ಬಂಗಾರದ ಮನುಷ್ಯ

Author : ಅ.ನಾ. ಪ್ರಹ್ಲಾದರಾವ್

Pages 208

₹ 100.00
Year of Publication: 2005
Published by: ರಾಮಣ್ಣ ಎಚ್. ಕೋಡಿಹೊಸಹಳ್ಳಿ
Address: ಆಯುಕ್ತರು, ವಾರ್ತಾ ಇಲಾಖೆ, ಕರ್ನಾಟಕ ಸರ್ಕಾರ ಶಿವಾಜಿನಗರ ಬಸ್ ನಿಲ್ದಾಣದ ಮೇಲೆ, ಬೆಂಗಳೂರು
Phone: 08022864384

Synopsys

ವರನಟ ಡಾ. ರಾಜಕುಮಾರ್  ಅಭಿನಯಿಸಿರುವ ಒಟ್ಟಾರೆ ಚಿತ್ರಗಳು, ಚಿತ್ರರಂಗದಲ್ಲಿನ ಅವರ ಅನುಪಮ ಸಾಧನೆ ಹಾಗೂ ಸಮಾಜಕ್ಕೆ ಅವರು ನೀಡಿರುವ ಮಹತ್ವಪೂರ್ಣ ಕೊಡುಗೆಯ ಮೇಲೆ ಬೆಳಕು ಚೆಲ್ಲಿದೆ ’ಬಂಗಾರದ ಮನುಷ್ಯ’ ಕೃತಿ. ಡಾ.ರಾಜ್ ಅವರ ಬಗೆಗೆ ಹಲವಾರು ಉಪಯುಕ್ತ ಸಂಗತಿಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಮೊದಲಿನಿಂದ ಕೊನೆಯ ತನಕ ಸ್ವಾರಸ್ಯದ ವಿಚಾರಗಳನ್ನು ಬಂಗಾರದ ಮನುಷ್ಯ ಕೃತಿ ಪರಿಚಯಿಸುತ್ತದೆ. ಅವರ ಪ್ರತಿಭಾವಂತ ವ್ಯಕ್ತಿತ್ವದ ಹಿರಿಮೆಯನ್ನು, ಅವರ ಬದುಕಿನ ಕಲಾತ್ಮಕ ಚಿತ್ರಣವನ್ನು ಇಲ್ಲಿ ತಿಳಿಸಲಾಗಿದೆ. ಕೃತಿ ಹಲವಾರು ಭಾಗಗಳಲ್ಲಿ ಮಾಹಿತಿಯನ್ನು ತೆರೆದಿಡುತ್ತಾ, ಡಾ.ರಾಜಕುಮಾರ್ ಅಭಿನಯಿಸಿರುವ ಪೌರಾಣಿಕ, ಐತಿಹಾಸಿಕ, ಭಕ್ತಿ ಪ್ರಧಾನ, ಜಾನಪದ, ಕಾದಂಬರಿ ಆಧಾರಿತ, ಪತ್ತೇದಾರಿ ಹಾಗೂ ಸಾಮಾಜಿಕ ಚಿತ್ರಗಳ ಬಗ್ಗೆ ವಿವರಿಸುತ್ತದೆ. 

 

About the Author

ಅ.ನಾ. ಪ್ರಹ್ಲಾದರಾವ್
(24 July 1953)

ಅ.ನಾ.ಪ್ರಹ್ಲಾದರಾವ್‌ರವರು, ಕನ್ನಡದ ಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ನಲವತ್ತು ಸಾವಿರ ಪದಬಂಧಗಳನ್ನು ರಚಿಸಿದ್ದಾರೆ. ಇವರ ಪದಬಂಧಗಳು ಕನ್ನಡದ ಪ್ರಮುಖ ಪ್ರತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೇ ಅತೀ ಹೆಚ್ಚು ಪದಬಂಧ ರಚಿಸುವ ಮೂಲಕ 2015, 2016 ಹಾಗೂ 2017ರ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿಕೊಳ್ಳುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ ಕೀರ್ತಿ ಇವರದು. ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ,ಪ್ರಜಾರತ್ನ, ಪದಬಂಧಬ್ರಹ್ಮ, ಪದಬಂಧಸಾಮ್ರಾಟ್, ಮುಂತಾದ ಬಿರುದುಗಳನ್ನು ನೀಡಿವೆ.  ...

READ MORE

Related Books