ಬಣ್ಣದ ಹಕ್ಕಿ

Author : ಆರ್.ವಿ. ಭಂಡಾರಿ

Pages 46

₹ 15.00




Year of Publication: 2005
Published by: ಬಂಡಾಯ ಪ್ರಕಾಶನ
Address: ಅರೇಅಂಗಡಿ, ಹೊನ್ನಾವರ, ಉತ್ತರ ಕನ್ನಡ- 581430

Synopsys

‘ಬಣ್ಣದ ಹಕ್ಕಿ’ ಲೇಖಕ ಆರ್.ವಿ. ಭಂಡಾರಿ ಅವರು ಮಕ್ಕಳಿಗಾಗಿ ಬರೆದ ಎರಡು ನಾಟಕಗಳ ಸಂಕಲನ. ಕೃತಿ ರಚನೆಯ ಕುರಿತು ಬರೆಯುತ್ತಾ ಪ್ರೀತಿಯ ಕಾಳು ಮತ್ತು ಒಂದೇ ಬಣ್ಣದ ಹಕ್ಕಿಗಳು ಎಂಬೆರಡು ಮಕ್ಕಳಿಗಾಗಿ ಬರೆದ ಕಿರು ನಾಟಕಗಳನ್ನು ಓದುಗರ ಕೈಗಿಡಲು ಸಂತೋಷ ಎನಿಸುತ್ತದೆ. ಪ್ರೀತಿಯ ಕಾಳು ಕತೆಯನ್ನು ಹೇಳಿದವರು ಶ್ರೀಪಾದ ಭಟ್ಟರು. ಅವರಿಗೂ ಬೇರೆಯವರು ಹೇಳಿದ್ದಂತೆ. ಮೂಲ ಯಾವುದೆಂದು ನನಗೆ ತಿಳಿಯದು. ಯಾವುದೋ ದೊಡ್ಡ ಲೇಖಕರ ಕೃತಿ ಕಿವಿಯಿಂದ ಕಿವಿಗೆ ದಾಟಿತೋ ಅಥವಾ ಜನಪದ ಮೂಲದ್ದೋ ಜನಪದವಾದರಂತೂ ಅದ್ಭುತವೇ ಇಲ್ಲಿ ಉದ್ದೇಶಕ್ಕೆ ತಕ್ಕಂತೆ ಮೈ ತಳೆದಿದೆ ಎಂದಿದ್ದಾರೆ ಲೇಖಕ ಆರ್.ವಿ. ಭಂಡಾರಿ.

About the Author

ಆರ್.ವಿ. ಭಂಡಾರಿ
(05 May 1936)

ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.  ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ  ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ...

READ MORE

Related Books