ಬಾರದಿರಲಿ ಬರಗಾಲ

Author : ಎ.ಎಸ್. ಕುಮಾರಸ್ವಾಮಿ

Pages 179

₹ 130.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಬರಗಾಲ ಎಲ್ಲ ಪ್ರದೇಶಗಳ ಜನರ ಬದುಕನ್ನು ಹೈರಾಣಗೊಳಿಸುವಂತದ್ದು. ಈ ಕುರಿತು ಲೇಖಕ ಎ.ಎಸ್. ಕುಮಾರಸ್ವಾಮಿ ವಿಶ್ಲೇಷಿಸಿ ಬರೆದ ಕೃತಿಯೇ ’ಬಾರದಿರಲಿ ಬರಗಾಲ’. ಲೇಖಕರು ಪ್ರಾಸ್ತಾವಿಕ ಮಾತುಗಳಲ್ಲಿ ’ ಕರ್ನಾಟಕದ ರೈತರು ಆಗಾಗ್ಗೆ ಬರುವ ಬರಗಾಲಗಳಿಗೆ ಹೊಂದಿಕೊಂಡಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಎದುರಿಸಿದ ಸಂಕಷ್ಟದ ಪರಿಸ್ಥಿತಿಯು ಕೃಷಿ ವ್ಯವಸ್ಥೆಯನ್ನು ದುರ್ಗತಿಗೆ ಈಡು ಮಾಡಿದೆ. ಕೃಷಿ ಸಂಪನ್ಮೂಲಗಳು ನಶಿಸುತ್ತಿವೆ. ಮಣ್ಣಿನ ಉತ್ಪಾದಕತೆ ಕಡಿಮೆಯಾಗುತ್ತಿದೆ. ರೈತರ ಬಳಿ ಬೀಜ ಸಂಗ್ರಹಗಳೂ ಖಾಲಿಯಾಗಿವೆ. ಅಂತರ್ಜಲವು ಎಲ್ಲ ನಿರೀಕ್ಷೆಗಳನ್ನೂ ಮೀರಿ ಬತ್ತುತ್ತಿದೆ. ಗ್ರಾಮೀಣ ಯುವಕರು ಕೃಷಿಯಿಂದ ವಿಮುಖರಾಗಿ ನಗರಗಳೆಡೆಗೆ ಮುಖ ಮಾಡುತ್ತಿದ್ದಾರೆ. ರಾಜ್ಯದ ಒಂದೆಡೆ ಬರಗಾಲ, ಇನ್ನೊಂದು ಕಡೆ ನೆರೆ.  ಇವು ತಂದೊಡ್ಡುವ ಸಮಸ್ಯೆ ಪರಿಹಾರ ಹಾಗೂ ಜರ್ಜರಿತ ಕೃಷಿ ವ್ಯವಸ್ಥೆಯ ಪುನರುಜ್ಜೀವನ ಆಗಬೇಕಿದೆ’ ಎಂದಿದ್ದಾರೆ. ಹೀಗಾಗಿ, ಈ ಕೃತಿಯು ಚಿಂತನೆಯನ್ಗೆನು ಪ್ರೇರೇಪಿಸುತ್ತದೆ. 

About the Author

ಎ.ಎಸ್. ಕುಮಾರಸ್ವಾಮಿ
(20 January 1953)

ಲೇಖಕ, ಕೃಷಿ ವಿಜ್ಞಾನಿ ಡಾ.ಎ.ಎಸ್. ಕುಮಾರಸ್ವಾಮಿ (ಅಬ್ಬಿಗೆರೆ ಶಿವಲಿಂಗಪ್ಪ ಕುಮಾರಸ್ವಾಮಿ) ಜನಿಸಿದ್ದು 1953 ಜನವರಿ 20 ರಂದು. ದಾವಣಗೆರೆ ಜಿಲ್ಲೆ ದೊಡ್ಡಬ್ಬೀಗೆರೆ ಗ್ರಾಮದವರು. ಸಂತೇಬೆನ್ನೂರಿನಲ್ಲಿ ಎಸ್‌ಎಸ್‌ಎಲ್‌ಸಿ ವರೆಗೂ ಶಿಕ್ಷಣ ಪಡೆದು, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಕೃಷಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪಡೆದಿದ್ದಾರೆ. ಬೆಂಗಳೂರಿನ ಕೃಷಿ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಪ್ರಾಧ್ಯಾಪಕರಾಗಿ, ವಲಯ ಕೃಷಿ ಸಂಶೋಧನ ಕೇಂದ್ರದಲ್ಲಿ ತಂಬಾಕು ಬೆಳೆ ಬೇಸಾಯ ಶಾಸ್ತ್ರಜ್ಞರಾಗಿ, ಹಾಸನ ಕೃಷಿ ಕಾಲೇಜು ಸ್ಥಾಪಕ ನಿರ್ದೇಶಕರು ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ತಮ್ಮ ಅನುಭವ, ...

READ MORE

Related Books