ಬದುಕು ಬದಲಾಯಿಸಿದ ಕಥನಗಳು

Author : ಶೇಖರ್ ಗಣಗಲೂರು

Pages 151

₹ 160.00




Year of Publication: 2019
Published by: ನಿರುತ ಪಬ್ಲಿಕೇಷನ್ಸ್‌
Address: #326, 2ನೇ ಮಹಡಿ, ಸಿಂಡಿಕೇಟ್‌ ಬ್ಯಾಂಕ್‌ ಎದುರು, ಎಐಟಿ ಕಾಲೇಜು ಹತ್ತಿರ, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560056
Phone: 9980066890

Synopsys

ಬದುಕು ಬದಾಲಾಯಿಸಿದ ಕಥನಗಳು ಪುಸ್ತಕವು ಲೇಖಕರು ಕಂಡುಂಡ ಪರಿಸರದ ಕಥನಗಳೇ ಆಗಿವೆ. ಬಾಲ್ಯಾವಸ್ಥೆಯಲ್ಲಿ ಹಳ್ಳಿಯ ವಾತಾವರಣದಲ್ಲಿ, ಸಗಣ  ಸಾರಿಸಿದ ನೆಲದಲ್ಲಿ, ಹೊಲ, ಪ್ರಾಣ , ಪಕ್ಷಿಗಳ ಮಧ್ಯದಲ್ಲಿ ರೂಪುಗೊಂಡ ವ್ಯಕ್ತಿತ್ವ ಮುಂದೆ ಬೆಂಗಳೂರು ನಗರ ಕೊಡುವ ಐಷಾರಾಮದ ಸಕಲ ಆಧುನಿಕ ಸೌಕರ್ಯಗಳ ಬದುಕಿಗೆ ಮಾರ್ಪಾಡಾಗಿರುವ ನೈಜತೆಯನ್ನು ಈ ಹೊತ್ತಿಗೆಯಲ್ಲಿ ಆಡುಭಾಷೆಯ ಸಹಜ ಶೈಲಿಯಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.

About the Author

ಶೇಖರ್ ಗಣಗಲೂರು

ಶೇಖರ್ ಗಣಗಲೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಗಣಗಲೂರು ಗ್ರಾಮದವರು. ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮತ್ತು ಎಲ್.ಎಲ್.ಬಿ. ಯನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಬಿ.ಎಸ್ಸಿ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ (ಮಾನವ ಸಂಪನ್ಮೂಲ ವಿಭಾಗ) ಸೇವೆ ಸಲ್ಲಿಸುತ್ತಿದ್ದಾರೆ. ವ್ಯಾಯಾಮ, ಓದುವುದು, ಬರೆಯುವುದು, ಆಪ್ತಸಮಾಲೋಚನೆ, ಯುವಕರಿಗೆ ಮಾರ್ಗದರ್ಶನ ನೀಡುವುದು, ಗೆಳೆಯರೊಂದಿಗೆ ಚಿಂತನ-ಮಂಥನ, ಹಸು ಮತ್ತು ಕುರಿ ಕಾಯುವುದು ಹಾಗೂ ಅಡುಗೆ ಮಾಡುವುದು ಶೇಖರ್ ಅವರ ನೆಚ್ಚಿನ ಹವ್ಯಾಸಗಳು. ‘ಬದುಕು ಬದಲಾಯಿಸಿದ ಕಥನಗಳು’ - ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಈ ಕೃತಿ ಬಹುಮುಖ್ಯವೆನಿಸುತ್ತದೆ. ...

READ MORE

Related Books