ಬಂಡೂಲ

Author : ರಾಜ್ಯಶ್ರೀ ಕುಳವರ್ಮ

Pages 448

₹ 320.00




Year of Publication: 2018
Published by: ಛಂದ ಪುಸ್ತಕ
Address: ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ.ಬೆಂಗಳೂರು
Phone: 9844422782

Synopsys

ಬಂಡೂಲ ಎರಡನೆಯ ಮಹಾಯುದ್ದದಲ್ಲಿ ಆನೆಗಳ ಸಹಾಯದಿಂದ ಹಲವಾರು ಜೀವಗಳನ್ನುಳಿಸಲು ನೆರವಾದ ಯುದ್ಧವೀರ ಜೇಮ್ ಹೂವಾರ್ಡ್ ವಿಲಿಯಮ್ ಸ್ಫೂರ್ತಿದಾಯಕ ಕಥೆಯಾಗಿದೆಇದನ್ನು ಕನ್ನಡಕ್ಕೆ ರಾಜ್ಯಶ್ರೀ ಕುಳವರ್ಮ ತಂದಿದ್ದಾರೆ.

1920 ರಲ್ಲಿ ಬರ್ಮಾದ ತೇಗದ ಮರದ ಉದ್ಯಮದಲ್ಲಿ ಕೆಲಸ ಮಾಡಲು ಹೋದ ವಿಲಿಯಮ್ ಕ್ರಮೇಣ ಮರದ ದಿಮ್ಮಿಗಳನ್ನು ನದಿ ಮಾರ್ಗಕ್ಕೆ ಹಾಕುವ ಆನೆಗಳ ಒಡನಾಟ ಬೆಳೆಸಿಕೊಂಡ. ಆನೆಗಳ ಮನಸ್ಸು-ಹೃದಯವನ್ನು ಅರಿಯುವ ಮೂಲಕ ತನ್ನದೇ ಆದ ಆನೆಗಳ ತಂಡವೊಂದನ್ನು ಕಟ್ಟಿದ. ಅನೆಗಳ ಸಹಕಾರದಿಂದ ಎರಡನೇ ಮಹಾಯುದ್ದದಲ್ಲಿ ಬರ್ಮಾದಿಂದ ಜಪಾನೀಯರನ್ನು ಹಿಮ್ಮೆಟ್ಟಿಸಿದ ಘಟನೆಯು ಪ್ರಸಿದ್ದವಾಗಿದೆ.

ನಿರಾಶ್ರಿತರ ಜೀವವುಳಿಸಿದ ಗಜಪಡೆಯು ಬರ್ಮಾದ ಸೈನಿಕರಿಗೆ ನೆರವಾದವು. ಆನೆಗಳ ಮೂಲಕ ಬೇಕಾದಲ್ಲಿ ಸೇತುವೆ ನಿರ್ಮಿಸಿ ಸೈನಿಕರಿಗೆ ಓಡಾಟದ ಹಾದಿಯನ್ನು ಸುಗಮಗೊಳಿಸಲಾಯಿತು. ಆನೆಗಳೊಂದಿಗೆ ಬದುಕುತ್ತಿದ್ದ ವಿಲಿಯಮ್ಸ್ ಆನೆಗಳ ಗುರು ಬಂಡೂಲ. ಕೃತಿಯು ವಿಲಿಯಮ್ಸ್ ಗಜಪಡೆಯ ಸಹಾಸಮಯ ಕಥೆಗಳನ್ನು ಒಳಗೊಂಡಿದೆ.

About the Author

ರಾಜ್ಯಶ್ರೀ ಕುಳವರ್ಮ
(01 November 1988)

ಕವಯತ್ರಿ ರಾಜ್ಯಶ್ರೀ ಕುಳಮರ್ವ ಅವರು ವೃತ್ತಿಯಲ್ಲಿ ಎಂಜಿನಿಯರ್‌. ತಂದೆ ವಿ.ಬಿ. ಕುಳಮರ್ವ, ತಾಯಿ ಲಲಿತಾ ಲಕ್ಷಿ ಕುಳಮರ್ವ. ‘ನಗುವ ಹೂವುಗಳು’, ‘ಯುಗಾದಿಯ ಕುಸುಮಗಳು’ ಅವರ ಕವನ ಸಂಕಲನ. ‘ತಾತ್ವಿಕ ವಚನಗಳು’ ಅವರ ವಚನ ಸಂಕಲನ 2004ರಲ್ಲಿ ಪ್ರಕಟವಾಗಿದೆ. ‘ರೆಕ್ಕೆ ಬಲಿತ ಹಕ್ಕಿ’ ಭಾವ ಗೀತೆಗಳ ಸಂಕಲನ 2010ರಲ್ಲಿ ಪ್ರಕಟವಾಗಿದೆ. ...

READ MORE

Related Books