ಬಸವ ದರ್ಶನ

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 124

₹ 140.00




Year of Publication: 2022
Published by: ಕರ್ನಾಟಕ ಸಾಹಿತ್ಯ ಪರಿಷತ್ತು ಬೆಂಗಳೂರು

Synopsys

ಬುದ್ಧ - ಬಸವ – ಅಂಬೇಡ್ಕ‌ರ್‌ ದರ್ಶನಗಳನ್ನು ಆಸಕ್ತಿಯಿಂದ ಅಧ್ಯಯನ ಮಾಡುತ್ತ, ಅವುಗಳಲ್ಲಿನ ಜೀವಪರ, ಸಮಾಜನಿಷ್ಠ ಆಲೋಚನೆಗಳನ್ನು ಹೆಕ್ಕಿ ಪ್ರಸಾರ ಮಾಡುವುದರಲ್ಲಿ ಅವರಿಗೆ ಅತೀವ ಆಸಕ್ತಿ, ದಲಿತ ಲೋಕದ ದುಃಖದುಮ್ಮಾನದ ಅನುಭವಗಳ ಕಾವ್ಯಾತ್ಮಕ ನಿವೇದನೆಯಲ್ಲಿ ಅವರದು ಅಪರೂಪವೆನ್ನಿಸುವ ವಿಭಿನ್ನ ಮಾರ್ಗ. ದಲಿತ ಚಳವಳಿಯ ಪುನಶ್ವೇತನಕ್ಕೆ ಸಾಮಾಜಿಕ ಹೋರಾಟದ ಜೊತೆಗೆ ವೈಚಾರಿಕ ಸಂವಾದವೂ ಅಗತ್ಯ ಎನ್ನುವುದು ಅವರ ಪ್ರತಿಪಾದನೆ. ಹನ್ನೆರಡನೇ ಶತಮಾನದ ಕಾಯಕಜೀವಿಗಳ ಚಳವಳಿಯ ಹಲವಾರು ಮುಖ್ಯ ಸಂಗತಿಗಳನ್ನು, ನಮ್ಮ ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆ ಮತ್ತು ಚೌಕಟ್ಟಿನಲ್ಲಿ ವಿಶ್ಲೇಷಿಸಲು ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಈ ಲೇಖನಗಳಲ್ಲಿ ಪ್ರಯತ್ನಿಸಿದ್ದಾರೆ. ಬಸವ ಚಳವಳಿ,ಕಲ್ಯಾಣವೆಂಬ ಬೆಡಗು, ಬಸವಣ್ಣನ ವಚನಗಳಲ್ಲಿ ವಿನಯ ,ಶರಣರು ಮತ್ತು ಸರ್ವಜ್ಞ - ಒಂದು ಮುಖಾಮುಖಿ, ಲಿಂಗಾಯತ ಧರ್ಮ ,ಶರಣ ಚಳವಳಿವಚನ, ಒಳಗು-ಬೆಳಗು ,ಸ್ವತಂತ್ರ ಧರ್ಮವಾಗಿ ಲಿಂಗಾಯತ ಧರ್ಮ, ದಲಿತ ವಚನಕಾರರು - ಒಂದು ಪಕ್ಷಿನೋಟ, ಸ್ವತಂತ್ರ ಭಾರತದಲ್ಲಿ ಬಸವಣ್ಣ ಮತ್ತು ಅಂಬೇಡ್ಕರ್ ತತ್ತ್ವಗಳ ಪ್ರಸ್ತುತತೆ ,ದೇವಾಲಯ ಮತ್ತು ಬಸವಣ್ಣ ,ಕಾಳವ್ವಯ ಕುಲಜ ಯಾರು?, ತನ್ನಾಶ್ರಯದ ರತಿಸುಖವನು, ಅಲ್ಲಮಪ್ರಭು ಮತ್ತು ಚಲನಶೀಲತೆ, ಮನುಷ್ಯನ ನಡವಳಿಕೆಯ ಕುರಿತು ,ವಚನ ಸಾಹಿತ್ಯ ನನ್ನ ದೃಷ್ಟಿಯಲ್ಲಿ ಪರಿವಿಡಿಗಳನ್ನು ಹೊಂದಿದೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books