ಬೆಂಗಳೂರು ಅಭಿವೃದ್ಧಿಗೆ ಮಹಿಳೆಯರ ಕೊಡುಗೆ

Author : ಕೆ. ಆರ್‌. ಸಂಧ್ಯಾರೆಡ್ಡಿ

₹ 300.00




Published by: ಬೆಂಗಳೂರು ನಗರ ಜಿಲ್ಲಾ ಪರಿಷತ್ತು
Address: ಬೆಂಗಳೂರು ನಗರ ಜಿಲ್ಲಾ ಪರಿಷತ್ತು

Synopsys

ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಕಾಣಿಕೆ ಅಪಾರವಾದದ್ದು. ಹಲವು ಬಾರಿ ಮಹಿಳಾ ಸಾಧಕಿಯರ ಸಾಧನೆಗಳು ತೆರೆ ಮರೆಯಲ್ಲಿ ಉಳಿದು ಬಿಡುತ್ತವೆ. ಬೆಂಗಳೂರಿನಂತಹ ಮಹಾನಗರದ ಅಭಿವೃದ್ಧಿ ಕೇವಲ ಒಬ್ಬರಿಂದ ಮಾತ್ರ ಸಾಧ್ಯವಲ್ಲ. ಬೆಂಗಳೂರಿನ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದವರಲ್ಲಿ ಅನೇಕ ಮಹಿಳೆಯರೂ ಸೇರಿದ್ದಾರೆ. ಇಂತಹವರ ಬದುಕಿನ ಮತ್ತು ಸಾಮಾಜಿಕ ಸಾಧನೆಯ ಕುರಿತು ಬರೆದಂತಹ ಪುಸ್ತಕ ಬೆಂಗಳೂರು ಅಭಿವೃದ್ಧಿಗೆ ಮಹಿಳೆಯರ ಕೊಡುಗೆ. ಶಿಕ್ಷಣ ತಜ್ಞರಾಗಿದ್ದಂತಹ ಚಿ. ನ. ಮಂಗಳಾ, ಗಾಐಕಿ ಭಾರತಿ, ರಂಗ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ನಾಗರತ್ನಮ್ಮ ಹೀಗೆ ಹಲವು ಮಹಿಳಾ ಸಾಧಕಿಯರ ಕುರಿತಾದಂತಹ ವಿಶೇಷವಾದ ಬರೆವಣಿಗಗಳು ಈ ಪುಸ್ತಕದಲ್ಲಿ ಅಡಕವಾಗಿವೆ. ಈ ಪುಸ್ತಕವು ಯಾವುದೇ ಒಂದು ರಂಗಕ್ಕೆ ಸೀಮಿತವಾಗಿರದೇ, ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿದಂತಹ ಎಲ್ಲರ ಕುರಿತ ಲೇಖನಗಳನ್ನು ಒಳಗೊಂಡಿದೆ. ಸುಮಾರು 34 ಲೇಖನಗಳನ್ನು ಓಳಗೊಂಡಂತಹ ಈ ಕೃತಿ, ಸಂಶೋಧನೆಗಳಿಗೆ ಆಕರ ಗ್ರಂಥವಾಗುವ ಎಲ್ಲಾ ಗುಣಲಕ್ಷಣಗಳನ್ನು ಕೂಡ ಹೊಂದಿದೆ. ಈ ಪುಸ್ತಕದಲ್ಲಿ ನಮೂದಿಸಲಾಗಿರುವ ಹಲವು ಅಂಶಗಳು ಬಹುತೇಕ ಜನರಿಗೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಒಟ್ಟಿನಲ್ಲಿ ಮಹಿಳೆಯರ ಸಾಧನೆಯ ಕುರಿತಾದಂಹ ಒಂದು ಅಪರೂಪದ ಕೃತಿ ಇದು.

About the Author

ಕೆ. ಆರ್‌. ಸಂಧ್ಯಾರೆಡ್ಡಿ

ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿರುವ ಕನ್ನಡಿಗರ ನೆಚ್ಚಿನ ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ ಅವರು ಜನಿಸಿದ್ದು 1953 ಜೂನ್  22ರಂದು ಚಿತ್ರದುರ್ಗದಲ್ಲಿ. ಎನ್‌ಜಿಇಎಫ್‌ ನಲ್ಲಿ ಉಪ ನಿರ್ವಹಕರಾಗಿ ಸೇವೆ ಸಲ್ಲಿಸಿರುವ ಅವರು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು.  ಇವರ ಅನುವಾದಿತ ಕೃತಿಗಳೆಂದರೆ - ಬರ್ಕ್ ವೈಟ್‌ ಕಂಡ ಭಾರತ, Half way to Freedom, ಆಸನ ಪ್ರಾಣಾಯಾಮ ಮುದ್ರಾಬಂಧ, ನೆಹರೂವಾದದ ಹುಟ್ಟು ಮತ್ತು ಬೆಳವಣಿಗೆ, ಉಗ್ರಾಣ ನಿರ್ವಹಣೆ, ಸೃಜನಶೀಲ ಪ್ರತಿಭೆ, ದೇಹದ ರಚನಾ ವ್ಯವಸ್ಥೆಗಳು, ಹೊಸ ಬಗೆಯ ಶಕ್ತಿ ವ್ಯವಸ್ಥೆಗಳು.  ಸಂಪಾದಿತ ಕೃತಿಗಳು : ಗ್ರಾಮೀಣ ಪಶುಸಾಕಣೆ, ಗ್ರಾಮೀಣ ...

READ MORE

Related Books