ಬದುಕು ಸಮಾಜ ಮತ್ತು ಮೌಲ್ಯಗಳು

Author : ನಾ. ದಿವಾಕರ

Pages 704

₹ 650.00




Year of Publication: 2021
Published by: ಬುಕ್ ಪ್ಯಾರಡೈಸ್
Address: #909/1ಬಿ, ಪದ್ಮ, 1ನೇ ಮಹಡಿ, 1ನೇ ಮುಖ್ಯರಸ್ತೆ, ಲಕ್ಷ್ಮೀಪುರಂ, ಮೈಸೂರು- 570004

Synopsys

‘ಬದುಕು ಸಮಾಜ ಮತ್ತು ಮೌಲ್ಯಗಳು’ ಲೇಖಕ ನಾ. ದಿವಾಕರ ಅವರ ಲೇಖನ ಸಂಕಲನ. ಕೃತಿಯ ಪರಿಚಯಿಸುತ್ತಾ ಕೋಮುವಾದ, ಮತಾಂಧತೆ ಮತ್ತು ಮತೀಯ ರಾಜಕಾರಣದೊಂದಿಗೆ, ಅಸ್ಮಿತೆಯ ರಾಜಕಾರಣದ ಬೇರುಗಳು ಗಟ್ಟಿಯಾಗುತ್ತಿರುವುದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಈ ಎಲ್ಲಾ ಆಯಾಮಗಳ ಹಿನ್ನೆಲೆಯಲ್ಲಿ ನಾನು ಕಳೆದ ಹಲವು ವರ್ಷಗಳಲ್ಲಿ ಬರೆದಂತಹ ಸಾಂದರ್ಭಿಕ ಲೇಖನಗಳನ್ನು ಸಂಗ್ರಹ ರೂಪದಲ್ಲಿ ಓದುಗರ ಮುಂದಿರಿಸುತ್ತಿದ್ದೇನೆ ಎಂದಿದ್ದಾರೆ ಲೇಖಕ ನಾ. ದಿವಾಕರ. ಜೊತೆಗೆ ಆಯಾ ಕಾಲಘಟ್ಟದ ರಾಜಕೀಯ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿನಲ್ಲಿಟ್ಟುಕೊಂಡೇ ಬರೆದ ಈ ಲೇಖನಗಳು ಇಂದಿಗೂ ಪ್ರಸ್ತುತ ಎನಿಸಬಹುದು ಎಂಬ ಆಶಾಭಾವನೆಯೂ, ಒಬ್ಬ ಲೇಖಕನಾಗಿ ನನ್ನೊಳಗಿದ್ದರೆ ತಪ್ಪೇನಿಲ್ಲ ಎಂದು ಭಾವಿಸುತ್ತೇನೆ, ದೇಶದ ಆಡಳಿತದ ಹೊಣೆ ಹೊತ್ತ ರಾಜಕೀಯ ಪಕ್ಷಗಳ ಮತ್ತು ನಾಯಕರ ಹೊಣೆಗಾರಿಕೆ ಮತ್ತು ಕರ್ತವ್ಯಗಳನ್ನು ಬೆಟ್ಟು ಮಾಡಿ ತೋರಿಸುವ ನಿಟ್ಟಿನಲ್ಲೂ ಈ ಲೇಖನಗಳು ಬರೆಯಲ್ಪಟ್ಟಿರುವುದು ಸತ್ಯ. ಮುಂದೊಂದು ದಿನ ಭಾರತ ವಿಶ್ವಗುರು ಎನಿಸಿಕೊಳ್ಳುವುದೇ ಆದರೆ ಅದು ನಡೆದು ಬಂದ ಹಾದಿಯನ್ನು ದಾಖಲಿಸುವ ಪ್ರಯತ್ನ ನನ್ನ ಲೇಖನಗಳಲ್ಲಿದೆ ಎಂದು ನಂಬಿದ್ದೇನೆ ಎಂದಿದ್ದಾರೆ.

About the Author

ನಾ. ದಿವಾಕರ

ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...

READ MORE

Related Books