ಇಚ್ಛಾ-ಕ್ರಿಯಾ-ಜ್ಞಾನ ಎಂಬ ಶಕ್ತಿಗಳ ಸ್ವರೂಪಳು. ವಿಶ್ವವನ್ನು ಸಂತೋಷಗೊಳಿಸುವುದರಲ್ಲಿಯೂ ತನ್ಮಯೀಭಾವವನ್ನು ಉಂಟು ಮಾಡುವುದರಲ್ಲಿಯೂ ಗಮನವುಳ್ಳವಳು. ಈ ದೇವತೆಯ ಕ್ರಿಯಾಶಕ್ತಿ ಪ್ರಕಾರವೇ ಮುದ್ರಾರೂಪವನ್ನು ಪಡೆಯುತ್ತದೆ. ಜ್ಞಾನಿಗಳಾದವರು ಗುರುಗಳಾದವರು ಅವರ ಉಪದೇಶದಿಂದ ಮುದ್ರೆಗಳನ್ನು ತಿಳಿಕೊಳ್ಳಬಹುದು. ಜನಸಾಮಾನ್ಯರಿಗೆ ಮುದ್ರಾಯೋಗವನ್ನು ಸುಲಭವಾಗಿ ತಿಳಿಸಲು ಶ್ರೀಮತಿ, ಲೀಲಾ ಬಸವರಾಜು ಅವರು ಸುಮಾರು ಮೂವತ್ತು ಆಧಾರಗ್ರಂಥಗಳನ್ನು ಅಭ್ಯಾಸ ಮಾಡಿ ಆರೋಗ್ಯ ಸಾಧನೆಗೆ ಸಾಮಾನ್ಯರು ಏನು ಮಾಡಬಹುದು ಎಂದು ಒಂಭತ್ತು ಅಧ್ಯಾಯಗಳ ಈ ಪುಟ್ಟ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಮಾನವ ದೇಹದಲ್ಲಿ, ಕಾಣುವ ಪಂಚಭೂತಗಳ ಸ್ವಾರಸ್ಯ, ಹಸ್ತಲಕ್ಷಣಗಳು, ನಾಡಿ, ಮುದ್ರಾ ಪರಿಚಯ, ಮುದ್ರಾರಚನೆ, ಸಪ್ತಚಕ್ರಗಳು, ಶ್ರೀಚಕ್ರಮುದ್ರೆಗಳು, ನಾಟ್ಯವೆಂಬ ಯೋಗಶಾಸ್ತ್ರ ಮತ್ತು ಮುದ್ರಾಕೈಪಿಡಿ ಎಂಬ ಬೇರೆ ಬೇರೆ ವಿಭಾಗಗಳಲ್ಲಿ ವಿವರವಾದ ತಿಳುವಳಿಕೆಗಳನ್ನು ನೀಡಿದ್ದಾರೆ. ಅವರ ಈ ಪ್ರಯತ್ನದಿಂದ ಸಾಮಾನ್ಯರಿಗೆ ಪ್ರಯೋಜನ ಉಂಟು. ಈ ಪುಸ್ತಕದ ಪ್ರಯೋಜನವು ಸಾಮಾನ್ಯ ಜನರಿಗೆ ಹಸ್ತಾಂತವಾಗಲಿ ಎಂದು ವಿಶ್ವಾಸದಿಂದ ನಾನು ಶುಭಾಶಯಗಳನ್ನು ನೀಡುತ್ತೇನೆ ಎಂದು ಜಿ.ವೆಂಕಟಸುಬ್ಬಯ್ಯ ಹೇಳಿದ್ದಾರೆ.

About the Author

ಲೀಲಾ ಬಸವರಾಜು
(11 April 1947)

ಲೀಲಾ ಬಸವರಾಜು ಅವರು ರಂಗಭೂಮಿ ಕಲಾವಿದರು. ಸಿನೆಮಾ,ಧಾರಾವಾಹಿ,ಸಮಾಜಸೇವೆ, ಬರವಣಿಗೆಯಲ್ಲೂ ಗುರಿತಿಸಿಕೊಂಡ ಇವರಿಗೆ ಕಲೆ ಸಂಸೃತಿ ಮತ್ತು  ಆದ್ಯಾತ್ಮಿಕ ಸಾಧನೆಗಾಗಿ ಗೌರವ ಡಾಕಟರೆೀಟ್ ಪದವಿ ತೊರೆತಿದೆ. ಅಯಂ ಮೇ ಹಸ್ತೋ ಭಗವಾನ್‌, ಶ್ರೀಚಕ್ರೇಶ್ವರಿ ಲಲಿತಾಂಬಿಕೆ, ಕೆಳದಿಯ ಕಣಣಿ, ರಾಧೇ ಶ್ಯಾಮನ ಅಮೂಲ್ಯ ರತ್ನಗಳು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೇ ನಾಟಕಗಳನ್ನು ಸಹ ಬರೆದಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ...

READ MORE

Related Books