ಬಾಳಿಗೆ ಬುತ್ತಿ

Author : ಅಬ್ಬಾಸ್ ಅಲಿ ಅಬ್ದುಲ್ ಸಾಬ್ ನದಾಫ್

Pages 56

₹ 75.00




Year of Publication: 2015
Published by: ಪ್ಯಾರಿ ಪ್ರಕಾಶನ
Address: ಪ್ಯಾರಿ ಮಂಜಿಲ್, ಆದರ್ಶನಗರ, ಅಫಜಲಪುರ, ಜಿಲ್ಲೆ ಕಲಬುರಗಿ

Synopsys

ಬೆಂಗಳೂರು ಹಾಗೂ ಕಲಬುರಗಿ ಆಕಾಶವಾಣಿ ಮೂಲಕ ಬಿತ್ತರಗೊಳಿಸಿದ  ಕವಿ ಹಾಗೂ ಲೇಖಕ ಅಬ್ಬಾಸ್ ಅಲಿ ಅಬ್ದುಲ್ ಸಾಬ್ ನದಾಫ್ ಅವರ ಚಿಂತನೆಗಳ ಸಂಗ್ರಹ ಕೃತಿ-ಬಾಳಿಗೆ ಬುತ್ತಿ. ಭಾರತೀಯ ಸಂಸ್ಕೃತಿಯಲ್ಲಿ ಮಿಂದು ಹೋಗಿರುವ ನೈತಿಕ ಮಾರ್ಗ ಬಿತ್ತರಿಸುತ್ತವೆ. ಅಮೂಲ್ಯ ಸ್ನೇಹ ಹಾಗೂ ದೈನಂದಿನ ಕಷ್ಟಸುಖಗಳಲ್ಲಿ ಸ್ಪಂದಿಸುವ ಮನೋಭಾವ, ಗುಣ ನೋಡಿ ಗೆಳೆತನ ಮಾಡು, ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಇಂತಹ ನಾಣ್ನುಡಿಗಳು ಅರ್ಥಪೂರ್ಣವಾಗಿ ಈ ಕೃತಿಯಲ್ಲಿ ಮೂಡಿಬಂದಿವೆ. ಪ್ರಾಥಮಿಕ ಶಿಕ್ಷಣವು ವ್ಯಕ್ತಿಯ ಪರಿಪೂರ್ಣ ವಿಕಾಸಕ್ಕೆ ಪೂರಕ. ಸ್ವಾವಲಂಬನೆ, ಕಾಯಕ, ನಿಷ್ಠೆ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವಂತಿರಬೇಕು.ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸೈದ್ಧಾಂತಿಕ ನೆಲೆಗಟ್ಟಾದ  ಶಿಕ್ಷಣ,ಸಂಘಟನೆ, ಹೋರಾಟ, " ಬಾಳಿಗೆ ಬುತ್ತಿ " ಚಿಂತನೆಗೆ ದಾರಿ ದೀಪಗಳು ಎಂದು  ಹೇಳಿದ್ದಾರೆ. ಇನ್ನುಳಿದ ಚಿಂತನೆಯ ಚಿಲುಮೆಗಳು 'ಸುಖ ಶಾಂತಿಯ ' 'ಸುಖವೂ ಸುಡುವ ಬಿಸಿಲಿನಂತೆ ದುಃಖವು ಬೀದಿಯ ನೆರಳಿನಂತೆ' ಸುಖ-ದುಃಖ ಸಮಾನವಾಗಿ ಎದುರಿಸುವ ಮಾಧುರ್ಯತೆ ತೋರಿದ್ದಾರೆ. ಹೀಗೆ  ವೈಚಾರಿಕತೆ, ಭಾರತ ಬಿಟ್ಟು ತೊಲಗಿ, ಅಪಘಾತಗಳು, ಡಾ.ಬಿ. ಆರ್. ಅಂಬೇಡ್ಕರರು, ಪ್ರಗತಿಪರ ರೈತರು, ಹಾಸ್ಯ, ಅನುತ್ತೀರ್ಣತೆ, ಮೌಲ್ಯಶಿಕ್ಷಣ, ಜೀವನೋತ್ಸಾಹ, ಕುಟುಂಬಗಳು, ಆತ್ಮವಿಶ್ವಾಸ, ಕೋಮುಸೌಹಾರ್ದತೆ,  ಕನಸುಗಳು, ಒಳಗೊಂಡಂತೆ  25 ಬಿಡಿ ಚಿಂತನ ಬರಹಗಳು  ಆಯಾ ಸಾಂದರ್ಭಿಕ ಮತ್ತು ಕಾಲಾವಧಿಗಳಿಗನುಗುಣವಾಗಿ ತಮ್ಮದೇ ಆಗಿರುವ ನಿಗದಿತ ಅವಧಿಗೆ ಕಾರ್ಯ ನಿರ್ವಹಿಸುವ ಶಕ್ತಿ ಚಿಂತನೆಯಲ್ಲಿ ಅಡಗಿದೆ. 

 

About the Author

ಅಬ್ಬಾಸ್ ಅಲಿ ಅಬ್ದುಲ್ ಸಾಬ್ ನದಾಫ್
(26 July 1962)

ಲೇಖಕ ಅಬ್ಬಾಸ್ ಅಲಿ ಅಬ್ದುಲ್ ಸಾಬ್ ನದಾಫ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾತೋಳಿ ಗ್ರಾಮದವರು. ಎಂ.ಎ. ಕನ್ನಡ ಸ್ಮಾತಕೋತ್ತರ ಪದವೀಧರರು. ಅಫಜಲಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ, ಕಲಬುರಗಿ ಸಾಹಿತ್ಯ ಮಂಟಪದ ಕಾರ್ಯದರ್ಶಿ, ಅಫಜಲಪುರದ ಸಾಹಿತ್ಯ ವೇದಿಕೆ ಕಾರ್ಯದರ್ಶಿ, ಅಫಜಲಪುರ ತಾಲೂಕಿನ ಕರಜಗಿಯಲ್ಲಿ ನಡೆದ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷರಾಗಿ, ಕರ್ನಾಟಕ ಜನಪದ ಪರಿಷತ್ತಿನ ತಾಲೂಕು ಆಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ, ಮಾತೋಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿದ್ದಾರೆ. ಕಲಬುರಗಿ, ಬೆಂಗಳೂರು ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರವಾಗಿವೆ. ಕವಿಗೋಷ್ಠಿ, ...

READ MORE

Related Books