ಬದಲಾವಣೆಯ ಬೆನ್ನಟ್ಟಿ...

Author : ಶಂಕರ ಹೆಗಡೆ

Pages 424

₹ 400.00




Year of Publication: 2019
Published by: ಕನ್ನಡ ಸಾಹಿತ್ಯ ರಂಗ
Address: ಯು.ಎಸ್.ಎ.

Synopsys

ಕನ್ನಡ ಸಾಹಿತ್ಯ ರಂಗವು ಅಮೆರಿಕದಲ್ಲಿ ಆಯೋಜಿಸಿದ 9ನೇ ವಸಂತ ಸಾಹಿತ್ಯೋತ್ಸವದಲ್ಲಿ ಬಿಡುಗಡೆಯಾದ  'ಬದಲಾವಣೆಯ ಬೆನ್ನಟ್ಟಿ...' ಪುಸ್ತಕವು ಜಾಗತಿಕ ಮಟ್ಟದಲ್ಲಿ ಕನ್ನಡವನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದೆ. ಅಮೆರಿಕದಲ್ಲಿ ನೆಲೆಸಿರುವ ಕನ್ನಡದ ಬರಹಗಾರರು, ಖ್ಯಾತನಾಮರ ಲೇಖನ, ಪ್ರಬಂಧ, ಕವಿತೆ, ಕತೆಗಳ ಗುಚ್ಛವನ್ನು ’ಬದಲಾವಣೆಯ ಬೆನ್ನಟ್ಟಿ’ ಕೃತಿ ಒಳಗೊಂಡಿದೆ.

ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಆಲೋಚನೆ, ಅನುಭವ, ಮತ್ತು ಅವರ ಸಾಹಿತ್ಯ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು, ಮತ್ತು ವಲಸೆ ಬದುಕಿನ ಸವಾಲುಗಳನ್ನು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ಬದಲಾವಣೆಯ ಬೆನ್ನಟ್ಟಿ...(ಕಲೈಡೋಸ್ಕೋಪಿನಲ್ಲಿ ಕಾಲನ ಹೆಜ್ಜೆಗಳು) ಎನ್ನುವ ಶೀರ್ಷಿಕೆಯಡಿ ಕನ್ನಡಿಗರ ಬರಹಗಳನ್ನು, ಅನುಭವಗಳನ್ನು ಸಂಗ್ರಹಿಸಿ ಪುಸ್ತಕ ರೂಪಕ್ಕೆ ತಂದವರು ಪ್ರಕಾಶ್ ನಾಯಕ್ ಮತ್ತು ಶಂಕರ ಹೆಗಡೆ. 

