ಬಳ್ಳಾರಿ ವಿಲೀನ ಮಹತ್ವದ ದಾಖಲೆಗಳು

Author : ವಿವಿಧ ಲೇಖಕರು

Pages 320

₹ 300.00




Year of Publication: 2023
Published by: ಕನ್ನಡ ಅಭಿವೃದ್ದಿ ಪ್ರಾಧಿಕಾರ
Address: ವಿಧಾನಸೌಧ, ಬೆಂಗಳೂರು
Phone: 08022289773

Synopsys

ಬಳ್ಳಾರಿ ವಿಲೀನ ಮಹತ್ವದ ದಾಖಲೆಗಳು ವೀರಶೆಟ್ಟಿ ಬಿ.ಗಾರಂಪಳ್ಳಿ ಮತ್ತು ಮೃತ್ಯುಂಜಯ ರುಮಾಲೆ ಅವರ ಸಂಪಾದಕತ್ವದ ಕೃತಿಯಾಗಿದೆ. ಮೈಸೂರು ಸಂಸ್ಥಾನದಲ್ಲಿ, ಬಳ್ಳಾರಿ ವಿಲೀನವಾದದ್ದು ಏಕೀಕರಣದಲ್ಲಿ ಮಹತ್ವದ ಹೆಜ್ಜೆ, ಭಾಷಾವಾರು ಪ್ರಾಂತ ರಚನೆಗೆ ಇಪ್ಪತ್ತನೆಯ ಕರ್ನಾಟಕ ಶತಮಾನದ ಪ್ರಾರಂಭದಿಂದ ಒತ್ತಾಯವಿದ್ದರೂ ಅದನ್ನು ಪಟ್ಟು ಹಿಡಿದು ಸಾಧಿಸಿದ್ದು. ಬಳ್ಳಾರಿಯ ಅನತೆ, ಬಳ್ಳಾರಿಯ ಏಳು ತಾಲ್ಲೂಕುಗಳಲ್ಲಿನ ಜನಸಂಖ್ಯೆಯನ್ನು ಆಧರಿಸಿ ಬಹುಸಂಖ್ಯೆಯ ಜನರ ಅಪೇಕ್ಷೆಯನ್ನು ಮನದಟ್ಟು ಮಾಡುವಂತೆ ಜನಾಂದೋಳನ ನಡೆಸಿದ ವಿದ್ಯಮಾನ ಸ್ವತಂತ್ರ ಭಾರತದ ಇತಿಹಾಸದಲ್ಲಿ ಗಮನಾರ್ಹವಾದದ್ದು. ಸ್ವಾತಂತ್ರ್ಯ ಹೋರಾಟಕ್ಕೆ ಸಮಾನವಾದದ್ದು. ಈ ಹೋರಾಟಕ್ಕೆ ಸಂಬಂಧಿಸಿದ ವಸ್ತುನಿಷ್ಠ ಮಾಹಿತಿಗಳು ಒಂದೆಡೆ ಸಿಗುವುದು ಅತ್ಯಂತ ಅವಶ್ಯಕವಾಗಿದ್ದು ಅದಕ್ಕೆ 'ಬಳ್ಳಾರಿ ವಿಲೀನ: ಮಹತ್ವದ ದಾಖಲೆಗಳು' ಕೃತಿ ಉತ್ತರವಾಗಿದೆ. ಇತಿಹಾಸ ಮರುನಿರಾಣದ ಶಾಸ್ತ್ರೀಯ ಮಾನದಂಡಗಳಿಗೆ ಅನುಗುಣವಾಗಿ ಎಲ್ಲ ಬಗೆಯ ವಿಶ್ವಾಸಾರ್ಹ ಮಾಹಿತಿಗಳನ್ನು ವ್ಯವಸ್ಥಿತವಾಗಿ ಕಲೆ ಹಾಕಿ ಉಪಯುಕ್ತವಾದ ಅಧ್ಯಯನ ಕೃತಿಯನ್ನು ಡಾ.ವೀರಶೆಟ್ಟಿ ಬಿ.ಗಾರಂಪಳ್ಳಿ ಮತ್ತು ಡಾ.ಮೃತ್ಯುಂಜಯ ರುಮಾಲೆ ಅವರು ಸಿದ್ಧಪಡಿಸಿರುವುದು ಸ್ವಾಗತಾರ್ಹ. ಕರ್ನಾಟಕ ಏಕೀಕರಣಕ್ಕೆ ಮೂರು ವರ್ಷಗಳ ಮೊದಲು 1953ರ ಅಕ್ಟೋಬರ್ 1ರಂದು ನಡೆದ ಬಳ್ಳಾರಿಯ ಐತಿಹಾಸಿಕ ವಿಲೀನ ಪ್ರಕ್ರಿಯೆಗೆ ಹಿನ್ನೆಲೆಯಾಗಿದ್ದ ದಾಖಲೆಗಳನ್ನು ಅವರು ಸಂಪಾದಿಸಿದ್ದಾರೆ. ಅವುಗಳನ್ನು ವ್ಯವಸ್ಥಿತವಾಗಿ ಕ್ರೋಡೀಕರಿಸಿದ್ದಾರೆ. ಅಧ್ಯಾಯಗಳಾಗಿ ವಿಂಗಡಿಸಿದ್ದಾರೆ. ಒಂದು ಭೂ ಭಾಗವು ಇನ್ನೊಂದು ಆಡಳಿತ ವ್ಯವಸ್ಥೆಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ನಡೆಯುವ ಸಾಮಾಜಿಕ, ಭಾವನಾತ್ಮಕ ವಿದ್ಯಮಾನಗಳ ದಾಖಲೆಗಳನ್ನು ಒದಗಿಸಿರುವ ಈ ಪ್ರಯತ್ನ ಇತಿಹಾಸದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸಾಮಾನ್ಯ ಜನತೆಗೂ ಉಪಯುಕ್ತವಾದ ಸ್ವಾರಸ್ಯಕರ ಸಾಮಗ್ರಿಯಾಗಿದೆ. ನಾಡನ್ನು ಕಟ್ಟುವುದರಲ್ಲಿ ನಮ್ಮ ಹಿಂದಿನವರ ತ್ಯಾಗ ಬಲಿದಾನಗಳ ಅರಿವನ್ನು ಮೂಡಿಸುವುದರಲ್ಲಿ ಈ ಕೃತಿ ಪರಿಣಾಮಕಾರಿಯಾಗಿದೆ. ಲಕ್ಷ್ಮಣ ಕೊಡಸೆ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವಿವಿಧ ಲೇಖಕರು

. ...

READ MORE

Related Books