ಬಹುಮಾನಿತ ಕೃತಿಗಳು 2015

Author : ಸತ್ಯಾ ಎಸ್.

Pages 68

₹ 30.00




Year of Publication: 2017
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕನ್ನಡ ಭವನ, ಜೆ. ಸಿ. ರಸ್ತೆ, ಬೆಂಗಳೂರು- 560002
Phone: 08022211730

Synopsys

`ಬಹುಮಾನಿತ ಕೃತಿಗಳು 2015' ಕೃತಿಯು ಸತ್ಯಾ ಎಸ್‌ ಅವರ ಸಂಪಾದಿತ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಬಹುಮಾನಿತ ಕೃತಿಗಳ ವಿಚಾರವನ್ನು ಒಳಗೊಂಡ ಸಂಕಲನವಾಗಿದೆ. ಈ ಕೃತಿಯ ಸಂಪಾದಕರ ಟಿಪ್ಪಣಿಯಲ್ಲಿ ಸತ್ಯಾ ಎಸ್. ಅವರು ಹೀಗೆ ಹೇಳಿದ್ದಾರೆ: 16 ಪ್ರಕಾರಗಳಲ್ಲಿ ಪುಸ್ತಕ ಬಹುಮಾನಗಳಿಗೆ ಹಾಗೂ 7 ಪ್ರಕಾರಗಳಲ್ಲಿ ದತ್ತಿನಿಧಿ ಬಹುಮಾನಗಳಿಗೆ ಅರ್ಹವಾದ ಒಟ್ಟು 23 ಕೃತಿಗಳು ಹಾಗೂ 23 ಲೇಖಕರ ಕುರಿತ ತೀರ್ಪುಗಾರರು ನೀಡಿರುವ ಅಭಿಪ್ರಾಯಗಳ ಸಂಗ್ರಹಿತ ರೂಪವಾಗಿದೆ. ಲೇಖಕರು ಹೇಳುವಂತೆ ಪುಸ್ತಕದಲ್ಲಿಅಕಾಡೆಮಿಯ ಆಶಯ ಮತ್ತು ನಡುವಳಿಕೆಗೆ ಪೂರಕವಾಗಿ ತೀರ್ಪುಗಾರರ ಅಭಿಪ್ರಾಯದ ಮುಖ್ಯಾಂಶಗಳನ್ನು ಮಂಡಿಸಲಾಗಿದೆ. ಹಾಗೂ ಪ್ರತಿಯೊಂದು ಕೃತಿ ಮತ್ತು ಲೇಖಕರ ಬಗ್ಗೆ ತಲಾ ಮೂರು ಜನ ತೀರ್ಪುಗಾರರು ನೀಡಿರುವ ಅಭಿಪ್ರಾಯಗಳಲ್ಲಿ ಪುನರುಕ್ತಿಯಾಗದಂತೆ ಆಯ್ದಭಾಗಗಳನ್ನು ಹೆಕ್ಕಿ ನೀಡಲಾಗಿದೆ . ಪುಸ್ತಕದ ಪರಿವಿಡಿಯಲ್ಲಿ ಕಾವ್ಯ, ಕಾದಂಬರಿ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ, ಸಾಹಿತ್ಯ ವಿಮರ್ಷೆ, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಮಾನವಿಕ, ಸಂಶೋಧನೆ, ಅನುವಾದ 1-ಸೃಜನಶೀಲ, ಅನುವಾದ ೨-ಸೃಜನೇತರ, ಸಂಕೀರ್ಣ ಹಾಗೂ ಲೇಖಕರ ಮೊದಲ ಸ್ವತಂತ್ರ ಕೃತಿ ಎಂಬಂತೆ ಒಟ್ಟು 16 ಪ್ರಕಾರಗಳಿವೆ ಎಂದಿದೆ.

About the Author

ಸತ್ಯಾ ಎಸ್.

ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಇರುವ ಸತ್ಯಾ ಎಸ್ ಆವರು ಮೂಲತಃ ಪತ್ರಕರ್ತೆ. ಮುಖ್ಯವಾಹಿನಿ ಪತ್ರಿಕೋದ್ಯಮ ತೊರೆದು ಸ್ವಲ್ಪ ಕಾಲ ಸಂಶೋಧನೆ, ಬರವಣಿಗೆಗಳಲ್ಲಿ ತೊಡಗಿಸಿಕೊಂಡವರು. ಇತ್ತೀಚಿನ ವರ್ಷಗಳಲ್ಲಿ ಸ್ವತಂತ್ರ ಸಂವಹನ ಸಮಾಲೋಚಕರಾಗಿ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್, ಶಿಕ್ಷಣ, ಆರೋಗ್ಯ, ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳಾಪರ ಹಾಗೂ ಕೋಮುವಾದ ವಿರೋಧಿ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆಯನ್ನು ದಾಖಲಿಸುವ ಪ್ರಯತ್ನ ನಡೆಸಿದ್ದಾರೆ. ’ನೆಲದ ಸಿರಿ’ ಇವರ ಸಂಪಾದಿತ ಕೃತಿ. ...

READ MORE

Related Books