ಬದುಕು-ಭಾವದ ಕತೆಗಳು

Author : ಬಿ. ಜನಾರ್ದನ ಭಟ್

Pages 149

₹ 60.00
Year of Publication: 2007
Published by: ಪುತ್ತೂರು ಕರ್ನಾಟಕ ಸಂಘ
Address: ಪುತ್ತೂರು

Synopsys

ಬಿ. ಜನಾರ್ದನ ಭಟ್ ಅವರ ‘ಬದುಕು ಭಾವದ ಕತೆಗಳು’ ಸಂಪಾದಿತ ಕತೆಗಳಾಗಿವೆ. ವಿಭಾ ಕೃಷ್ಣಪ್ರಕಾಶ ಉಳಿತ್ತಾಯ ಅವರು ಈ ಕೃತಿಯ ಬಗ್ಗೆ ಬರೆದಿದ್ದು, ಬಿ.ಜನರ‍್ದನ ಭಟ್ ಅವರು ಸಂಪಾದಕರಾಗಿರುವ ಈ ಪುಸ್ತಕವನ್ನು ಪುತ್ತೂರು ಕರ್ನಾಟಕ ಸಂಘದವರು ಪ್ರಕಟಿಸಿದ್ದಾರೆ. ದಕ್ಷಿಣ ಕನ್ನಡ ಉಡುಪಿ ಕೊಡಗು ಜಿಲ್ಲೆಯ ಕೆಲವು ಕಥೆಗಾರರ ಉತ್ತಮ ಕಥೆಗಳನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ. ಇಲ್ಲಿರುವ ಒಂದೊಂದು ಕಥೆಗಳೂ ಭಾವನಾ ಪ್ರಧಾನವಾಗಿದ್ದು ಒಂದೊಂದು ಭಾವವನ್ನು ಉದ್ದೀಪಿಸುತ್ತದೆ. ಇಲ್ಲಿ ಬರುವ ಹದಿನಾಲ್ಕು ಕತೆಗಳೂ ಆಯಾಯ ಲೇಖಕರ ಅತ್ಯುತ್ತಮ ಕತೆಗಳ ಪಟ್ಟಿಯಲ್ಲಿರುವಂತದ್ದು ಎಂದಿದ್ದಾರೆ. ಇಲ್ಲಿರುವ ಕತೆಗಳೆಂದರೆ-.ವೈದ್ಯರ ಒಗ್ಗರಣೆ - ಪಂಜೆ ಮಂಗೇಶರಾಯರು,.ಧನಿಯರ ಸತ್ಯನಾರಾಯಣ - ಕೊರಡ್ಕಲ್ ಶ್ರೀನಿವಾಸ ರಾವ್, ಚೆನ್ನೆಮಣೆ - ಸೇಡಿಯಾಪು ಕೃಷ್ಣಭಟ್ಟ,ಅದ್ದಿಟ್ಟು - ಕಡೆಂಗೋಡ್ಲು ಶಂಕರಭಟ್ಟ,.ವಾಣಿಯ ಸಮಸ್ಯೆ - ಕೊಡಗಿನ ಗೌರಮ್ಮ,ಅವಳ ಉದ್ಧಾರ - ಗಿರಿಬಾಲೆ(ಸರಸ್ವತಿ ಬಾಯಿ ರಾಜವಾಡೆ),.ಗಂಗುವಿನ ಹರಕೆ- ಭಾರತೀಸುತ (S.ಖ. ನಾರಾಯಣ ರಾವ್),ಮಹಾದೇವನ ಮಣಿಮಕುಟ - ನಿರಂಜನ(ಶಿವರಾಯ),ಆನೆಗುಂಡಿಯ ಕಥೆ- ಕಾಕೆಮಾನಿ(ಬಿ.ಡಿ. ಸುಬ್ಬಯ್ಯ),ಹುಲಿ ಜೋಯಿಸರ ಕಥೆ - ಬಾಗಲೋಡಿ ದೇವರಾಯ,ಅಮ್ಮಚ್ಚಿಯೆಂಬ ನೆನಪು- ವೈದೇಹಿ,ನೀರ ಮೇಲೆ ನಡೆಯುವವನು - ಶಾಂತರಾಮ ಸೋಮಯಾಜಿ,ಮೀನು ಮಾರುವವನು - ಬೊಳುವಾರು ಮಹಮ್ಮದ್ ಕುಂಞಿ,ಪ್ರಾಣಪಕ್ಷಿ - ಅಬ್ದುಲ್ ರಶೀದ್ . 2003 ರಲ್ಲಿ ಮೊದಲ ಮುದ್ರಣಗೊಂಡ ಈ ಪುಸ್ತಕ 2007ರಲ್ಲಿ ಮರು ಮುದ್ರಣಗೊಂಡಿದೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books