ಬಾರೋ ಸಾಧನಕೇರಿಗೆ… ಮತ್ತು ನಿಷ್ಕ್ರಿಯ ಘಾತಕಿ

Author : ಆರ್ಯ (ಪಿ.  ಆರ್. ಆಚಾರ್ಯ)

Pages 72

₹ 60.00
Published by: ಜಡಭರತ ಪ್ರಕಾಶನ
Address: ಲಕ್ಷ್ಮಿ ಭವನ, ಸುಭಾಸ್ ರಸ್ತೆ, ಧಾರವಾಡ-1
Phone: 0836-2441822, 2441823

Synopsys

ಕಲಾವಿದ, ಲೇಖಕರಾಗಿದ್ದ ಆರ್ಯ ಅವರು ಆಕಾಶವಾಣಿಗಾಗಿ ಬರೆದ ಎರಡು ರೇಡಿಯೋ ನಾಟಕಗಳು ಈ ಗ್ರಂಥದಲ್ಲಿವೆ. ಬೇಂದ್ರೆಯವರ ಕವಿತೆಯ ಮೊದಲ ಸಾಲು, ‘ಬಾರೋ ಸಾಧನಕೇರಿಗೆ…’ ಎಂಬ ಶೀರ್ಷಿಕೆ ಹೊಂದಿರುವ ಮೊದಲ ನಾಟಕವು ಬೇಂದ್ರೆಯವರನ್ನು ಕುರಿತಾದ ರೂಪಕವೇನಲ್ಲ. ಬದಲಿಗೆ ಅದೊಂದು ಆಧುನಿಕ ಸಾಮಾಜಿಕ ನಾಟಕ. ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯ ಹಿನ್ನೆಲೆಯಲ್ಲಿ ವಿದೇಶಕ್ಕೆ ಹೋದ ಕುಟುಂಬ ಪಡಬಾರದ ಪಾಡುಪಟ್ಟಾಗ ಅವರನ್ನು ಆತ್ಮೀಯತೆಯಿಂದ ಕರೆದು ಅಂತಃಕರಣದಿಂದ ಆಲಂಗಿಸಿದ್ದು ಸಾಧನಕೇರಿಯೇ. ಈ ಸಾಲನ್ನೇ ನಾಟಕದ ಶೀರ್ಷಿಕೆಯಾಗಿರಿಸಿರುವ ಆರ್ಯ ಅವರು ಆಕಾಶವಾಣಿಯ ಜಾಯಮಾನಕ್ಕೆ ಪೂರಕವಾಗಿಯೇ ಇರುವಂತೆ ರಚಿಸಿದ್ದಾರೆ. ‘ನಿಷ್ಕ್ರಿಯ ಪಾತಕಿ’ ಎಂದರೆ ಸುಮ್ಮನಿರುವವರೇ ಕೆಲವು ಸಲ ಸರ್ವನಾಶಕ್ಕೆ ಕಾರಣವಾಗುತ್ತದೆ ಎಂಬುದು ನಾಟಕದ ಕೇಂದ್ರ ವಸ್ತು. ನಮಗ್ಯಾಕ ಬೇಕ್ರಿ ಊರ ಉಸಾಬರಿ? ಎಂದ ತೆಪ್ಪಗೆ ಕುಳಿತುಕೊಳ್ಳುವ ನಾವು ಊರಿಗೆ ಬೆಂಕಿ ಹತ್ತಿ ಅವಘಡ ಸಂಭವಿಸಿದಾಗ ‘ಅಯ್ಯೋ ಇದನ್ನು ತಪ್ಪಿಸಬಹುದಿತ್ತಲ್ಲ’ ಎಂದು ನಂತರ ಪಶ್ಚಾತ್ತಾಪ ಪಡುತ್ತೇವೆ. ಇದು ಮನುಷ್ಯ ಸಂಬಂಧಗಳ ಮಾನವೀಯ ಮೌಲ್ಯಗಳ ಅಧಃಪತನವನ್ನು ಸೂಚಿಸುತ್ತದೆ… ನಾವು ಕ್ರಿಯಾಶೀಲರಾಗಿ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎಂಬುದನ್ನು ಆರ್ಯರು ವಿಭಿನ್ನ ಸಂದರ್ಭದ ಮೂಲಕ ಈ ನಾಟಕದಲ್ಲಿ ನಿರೂಪಿಸಿದ್ದಾರೆ ಎಂದು ಅನೀಲ ದೇಸಾಯಿ ಅವರು ಮುನ್ನುಡಿಯಲ್ಲಿ ಬರೆದಿದ್ದಾರೆ.

About the Author

ಆರ್ಯ (ಪಿ.  ಆರ್. ಆಚಾರ್ಯ)
(07 December 1945 - 19 August 2016)

’ಆರ್ಯ’ ಎಂಬ ಹೆಸರಿನಿಂದ ಸಾಹಿತ್ಯ ಕೃತಿ ರಚಿಸಿದ ಪಿ. ಆರ್‍. ಆಚಾರ್ಯ ಅವರು ಚಿತ್ರಕಲಾವಿದ, ನಾಟಕಕಾರರೂ ಆಗಿದ್ದರು. 1945ರ ಡಿಸೆಂಬರ್‍ 7ರಂದು ಉಡುಪಿಯಲ್ಲಿ ಜನಿಸಿದ ಆಚಾರ್ಯ ಅವರ ತಂದೆ ವಿಠಲಾಚಾರ್ಯ ಮತ್ತು ತಾಯಿ ರುಕ್ಮಿಣಿ. ಉಡುಪಿಯ ಬೋರ್ಡ್‌ ಹೈಸ್ಕೂಲಿನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಆರ್ಯ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು ಸ್ನಾತಕೋತ್ತರ (ಸಂಸ್ಕೃತ) ಪದವಿ ಪಡೆದಿದ್ದರು. 1963ರಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಸ್ವಾಮೀಜಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದರು.  1973 ರಲ್ಲಿ ಸನ್ಯಾಸತ್ವ ಬಿಡುವುದರ ಜೊತೆಗೆ ಮಠದ ವ್ಯವಸ್ಥೆಯಿಂದ ಹೊರಬಂದ ಆರ್ಯ ಅವರು ಸಿಂಡಿಕೇಟ್ ...

READ MORE

Related Books