ಬಾಳಿಗೊಂದು ಮಾತು

Author : ಮೋಹನ್ ವೆರ್ಣೇಕರ್



Published by: ದೀಪ್ತಿ ಪಬ್ಲಿಕೇಶನ್ಸ್‌
Address: ಕೊತಪೇಟೆ, ತೆನಾಲಿ, ಗುಂಟೂರು, ಆಂಧ್ರಪ್ರದೇಶ- 522201
Phone: 086442 28465

Synopsys

ಲೇಖಕ ಮೋಹನ್‌ ವೆರ್ಣೇಕರ್‌ ಅವರ ಲೇಖನ ಕೃತಿ ʻಬಾಳಿಗೊಂದು ಮಾತುʼ. ಪುಸ್ತಕವು ಯಶಸ್ವಿ ಬದುಕಿಗೆ ಮಾರ್ಗದರ್ಶಕವಾಗುವ ಲೇಖನಗಳನ್ನು ಹೊಂದಿದೆ. ವಿಜ್ಞಾನ ಲೇಖಕರಾದ ಸಾತನೂರು ದೇವರಾಜ್‌ ಅವರು ಪುಸ್ತಕದ ಬೆನ್ನುಡಿಯಲ್ಲಿ, “ಕರ್ನಾಟಕ ರಾಜ್ಯ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತ ಚುಕ್ಕಿಗಳ ಚಿತ್ರಗಳನ್ನು ಸೃಜಿಸುವ ಮತ್ತು ಬರವಣಿಗೆಗೆ ತಮ್ಮನ್ನು ಕೊಡಗಿಸಿಕೊಂಡವರು ಮೋಹನ್‌ ವೆರ್ಣೇಕರ್ ಅವರು. ಕನ್ನಡವನ್ನು ಶ್ರೀಮಂತಗೊಳಿಸಿದ ಸಾಹಿತಿಗಳು, ಕವಿಗಳಿಗೆ ಚುಕ್ಕಿಯ ಮೂಲಕ ನುಡಿನಮನಗಳನ್ನು ಸಲ್ಲಿಸಿದವರು. ಅವರು ಸೃಜಿಸಿದ ಚುಕ್ಕಿ ಚಿತ್ರಗಳನ್ನು ಒಮ್ಮೆ ಅವಲೋಕಿಸಿದರೆ ಸಾಹಿತಿಗಳ ಬಗ್ಗೆ ಅವರಿಗಿರುವ ಅಭಿಮಾನ ಪ್ರೀತ್ಯಾಧಾರಕಗಳನ್ನು ಕಾಣಬಹುದು. ಮನ್ನಣೆ, ಪ್ರಶಸ್ತಿ ಪ್ರಚಾರಗಳಿಂದ ಬಹಳ ದೂರ ಇರಬಯಸುವ, ಸದ್ದು-ಗದ್ದಲವಿಲ್ಲದೆ ಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುವುದು ಮೋಹನ್ ವರ್ಣೇಕರ್‌ ಅವರಿಗೆ ಬಲು ಇಷ್ಟ. ಸಾರಸ್ವತ ಲೋಕದಲ್ಲಿ ಇಂತಹ ಸರಳ, ಸಜ್ಜನರು ಅಪರೂಪವಾಗುತ್ತಿರುವುದು ಮಾತ್ರ ದುರಂತ. ಪ್ರಸ್ತುತ 'ಬಾಳಿಗೊಂದು ಮಾತುʼ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೃತಿ. ಇತ್ತೀಚೆಗಂತೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಬಹುಪೂರ ಸಾಹಿತ್ಯ ಹೊರ ಬಂದಿದೆ. ಬಾಳಿಗೊಂದು ಮಾತು ಈ ಕೃತಿಗಳಿಗಿಂತ ಭಿನ್ನ ವಿಶಿಷ್ಟ ಕೃತಿ. ಭಾಷೆ ಸರಳವಾಗಿರುವುದರ ಜೊತೆಗೆ ಓದುಗರೊಂದಿಗೆ ಆಪ್ತವಾಗಿ ಸಂವಾದಗೊಳ್ಳುತ್ತಾ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಸಾಂತ್ವನ ನೀಡುವ ಕೃತಿ” ಎಂದು ಹೇಳಿದ್ದಾರೆ.

About the Author

ಮೋಹನ್ ವೆರ್ಣೇಕರ್
(22 June 1950)

ಮೋಹನ್‌ ವರ್ಣೇಕರ್ ಅವರದ್ದು ಕಲೆ ಹಾಗೂ ಸಾಹಿತ್ಯ ಎರಡೂ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸಪಟ್ಟಣದಲ್ಲಿ 1950 ಜೂನ್ 22ರಂದು ಜನಿಸಿದರು. ತಂದೆ ವಾಸುದೇವ ಶೇಟ್‌, ತಾಯಿ ತುಳಸಿಬಾಯಿ. ಬಿ.ಎ. ಪದವಿಯೊಂದಿಗೆ ಟೈಪಿಂಗ್‌ ಮತ್ತು ಶೀಘ್ರಲಿಪಿಯಲ್ಲಿ ರ್‍ಯಾಂಕ್‌ ಪಡೆದಿದ್ದಾರೆ. ಕರ್ನಾಟಕ ವಿಧಾನ ಸಭೆಯ ಸಚಿವಾಲಯದಲ್ಲಿ ಅಭಿಲೇಖನಾಧಿಕಾರಿಯಾಗಿ (RECORDING OFFICER) ಸೇವೆಗೈದು ಸ್ವಯಂ ನಿವೃತ್ತಿ. ಪ್ರಸ್ತುತ ಮೈಸೂರಿನಲ್ಲಿ ನೆಲೆ. ಪ್ರಶಸ್ತಿ, ಪ್ರಾಪ್ತಿ, ಪ್ರೇಮಿಸಿದವರು, ಅವಳು ಕ್ಷಮಾತೀತಳು, ನರಸಿಂಹ ದೇವರಿಗಿಟ್ಟ ಚಿನ್ನದ ಕಿರೀಟ  ಅವರ ಪ್ರಮುಖ ಕತಾ ಸಂಕಲನಗಳು. ಅವರ ಮೊದಲ ಕಾದಂಬರಿ ‘ದಿಕ್ಕು’. ಪ್ರೀತಿ-ಪ್ರೇಮಗಳ ನಡುವೆ, ಸ್ವರ್ಣ ಮಂದಾರ, ಕಪ್ಪುಬಾನಲ್ಲಿ ಚಂದಿರ ಅವರ ಮತ್ತಿತರ ಕಾದಂಬರಿಗಳು. ...

READ MORE

Related Books