ಪುಸ್ತಕದ ಬಗ್ಗೆ ಲೇಖಕಿ ಸುನಂದಾ ಕಡಮೆ  ’ಆಸ್ಥೆಯಿಂದ ವಿದೇಶದಲ್ಲಿ ಓದಲು ಬರುವ ಯುವ ಮನಸ್ಸಿನ ತಲ್ಲಣ, ವಿಸ್ತ್ರತಗೊಂಡ ಅಮೆರಿಕೆಯ ರಾಜಕೀಯ ಮತ್ತು ಸಾಮಾಜಿಕ ಇತಿಹಾಸ, ಕೌಟುಂಬಿಕತೆಯ ಚೌಕಟ್ಟಿಗೆ ಮುಖಾಮುಖಿಯಾಗಿ ನಿಲ್ಲುವ ಸಮತೆಯ ಸಮಾಜ, ಮನೆಯೊಳಗೆ ಶೌಚಾಲಯ ನಿರ್ಮಿಸಲು ತಡೆಯೊಡ್ಡುವ ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಇಂದಿಗೂ ಜೀವಂತವಾಗಿರುವ ಸನಾತನ ಸಂಪ್ರದಾಯ, ಪತ್ರ ಸಂಸ್ಕೃತಿಯ ಆಸ್ತತೆಯೋಂದು ಮರೆಯಾದ ಸನ್ನಿವೇಶ, ಆಂತಃಕರಣ ವಿಹೀನರಾಗುತ್ತಿರುವ ಇಂದಿನ ಯುವ ಪೀಳಿಗೆ, ಮಗಳು ತಾಯಾಗಿ, ತಾಯಿ ಮಗಳಾಗಿ ಸ್ಥಿತ್ಯಂತರಗೊಳ್ಳುವ ಬೆರಗು, ನೆನಪುಗಳೆ. ಹಿತವನ್ನು ಕಸಿಯುದ ಆಲ್ಬಮೆರ್ಸ್ ಮನಸ್ಥಿತಿ ಹೀಗೆ ತಂತಮ್ಮ ಜೀವನ ಕ್ರಮದಲ್ಲಿ ಕಂಡುಂಡ ಪರಿವರ್ತನೆಗಳನ್ನು ಇಲ್ಲಿ ಬರೆದ ಪ್ರತೀ ಲೇಖಕರೂ ವಿಶಾಲಾರ್ಥದಲ್ಲಿ ಗ್ರಹಿಸಿದ್ದಾರೆ..! ಈ ವಲಸೆ ನೆಲದ ಭಿನ್ನ ಸ್ವಭಾವಗಳನ್ನು ತನ್ನೊಳಗೆ ಹಂತಹಂತವಾಗಿ ಬಿಟ್ಟುಕೊಳ್ಳುತ್ತ ಮೆಲ್ಲಗೆ ಅರಳಿದ ಕತೆ ಕವಿತೆ ಲೇಖನ ಮಾಲೆಗಳ ಈ ವಿಶಿಷ್ಟ ಕೃತಿ, ಬದಲಾದ ಸಮಾಜದ ಜಾಗತಿಕ ಬಿಂಬಗಳನ್ನು ಕಟ್ಟಿಕೊಡುತ್ತಲೇ ಓದುಗರಲ್ಲಿ ಬಹುಮುಖ್ಯವಾದ ಪ್ರಶ್ನೆಗಳನ್ನು ಉದ್ದೀಪಿಸುತ್ತದೆ.’ ಎಂದಿದ್ದಾರೆ. 

ಲೇಖಕ, ಕತೆಗಾರ ವಸುಧೇಂದ್ರ ಪುಸ್ತಕದ ಬಗ್ಗೆ ಬರೆಯುತ್ತಾ ’ತಾನು ಹುಟ್ಟಿ ಬೆಳೆದ ನೆಲವನ್ನು ಬಿಟ್ಟು, ಮತ್ತೊಂದೆಡೆ ಬದುಕಿಗಾಗಿ ಹೋಗುವ ಪರಿ ಅನನ್ಯವಾದದ್ದು. ಇತಿಹಾಸದುದ್ದಕ್ಕೂ ಈ ಪ್ರಕ್ರಿಯೆ ನಿರಂತರವಾಗಿ ನಡೆದಿದೆ. ತನ್ನದಲ್ಲದ್ದನ್ನು ಒಪ್ಪಿಕೊಳ್ಳಲು ತೆರೆದ ಮನಸ್ಸು ಇರಬೇಕಾಗುತ್ತದೆ, ಯಾವುದೇ ಸಿನಿಕತನ, ಆತ್ಮಪ್ರಶಂಸೆಯಲ್ಲಿದ್ದವರು ವಲಸೆಯಂತಹ ಕಷ್ಟದ ಕೆಲಸವನ್ನು ಮಾಡಲಾರರು. ನಮ್ಮೂರಿನ ಶ್ರೇಷ್ಠತೆಯ ಮಾನದಂಡವನ್ನೆಲ್ಲಾ ಹಿನ್ನೆಲೆಗೆ ಸರಿಸಿ, ಮತ್ತೆ ಹೊಸ ಪ್ರಮಾಣಗಳನ್ನು ಕಲಿತು ಬದುಕು ಪ್ರಾರಂಭಿಸಬೇಕಾಗುತ್ತದೆ. ನಮ್ಮ ಶಕ್ತಿ ಮತ್ತು ದೌರ್ಬಲ್ಯಗಳೆರಡೂ ತಿಳಿಯುವುದು ಈ ಗಳಿಗೆಯಲ್ಲಿಯೇ! ಅಲ್ಲಿ ಗೆದ್ದದನು ಎಲ್ಲಿಯೂ ಗೆಲ್ಲಬಲ್ಲ’ ಎನ್ನುವ ಮಾತುಗಳೊಂದಿಗೆ ಮೆಚ್ಚುಗೆಯನ್ನು ಸಲ್ಲಸಿದ್ದಾರೆ. 

Related Books