ಬಂಧಮುಕ್ತ ಶಾಂತಮುಕ್ತ

Author : ಸ್ವಾಮಿ ಸುಖಬೋಧಾನಂದ

Pages 277

₹ 180.00




Year of Publication: 2012
Published by: ಪ್ರಸನ್ನ ಟ್ರಸ್ಟ್
Address: ಬೆಂಗಳೂರು

Synopsys

‌ಅಧ್ಯಾತ್ಮಕ ಗುರು ಎಂದೇ ಖ್ಯಾತಿಯ ಸ್ವಾಮಿ ಸುಖಬೋಧಾನಂದ ಅವರ ಕೃತಿ-ಬಂಧಮುಕ್ತ ಶಾಂತಮುಕ್ತ. ಬದುಕನ್ನು ಬಂಧನ ಎಂದೇ ಹೇಳಲಾಗುತ್ತದೆ. ಒಂದು ವೇಳೆ ಅದು ಬಂಧನವಾದರೆ ಅದರಲ್ಲೂ ಹೇಗೆ ಸುಖವನ್ನು ಅನುಭವಿಸಬೇಕು ಎಂಬ ಸಂದೇಶವೊಂದಿದ್ದರೆ, ಬಂಧಿತ ಬದುಕಿನಿಂದ ಹೇಗೆ ಮುಕ್ತವಾಗಬೇಕು ಎಂಬ ಬಗ್ಗೆಯೂ ಒಂದು ಜ್ನಾನ ಬೋಧಿಸುತ್ತದೆ. ಒಂದರ್ಥದಲ್ಲಿ ದಾಸರು ಹೇಳಿದ ಹಾಗೆ ಈಸಬೇಕು ಇದ್ದು ಜೈಸ ಬೇಕು ಎಂಬಂತೆ. ಅಷ್ಟಕ್ಕೂ, ಬಂಧಮುಕ್ತ ಎಂದರೆ ಈ ಬದುಕಿನ ಬಂಧವನ್ನು ಎಲ್ಲ ರೀತಿಯ ಆಸೆಗಳಿಂದ ಮುಕ್ತವಾಗಿಸಬೇಕು. ಆ ಮೂಲಕ ಶಾಂತತೆಯನ್ನು ಅನುಭವಿಸಬೇಕು ಎಂಬ ಅಧ್ಯಾತ್ಮಿಕಸಂದೇಶ ನೀಡುವ ಕೃತಿ ಇದು.

About the Author

ಸ್ವಾಮಿ ಸುಖಬೋಧಾನಂದ

ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್‌ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...

READ MORE

Related Books