ಬದುಕು ಪುಕ್ಸಟ್ಟೆ ಅಲ್ಲ

Author : ರಾಘವೇಂದ್ರ ಈ ಹೊರಬೈಲು

Pages 120

₹ 100.00




Year of Publication: 2019
Published by: ಗೋಮಿನಿ ಪ್ರಕಾಶನ
Address: ಶ್ರೀ ವೀರಭದ್ರ ಸ್ವಾಮಿ ನಿಲಯ, 1ನೇ ಮುಖ್ಯರಸ್ತೆ,3ನೇ ಅಡ್ಡರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ, ತುಮಕೂರು-572102
Phone: 9986692342

Synopsys

ಬದುಕು ಪುಕ್ಸಟ್ಟೆ ಅಲ್ಲ-ಲೇಖಕ ರಾಘವೇಂದ್ರ ಈ ಹೊರಬೈಲು ಅವರು ವ್ಯಕ್ತಿತ್ವ ವಿಕಸನ ಕುರಿತಂತೆ ಬರೆದ ಲೇಖನಗಳ ಸಂಗ್ರಹ ಕೃತಿ. ಬದುಕು ಯಾವಾಗಲೂ ಪುಕ್ಸಟ್ಟೆ ಸಿಗುವುದಿಲ್ಲ. ಅದಕ್ಕೊಂದು ಬೆಲೆ ಇದೆ. ಹಾಗಂತ ಬೆಲೆ ಕಟ್ಟಲಾಗುವುದಿಲ್ಲ. ಮನುಷ್ಯನಾದವನಲ್ಲಿ ದೌರ್ಬಲ್ಯಗಳಿರುವುದು, ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪಾಗುವುದೂ ಸಹಜ. ಆ ದೌರ್ಬಲ್ಯ, ತಪ್ಪುಗಳ ಘಟನೆಗಳನ್ನೇ ಇಟ್ಟುಕೊಂಡು, ಅವುಗಳನ್ನು ತಿದ್ದಿಕೊಳ್ಳುವ ಮಾರ್ಗವನ್ನೂ ಕುತೂಹಲಭರಿತ ಕಥಾ ರೂಪದಲ್ಲಿ ಹೆಣೆದಿದ್ದು ಕೃತಿಯ ವೈಶಿಷ್ಟ್ಯ. 

ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಸದಾಶಿವ ಸೊರಟೂರು ‘ಜಗತ್ತಿನ ಕಡೆ ಮುಖ ಮಾಡಿ ಕೂತು ಅದರೊಂದಿಗೆ ತನ್ನ ಬದುಕಿನೊಳಗಿನ ಅನುಭವದ ಸರಕುಗಳನ್ನು ತಾಳೆ ಹಾಕಿಕೊಳ್ಳುವ ಹೊತ್ತಿಗೆ ಕಳೆದ ಒಂದೊಂದು ಕ್ಷಣಗಳು ಕೂಡಾ ನನಗೊಂದು ಪಾಠವಾಗಿ ಬಿಟ್ಟಿತಲ್ಲ ಅನಿಸಿಬಿಡುತ್ತದೆ. ಬದುಕಿನ ಅಂಥಹ ಹತ್ತಾರು ಹಸಿಹಸಿ ಅನುಭವಗಳೊಂದಿಗೆ ರಾಘವೇಂದ್ರ ಈ ಹೊರಬೈಲು ಅವರು ಈ ಪುಸ್ತಕದಲ್ಲಿ ನಿಮ್ಮೊಂದಿಗೆ ಮುಖಾಮುಖಿಯಾಗಿದ್ದಾರೆ. ಅನುಭವಗಳು ಕೊಟ್ಟು ಹೋದ ಬದುಕಿನ ಪಾಠವನ್ನು ಪಕ್ಕದಲ್ಲಿ ಕೂತು ಆತ್ಮೀಯವಾಗಿ ಹೇಳುವಂತೆ ನಿರೂಪಿಸಿದ್ದಾರೆ. ಅರೆ, ಇದು ನನ್ನದು ಕೂಡಾ ಅನ್ನಿಸುವಂತೆ ಬರೆದಿದ್ದಾರಲ್ಲ ಅದು ಅವರ ಶಕ್ತಿ. ಓದುತ್ತಾ ಹೋದಂತೆ ಅನುಭವಗಳು ಪಾಠದಂತೆ ಆವರಿಸಿಕೊಳ್ಳುವ ಪರಿ ಅದ್ಭುತವಾಗಿದೆ. ಆ ಕಲೆ ಅವರಿಗೆ ಸೊಗಸಾಗಿ ಸಿದ್ಧಿಸಿದೆ’ ಎಂದು .ಪ್ರಶಂಸಿಸಿದ್ದಾರೆ. 

About the Author

ರಾಘವೇಂದ್ರ ಈ ಹೊರಬೈಲು
(18 June 1985)

ರಾಘವೇಂದ್ರ ಈ. ಹೊರಬೈಲು ಅವರು ಶಿವಮೊಗ್ಗ ಜಿಲ್ಲೆಯ ಹಾಗೂ ಅದೇ ತಾಲೂಕಿನ ಹೊರಬೈಲು ಗ್ರಾಮದವರು. ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರು. ಇವರ ಲೇಖನಗಳು, ನ್ಯಾನೋ ಕಥೆಗಳು, ಕಥೆಗಳು, ಮಕ್ಕಳ ಕಥೆಗಳು, ಕವನ, ಮಕ್ಕಳ ಕವನಗಳು, ಚುಟುಕುಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು:  'ಅಂತರಂಗದುಲಿ' (ಕವನ ಸಂಕಲನ), 'ಚೊಂಬೇಶ ಮುಕ್ತಕ' (ಚುಟುಕು ಸಂಕಲನ) ಹಾಗೂ 'ಬದುಕು ಪುಕ್ಸಟ್ಟೆ ಅಲ್ಲ' (ವ್ಯಕ್ತಿತ್ವ ವಿಕಸನ ಲೇಖನಗಳು) ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books