ಬಾಪೂ ಹೆಜ್ಜೆಗಳಲ್ಲಿ

Author : ಕೆ. ನಲ್ಲತಂಬಿ

₹ 140.00
Year of Publication: 2022
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ವಯಾ- ಎಮ್ಮಿಗನೂರು, ಬಳ್ಳಾರಿ-583113
Phone: 9840354507

Synopsys

ಇದು, 15 ಗಾಂಧಿ ಅನುಯಾಯಿಗಳ ಕಿರು ಜೀವನ ಪರಿಚಯ. ತಮಿಳಿನಲ್ಲಿ ಪಾವಣ್ಣನ್.ಬರೆದಿರುವ ಈ ಕೃತಿಯನ್ನು ಕನ್ನಡಕ್ಕೆ ತಂದಿರುವವರು ಕೆ ನಲ್ಲತಂಬಿ. ಗಾಂಧಿ ಸಂಪರ್ಕಕ್ಕೆ ಬಂದ ಅನೇಕ ಹಿರಿಜೀವಿಗಳಲ್ಲಿ ಕೆಲವರನ್ನು ಈ ತಲೆಮಾರಿಗೆ ಪರಿಚಯಿಸುವ ಒಂದು ಅಪರೂಪದ ಪ್ರಯತ್ನ ಇದಾಗಿದೆ. ‘ಇಲ್ಲಿ ಯಾವುದೇ ಅನಗತ್ಯ ಹೊಗಳಿಕೆಯಾಗಲೀ’ಉತ್ಪ್ರೇಕ್ಷಿತ ವರ್‍ಣನೆಯಾಗಲೀ ಇಲ್ಲ. ಬದಲಿಗೆ ನಿಜವಾದ ಕೃತಜ್ಞತೆ ಇದೆ. ಇವರು ಬದುಕಿದ ರೀತಿಯ ಬಗ್ಗೆ, ಅದರ ಘನತೆಯ ಬಗ್ಗೆ ಮೆಚ್ಚುಗೆ ಇದೆ. ಹೀಗಾಗಿ ಈ ಮಹನೀಯರು ನಡೆಸಿದ ಹೋರಾಟದ ಕಥನಕ್ಕೆ ಸದ್ಯದ ತುರ್‍ತನ್ನು ಧ್ವನಿಸಬಲ್ಲ ಶಕ್ತಿ ತಾನಾಗೇ ಒದಗಿಬಂದಿದೆ. ಇಗೋ, ಇವರೆಲ್ಲರೂ ಹೀಗೆ ಬದುಕಿದ್ದರು ಮತ್ತು ಬದುಕಬಹುದೆಂದು ತೋರಿಸಿಕೊಟ್ಟವರು. ಮಿಕ್ಕಂತೆ ನಿಮ್ಮ ಬದುಕನ್ನು ನೀವೇ ರೂಪಿಸಿಕೊಳ್ಳಿ ಎನ್ನುತ್‌ತಾರೆ ಪಾವಣ್ನನ್’ ಎಂದು ಪುಸ್ತಕಕ್ಕೆ ಬರೆದ ಬೆನ್ನುಡಿಯಲ್ಲಿ ವಿ ಎಸ್ ಶ್ರೀಧರ ಹೇಳಿದ್ದಾರೆ.

About the Author

ಕೆ. ನಲ್ಲತಂಬಿ

ಕೆ. ನಲ್ಲತಂಬಿ ತಮಿಳು ಮತ್ತು ಕನ್ನಡ ಸಾಹಿತ್ಯಕ್ಕೆ ಕೊಂಡಿಯಾಗಿ ಪ್ರಮುಖರು. ಮನೆ ಭಾಷೆ ತಮಿಳು. ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಅಸ್ತಿತ್ವ  ಕಂಡು ಕೊಂಡವರು. ಅವರ ಪೂರ್ಣ ಹೆಸರು ಕಾಳಿಮುತ್ತು ನಲ್ಲತಂಬಿ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವಾರು ವಿಶಿಷ್ಟ ಕಾದಂಬರಿಗಳನ್ನು ಅನುವಾದಿಸಿ, ತಮ್ಮ ಭಾಷಾಂತರ ಕುಶಲತೆಯಿಂದ ಕನ್ನಡ ಮತ್ತು ತಮಿಳು ಸಾಹಿತ್ಯಾಸಕ್ತರಿಗೆ ಎರಡೂ ಭಾಷೆಗಳ ಸೊಗಡನ್ನು ಉಣ್ಣಿಸುತ್ತಿದ್ದಾರೆ. ಅರ್ಧನಾರೀಶ್ವರ, ಹುಣಿಸೆಮರದ ಕಥೆ, ಹಳ್ಳ ಬಂತು ಹಳ್ಳ, ಯಾದ್ವಶೇಮ್, ಕಡುಗು ವಾಂಗಿ ವಂದವಳ್ (ಸಾಸಿವೆ ತಂದವಳು) ಅವರ ಅತ್ಯಂತ ಗಮನಾರ್ಹ ಅನುವಾದಿತ ಕೃತಿಗಳು. ‘ಕೋಶಿ’ಸ್‌ ಕವಿತೆಗಳು’ ಅವರ ಸ್ವತಂತ್ರ ಕವನ ಸಂಕಲನ. ...

READ MORE

Related Books