ಬಹುಜನ ಚಳವಳಿಯ ಚರಿತ್ರೆ ಸಂಪುಟ-4

Author : ವಿ. ಮುನಿವೆಂಕಟಪ್ಪ

Pages 580

₹ 580.00




Year of Publication: 2013
Published by: ಎಸ್.ಎಂ.ಎಸ್. ಪ್ರಕಾಶನ
Address: # 61, 6ನೇ ಅಡ್ಡರಸ್ತೆ, ಹೆಬ್ಬಾಳ ಮುಖ್ಯರಸ್ತೆ, ಕಾವೇರಿ ಗ್ರಾಮೀಣ ಬ್ಯಾಂಕ್ ಹತ್ತಿರ, ಮಂಚೇಗೌಡನಕೊಪ್ಪಲು, ಮೈಸೂರು-570017

Synopsys

ಡಾ. ವಿ. ಮುನಿವೆಂಕಟಪ್ಪ ಅವರ ವೈಚಾರಿಕ ಸಂಪಾದಿತ ಕೃತಿ-ಬಹುಜನ ಚಳವಳಿಯ ಚರಿತ್ರೆ ಸಂಪುಟ-4. ಲೇಖಕರು ಸ್ವತಃ ಹೋರಾಟದ ಹಿನ್ನೆಲೆಯವರು. ಬಹುಜನ ಹಾಗೂ ದಲಿತ ಚಳವಳಿಯಲ್ಲಿ ಭಾಗಿಯಾಗಿ ಅದರ ಏಳು-ಬೀಳುಗಳನ್ನು ಕಂಡವರು. ಹೋರಾಟವು ನಡೆಯುವ ಹಾದಿಯನ್ನು ತಮ್ಮ ತೀಕ್ಷ್ಣ ಮನಸ್ಸಿನೊಂದಿಗೆ ವಿಶ್ಲೇಷಿಸಿದ ಒಳನೋಟಗಳು ಇಲ್ಲಿವೆ. ಸಮಾಜದಲ್ಲಿ ಸಮಾನತೆ ತರುವ ಉದ್ದೇಶ ಅಂಬೇಡ್ಕರ್ ಅವರಿಗೆ ಇತ್ತೇ ವಿನಃ ದಲಿತರ ರಾಜಕಾರಣವನ್ನು ಆರಂಭಿಸುವ ಚಿಂತನೆ ಅವರದ್ದು ಆಗಿರಲಿಲ್ಲ ಎಂಬ ಪ್ರಖರ ಪ್ರತಿಪಾದನೆಗಳು ಇಲ್ಲಿ ಲೇಖನಗಳ ರೂಪದಲ್ಲಿ ಸಂಗ್ರಹಗೊಂಡಿವೆ. ಭಾರತದ ಅಸಮಾನತೆಯ ಸಮಾಜದ ಒಟ್ಟು ವಿಶ್ಲೇಷಣೆಯ ಸೂಕ್ಷ್ಮ ಒಳನೋಟವನ್ನು ಈ ಕೃತಿ ನೀಡುತ್ತದೆ. ಡಾ. ಕೆ. ಸದಾಶಿವ ಅವರು ಮೌಲಿಕ ಮುನ್ನುಡಿ ಬರೆದಿದ್ದು, ಲೇಖನಗಳ ವೈಚಾರಿಕತೆಯನ್ನು ಪ್ರಶಂಸಿಸಿದ್ದಾರೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books