ಬಣ್ಣಗಳು ಮಾತಾಡಲಿ

Author : ಮಲರ್ ವಿಳಿ. ಕೆ

Pages 160

₹ 160.00




Year of Publication: 2021
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: #99, ಶ್ರೀರಕ್ಷಾ, ಕೆಇಬಿ ಎದುರು, ಇಟ್ಟಮಡು ಮುಖ್ಯ ರಸ್ತೆ, ಬನಶಂಕರಿ ಮೂರನೇ ಹಂತ, ಬೆಂಗಳೂರು-560 085

Synopsys

ಕವಿಗಳಾದ ಮಲರ್ ವಿಳಿ ಕೆ, ದಿವ್ಯದರ್ಶಿನಿ ಎಂ ಅವರು ತಮಿಳಿನಿಂದ ಕನ್ನಡಕ್ಕೆ ಅನುವಾದ ಮಾಡಿದ ಕವಿತೆಗಳು ಹಾಗೂ ಹಾಯ್ಕುಗಳ ಸಂಕಲನ ‘ ಬಣ್ಣಗಳು ಮಾತಾಡಲಿ’. ಈ ಕೃತಿಗೆ ಲೇಖಕ ಶ್ರೀಧರ ಬನವಾಸಿ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ- ‘ಇಳಂಗೊ ಅವರ ತಮಿಳಿನ ಕವಿತೆಗಳನ್ನು ಕನ್ನಡಕ್ಕೆ ತರುವಲ್ಲಿ ಅನುವಾದಕರಾದ ಡಾ. ಮಲರ್ ವಿಳಿ ಅವರ ಶ್ರಮ, ಭಾಷಾ ಪಾಂಡಿತ್ಯ ಎದ್ದು ಕಾಣುತ್ತದೆ. ಈ ಕೃತಿಯ ಮೂಲಕ ಇಳಂಗೊ ಅವರ ಹಾಯ್ಕುಗಳನ್ನು ಡಾ.ಮಲರ್ ವಿಳಿ ಅವರ ಮಗಳು ದಿವ್ಯದರ್ಶಿನಿ ಅನುವಾದಿಸಿ ಕನ್ನಡ ಅನುವಾದ ಕ್ಷೇತ್ರಕ್ಕೆ ಹೊಸ ಭರವಸೆಯನ್ನು ಹುಟ್ಟಿಸಿದ್ದಾಳೆ. ಎರಡು ಭಾಷೆಗಳ ನಡುವಿನ ಸಾಹಿತ್ಯ-ಸಮಾಗಮವನ್ನು ಅನುವಾದವೆಂಬ ಸೇತುವೆಯ ಮೂಲಕ ಇವರಿಬ್ಬರೂ ನಮ್ಮನ್ನು ಸಂಪರ್ಕಿಸಿದ್ದಾರೆ. ಇಳಂಗೊ ಕವಿತೆಗಳು ಕನ್ನಡ ಓದುಗರಿಗೆ ಅವಶ್ಯಕವಿತ್ತು ಎಂಬುದು ಈ ಕೃತಿ ಓದಿದ ಮೇಲೆ ಮನವರಿಕೆಯಾಗುತ್ತದೆ. ಈ ಸಂಕಲನದ ಮೂಲಕ ಇಳಂಗೊ ಅವರ ಅಂತಃಸತ್ವವನ್ನು ಅರ್ಥಮಾಡಿಕೊಳ್ಳಬಹುದು. `ಬಣ್ಣಗಳು ಮಾತಾಡಲಿ’ ಸಂಕಲನದ ಮೂಲಕ ಪಿಚ್ಚಿನಿಕ್ಕಾಡು ಇಳಂಗೊ ಅವರು ಕನ್ನಡದರಮನೆಯನ್ನು ಪ್ರವೇಶಿಸುತ್ತಿದ್ದಾರೆ’ ಎಂದಿದ್ದಾರೆ.

About the Author

ಮಲರ್ ವಿಳಿ. ಕೆ

ಪ್ರಸಿದ್ಧ ಅನುವಾದಕರಾಗಿರುವ ಡಾ.ಮಲರ್ ವಿಳಿ ಕೆ ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಸ್ತುತ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಮಾಸ್ತಿ ಮತ್ತು ಪುದುಮೈಪಿತ್ತನ್ ಸಣ್ಣ ಕಥೆಗಳ ಒಂದು ಅಧ್ಯಯನ” ಎಂಬ ಇವರ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಕಳೆದ ಎರಡು ದಶಕಗಳಿಂದ ಅನುವಾದ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ-ತಮಿಳು ಭಾಷೆಯ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ತಮಿಳು ಸಾಹಿತ್ಯಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿರುವ ಸಂಗಂ ಸಾಹಿತ್ಯವನ್ನು ಕನ್ನಡಕ್ಕೆ ತರುವಲ್ಲಿ ...

READ MORE

Related Books