ಬಾಶಿಕ ಕರ್‍ನಾಟಕ

Author : ಬಸವರಾಜ ಕೋಡಗುಂಟಿ

Pages 136

₹ 120.00




Year of Publication: 2018
Published by: ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ 583276
Address: ಪ್ರಾದೇಶಿಕ ಕಚೇರಿ ನಂ. 1, ಕಾನೂನು ಕಾಲೇಜಿನ ಹಳೆಯ ಕಟ್ಟಡ ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ ಬೆಂಗಳೂರು 560009
Phone: 080-2232388

Synopsys

ಕರ್ನಾಟಕದ ಭಾಷಿಕ ಸ್ವರೂಪವನ್ನು ವಿವರಿಸುವ ಹಾಗೂ ಕಟ್ಟಿಕೊಡುವ ಪ್ರಯತ್ನವನ್ನು ಲೇಖಕ ಬಸವರಾಜ ಕೋಡಗುಂಟಿ ಅವರು ಈ ಪುಸ್ತಕದಲ್ಲಿ ಮಾಡಿದ್ದಾರೆ. ಇದೊಂದು ವಿಭಿನ್ನ ಮತ್ತು ವಿಶಿಷ್ಟ ಪ್ರಯತ್ನ. ಈ ಪುಸ್ತಕದ ಅಧ್ಯಾಯಗಳು ಹೀಗಿವೆ.

ಬಾಶಿಕ ಕರಾಟಕ, ಬಾಶಿಕ ಕರ್‍ನಾಟಕ-ಇತಿಹಾಸ, ಇತಿಹಾಸ ಪೂರ್‍ವಕಾಲದ ಬಾಶಿಕ ಕರಾಟಕ: - ಆಕರಗಳು ಮತ್ತು ಸ್ವರೂಪ, ಇತಿಹಾಸ ಕಾಲ, ಕನ್ನಡ ಮಾತಿನ ಬೆಳವಣಿಗೆ ಮತ್ತು ಸಾಮಾಜಿಕತೆ, ಕನ್ನಡ ಒಳನುಡಿಗಳ ಒಡೆತ ಮತ್ತು ಬೆಳವಣಿಗೆ, ಹಳೆಗಾಲದ ಬಾಶಿಕ ಕರ್‍ನಾಟಕ: ಇತರ ಮಾತುಗಳು: ದ್ರಾವಿಡ ಮಾತುಗಳು, ಪ್ರಾಕ್ರುತ-ಸಂಸ್ತುತ , ಮರಾಟಿ, ಪರ್‍ಸೊ-ಅರಾಬಿಕ್, ಉರ್‍ದು, ಇಂಗ್ಲೀಶು, ಇತರ ಮಾತುಗಳು, ಬಾಶಿಕ ಕರ್‍ನಾಟಕ-ವರ್‍ತಮಾನ, ಆದುನಿಕ ಕಾಲದ ಬಾಶಿಕ ಕರ್‍ನಾಟಕದ ರಚನೆ ಮತ್ತು ಸ್ವರೂಪ, ಕರ್‍ನಾಟಕದ ಅನುಸೂಚಿತ ಮಾತುಗಳು: ಕನ್ನಡ, ಕರ್‍ನಾಟಕದ ಅನುಸೂಚಿತ ಮಾತುಗಳು: ಕನ್ನಡ ಹೊರತಾಗಿ, ಕರ್‍ನಾಟಕದ ಅನುಸೂಚಿತವಲ್ಲದ ಮಾತುಗಳು: ಜನಗಣತಿ ವರದಿ ಮಾಡಿದವು, 1961ರ ಜನಗಣತಿ ತಯಾರಿಸಿದ ಮನೆಮಾತುಗಳ ಪಟ್ಟಿ, ಕರ್‍ನಾಟಕದ ಬುಡಕಟ್ಟುಗಳ ಮಾತುಗಳು, ಇತರ ಮಾತುಗಳು/ಒಳನುಡಿಗಳು, ಬಾಶಿಕ ಕರ್‍ನಾಟಕ: ಸಣ್ಣ ಮಾತುಕತೆ.

About the Author

ಬಸವರಾಜ ಕೋಡಗುಂಟಿ

ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು.  ...

READ MORE

Related Books