ಬಯಲ ಬನಿ

Author : ರವಿಕುಮಾರ್ ನೀಹ

Pages 172

₹ 140.00




Year of Publication: 2014
Published by: ಸಿವಿಜಿ ಇಂಡಿಯಾ
Address: ಕಸ್ತೂರಬಾ ಭವನ, ಗಾಂಧಿ ಭವನ ಆವರಣ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001

Synopsys

‘ಬಯಲ ಬನಿ’ ಲೇಖಕ, ವಿಮರ್ಶಕ, ರವಿಕುಮಾರ್ ನೀಹ ಅವರ ಲೇಖನ ಸಂಕಲನ. ಇದರಲ್ಲಿ ಒಟ್ಟು 27 ಲೇಖನಗಳಿವೆ. ಸಂಕಲನದಲ್ಲಿ ಸಾಹಿತ್ಯ ವಿಮರ್ಶೆಯ ಗುಂಪಿನ ಲೇಖನಗಳಿರುವಂತೆ, ಸಂಸ್ಕೃತಿ ಜಾನಪದಗಳಿಗೆ ಸೇರಿದ ಲೇಖನಗಳು ಮುನ್ನುಡಿರೂಪದ, ಪುಸ್ತಕ ಪರಿಚಯರೂಪದ ಸಾಂದರ್ಭಿಕ ಬರಹಗಳೂ ಇವೆ. ವೀಚಿ ಕಾವ್ಯದೊಳಗೊಂದು ಸುತ್ತು, ಕನ್ನಡ ಕಾವ್ಯದ ಗೊತ್ತುಗುರಿಗಳು, ಕನ್ನಡ ಸಾಹಿತ್ಯ ಸಾಗುತ್ತಿರುವ ಹಾದಿ ಮತ್ತು ಒಳನೋಟಗಳು, ಕುಸುಮಬಾಲೆ ‘ಅವರವರುಗ ತಿಳಿದ ರೀತಿಲಿ’, ಮಾಸ್ತಿ ಹುಟ್ಟುಹಾಕಿದ ಸಾಂಸ್ಕೃತಿಕ ವಾಗ್ವಾದ, ಎನ್. ನಾಗಪ್ಪನವರ ಸಾಕವ್ವ, ಸಿದ್ದಲಿಂಗಯ್ಯ ಎಂಬ ತಾಯ್ಗೋಳಿ, ಕಾವ್ಯ ಸಂವಹನ- ಇವು ಸಾಹಿತ್ಯ ವಿಮರ್ಶೆಯ ಬಗೆಯ ಲೇಖನಗಳು, ಉಳಿದವು ಸಂಸ್ಕೃತಿ ವಿಮರ್ಶೆಯ ಬಗೆಯ ಬರಹಗಳು. ಇವುಗಳಲ್ಲಿ ದೇವನೂರರ ಕುಸುಮಬಾಲೆ ಕುರಿತ ‘ಅವರವರುಗ ತಿಳಿದ ರೀತಿಲಿ’ ಗಮನಾರ್ಹ ಲೇಖನ. ಕುಸುಮಬಾಲೆ ಅರ್ಥ ಆಗಲ್ಲ ಎಂದು ಹೇಳುತ್ತಿದ್ದಾಗ ಅದರ ಓದಿನ ದಾರಿಗಳನ್ನು ಹುಡುಕುವ ಯತ್ನವನ್ನು ಈ ಲೇಖನ ಮಾಡಿದೆ. ಯಶಸ್ವಿಯೂ ಆಗಿದೆ. ಪ್ರಾಯೋಗಿಕವಾಗಿ ಓದುವ ಮೂಲಕ ವಿಮರ್ಶೆಯ ದಾರಿಗಳನ್ನು ಕಂಡುಕೊಳ್ಳುವ ಕ್ರಮವನ್ನು ಲೇಖಕರು ಇಲ್ಲಿ ತೋರಿಸಿಕೊಟ್ಟಿದ್ದಾರೆ.

About the Author

ರವಿಕುಮಾರ್ ನೀಹ
(15 July 1977)

ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನಸೆಳೆದಿರುವ ಡಾ. ರವಿಕುಮಾರ್ ನೀಹ ಅವರು ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೋಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ- ಎನ್.ಸಿ. ಹನುಮಂತಯ್ಯ, ತಾಯಿ ದೊಡ್ಡಕ್ಕ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾರ್ ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ.ಪದವಿಗಳಿಸಿದ್ದಾರೆ. ಆನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ...

READ MORE

Related Books