ಬಸವ ಬೆಳಗು

Author : ಸಿ.ಕೆ ನಾವಲಗಿ

Pages 96

₹ 55.00




Year of Publication: 2008
Published by: ಸಾಹಿತ್ಯ ಚಂದನ
Address: 50 ಅಡಿ ರಸ್ತೆ, ಬನಶಂಕರಿ ಒಂದನೇ ಹಂತ, ಬೆಂಗಳೂರು

Synopsys

`ಬಸವ ಬೆಳಗು' ಲೇಖಕ ಡಾ. ಸಿ.ಕೆ. ನಾವಲಗಿ ಅವರು ವಿಚಾರ ವಿಮರ್ಶಾ ಕೃತಿ. ಜಾಗತೀಕರಣ ಮತ್ತು ವಚನ ಸಾಹಿತ್ಯ, ಬಸವಣ್ಣನವರನ್ನು ಕುರಿತ ಜನಪದರ ಭಕ್ತಿಭಾವ, ಚೆಂಬೆಳಕಿನ ಕವಿ ಕಂಡ ಮಹಾಬೆಳಗು, ಮಹಾಬೆಳಗು ಸಂದ ನೀಲಾಂಬಿಕೆ, ಬಸವಣ್ಣನವರು ಮತ್ತು ಲಿಂಗಾಯತ ಧರ್ಮ, ಕದಳಿಯ ಬನ ಬಿಟ್ಟ ಗೊನೆ, ವಚನಕಾರರ ಬಹುರೂಪದ ಕನ್ನಡ ಭಾಷಾಂಗ, ವಚನಗಳಲ್ಲಿ ದೇಸೀ ತಂತ್ರ, ನಿಜಸುಖಿ ಹಡಪದ ಅಪ್ಪಣ್ಣ ಶರಣರು, ವಚನ ಸಾಹಿತ್ಯದ ಆದ್ಯ ಪ್ರವರ್ತಕ ಜೇಡರ ದಾಸೀಮಯ್ಯ, ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಹೊಸ ಸಾಧ್ಯತೆಗಳು: ಬಸವಾದಿ ಶರಣರು ಮತ್ತು ನಾವು ಮುಂತಾದ ವಿಮರ್ಶಾತ್ಮಕ ಲೇಖನಗಳನ್ನು ಒಳಗೊಂಡ ಕೃತಿ. ಪ್ರಖರ ವೈಚಾರಿಕತೆ, ನಿರೂಪಣಾ ಶೈಲಿಯಿಂದ ಇಲ್ಲಿಯ ಲೇಖನಗಳು ಓದುಗರ ಗಮನ ಸೆಳೆಯುತ್ತವೆ. 

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books