ಬಿ. ಪುಟ್ಟಸ್ವಾಮಯ್ಯ

Author : ಕೃಷ್ಣಮೂರ್ತಿ ಹನೂರು

Pages 116

₹ 60.00




Year of Publication: 2006
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಬಿ. ಪುಟ್ಟಸ್ವಾಮಯ್ಯನವರು ಪತ್ರಿಕೋದ್ಯಮ, ನಾಟಕ, ಕಾದಂಬರಿ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವ ಸಲ್ಲಿಸಿದವರು. ಅವರ ನಾಟಕಗಳು ಅಭೂತಪೂರ್ವ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದವು. ರಂಗಭೂಮಿಯ ಚಟುವಟಿಕೆಗಳಿಗೆ ಶುದ್ಧ ಸಾಹಿತ್ಯದ ಸ್ಪರ್ಶವನ್ನೂ ತಂದು ಕೊಟ್ಟು ಹೊಸ ಆಯಾಮವನ್ನು ಮೂಡಿಸಿದ ಶ್ರೇಯಸ್ಸು ಪುಟ್ಟಸ್ವಾಮಯ್ಯನವರದ್ದು. ಬಸವಣ್ಣನವರ ಬದುಕು-ಬವಣೆ-ಸಾಧನೆಗಳನ್ನು ಕುರಿತಂತೆ ಅವರು ರಚಿಸಿದ ಕಾದಂಬರಿ ಮಾಲೆ ಅವರಿಗೆ ವಿಶೇಷ ಕೀರ್ತಿಯನ್ನು ತಂದುಕೊಟ್ಟಿದೆ. ಒಟ್ಟಿನಲ್ಲಿ ಮರೆಯಲಾಗದ ಮಹಾನುಭಾವರಲ್ಲಿ ಅವರು ಒಬ್ಬರಾಗಿದ್ದಾರೆ. 1964ರಲ್ಲಿ ಅವರ ‘ಕ್ರಾಂತಿ ಕಲ್ಯಾಣ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. 

ಬಿ. ಪುಟ್ಟಸ್ವಾಮಯ್ಯನವರ ಬದುಕು ಮತ್ತು ಸಾಧನೆಗಳನ್ನು ಪರಿಚಯಿಸುವ ಕೃತಿ ಇದಾಗಿದ್ದು ಸಾಹಿತಿ ಕೃಷ್ಣಮೂರ್ತಿ ಹನೂರು ಕೃತಿಯ ಲೇಖಕರು.

About the Author

ಕೃಷ್ಣಮೂರ್ತಿ ಹನೂರು

ಜಾನಪದ ತಜ್ಞ, ಕತೆಗಾರ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಮಾಡಿ ಸಂದರ್ಶಕ ಪ್ರಾಧ್ಯಾಪಕರಾಗಿ. 40 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಆಜ್ಞಾತನೊಬ್ಬನ ಆತ್ಮ ಚರಿತ್ರೆ ಕಾದಂಬರಿ ಓದುಗರ ಮೇರೆಯಿಲ್ಲದ ಮೆಚ್ಚುಗೆ ಪಡೆದಿದೆ. ಅದೀಗ ಇಂಗ್ಲೀಷ್ ಗೆ ಅನುವಾದಗೊಂಡು ಪ್ರಕಟವಾಗಿದೆ. ಕೇರಿಗೆ ಬಂದ ಹೋರಿ, ಕತ್ತಲಲ್ಲಿ ಕಂಡ ಮುಖ ಮತ್ತು ಕಳೆದ ಮಂಗಳವಾರ ಮುಸ್ಸಂಜೆ ಅವರ ಕಥಾಸಂಕಲನಗಳು. ಬಾರೋ ಗೀಜಗನೆ, ನಿಕ್ಷೇಪ ಅವರ ಕಾದಂಬರಿಗಳು. ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಅವರು ಸಂಪಾದಿಸಿದ ವಿಶ್ವಕೋಶ ಎನ್ ಸೈಕ್ಲೋಪೀಡಿಯಾ ಆಫ್ ಫೋಕ್ ಕಲ್ಚರ್ ...

READ MORE

Related Books