ಬಣ್ಣ ಬಯಲು

Author : ಡಿ.ಎಸ್.ಚೌಗಲೆ

Pages 112

₹ 70.00




Year of Publication: 2002
Published by: ಹರ್ಷ ಪ್ರಕಾಶನ
Address: ನಂ. 6, ಬ್ಲಾಕ್ ನಂಬರ್ 2, ಕಿಮ್ಸ್, ಹುಬ್ಬಳ್ಳಿ-22

Synopsys

‘ಬಣ್ಣ ಮತ್ತು ಬಯಲು’ ಲೇಖಕ ಡಿ.ಎಸ್. ಚೌಗಲೆ ಅವರು ಬರೆದಿರುವ ಕಲೆ ಮತ್ತು ಕಲಾವಿದರ ಬಗೆಗಿನ ವಿಮರ್ಶಾತ್ಮಕ ಲೇಖನಗಳ ಸಂಕಲನ. ಕಲೆಯ ವ್ಯಾಕರಣ ಮೀರಿ ಸೃಷ್ಟಿಸುತ್ತಿರುವ ಇಂದಿನ ಕಲಾವಿದರ ನಡುವೆ ನಡೆದಾಡುತ್ತಲೇ ಕಲೆಯ ಒಳ-ಹೊರ ನೋಟಗಳೆರಡನ್ನೂ ಬರಹಗಳಲ್ಲಿ ಹಿಡಿದಿಡಲು ತಮ್ಮ ಹಲವು ಸೃಜನಶೀಲ ನೆಲೆಗಳ ನಡುವೆ ಪ್ರಯತ್ನಿಸುತ್ತಿರುವ ಡಿ. ಎಸ್. ಚೌಗಲೆ, ವಸಾಹತೋತ್ತರ ಕನ್ನಡ ಕಲೆಯ ಸಾಹಿತ್ಯವನ್ನು ತಮ್ಮದೇ ಆದ ರೀತಿಯಲ್ಲಿ ಹೆಚ್ಚಿಸುತ್ತಿದ್ದಾರೆ. ಆ ಜಾಗತೀಕರಣದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಕೃತಿಗೆ ಒತ್ತು ನೀಡುತ್ತಿರುವ ಕಲಾವಿದರಲ್ಲಿ ಒಬ್ಬರಾಗಿ ಚೌಗಲೆ, ಉತ್ತರ ಕರ್ನಾಟಕದ ಶಕ್ತಿಯುತ ಜಾನಪದೀಯ ಪ್ರದರ್ಶಕ ಕಲೆಗಳ ಮೂಲದ ರೂಪ- ಗ್ರಹಿಕೆಗಳನ್ನು ಗಣನೀಯ ತೀವ್ರತೆಯಿಂದ ಬಣ್ಣ ದೃಶ್ಯಾಂಶಗಳಲ್ಲಿ ತಂದುಕೊಂಡಿದ್ದಾರೆ.

ಕನ್ನಡ ದೃಶ್ಯ ಸಂಸ್ಕೃತಿಗೆ ಈ ರೂಪಗಳು ಆಕರ್ಷಕವಾದ ಸೇರ್ಪಡೆ. ಕಲಾಬರಹಗಾರರೂ ಆಗಿರುವ ಚೌಗಲೆ, ಅನುವಾದಕರಾಗಿ ಹಾಗೂ ಕಥೆಗಾರರಾಗಿ ಗಡಿಪ್ರದೇಶದ ಬೆಳಗಾವಿಯ ವಿಶಿಷ್ಟ ಸೊಗಡಿನ ಕನ್ನಡವನ್ನು ಸತ್ವಯುತವಾಗಿ ದುಡಿಸಿಕೊಂಡಿದ್ದಾರೆ. ಕಲಾವಿದರು ಮಾತ್ರವೇ ಅಲ್ಲದೆ ಕಲಾಬರಹಗಾರರೂ, ಪ್ರಸಿದ್ದ ಕತೆಗಾರರೂ ಆಗಿದ್ದಾರೆ. ಕನ್ನಡ ದೃಶ್ಯಕಲೆಯ ಕುರಿತ ಅವರ ಬರಹಗಳು ಕಲೆ ಮತ್ತು ಕಲಾಭಿಮಾನಿ ಓದುಗರ ನಡುವೆ ಸೇತುವೆಯಂತೆ 'ಸಮಕಾಲೀನ ಸೌಂದರ್ಯ' ಹಾಗೂ 'ಅನುಭವ ಗ್ರಹಿಕೆ' ದಾಖಲಿಸುತ್ತವೆ.

About the Author

ಡಿ.ಎಸ್.ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು.  1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ...

READ MORE

Related Books