ಬಯಲಗಳಿಕೆಯ ಬೆಳಗು

Author : ಜೋಳದರಾಶಿ ದೊಡ್ಡನಗೌಡ

Pages 750

₹ 600.00




Year of Publication: 2021
Published by: ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ
Address: ನಾಗನೂರು ಶ್ರೀ ರುದ್ರಾಕ್ಷಿಮಠ, ಶಿವಬಸವನಗರ ಬೆಳಗಾವಿ 
Phone: 9886757522

Synopsys

‘ಬಯಲಗಳಿಕೆಯ ಬೆಳಗು’ ಕೃತಿಯು ಗೂಳೂರು ಸಿದ್ಧವೀರಣ್ಣೊಡೆಯರು ಸಂಗ್ರಹಿಸಿದ ಪ್ರಭುದೇವರ ಶೂನ್ಯಸಂಪಾದನೆಯ ವ್ಯಾಖ್ಯೆಯಾಗಿದೆ. ಇದನ್ನು ಜೋಳದರಾಶಿ ದೊಡ್ಡನಗೌಡರು ಅವರ ಸಂಪಾದನಾ ಕೃತಿಯಾಗಿದೆ.  ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ‘ಜಾಗತಿಕ ಧರ್ಮಗಳಲ್ಲಿ ಲಿಂಗಾಯತ ಧರ್ಮಕ್ಕೆ ವಿಶಿಷ್ಟವಾದ ಸ್ಥಾನವಿದೆ. ಹನ್ನೆರಡನೆಯ ಶತಮಾನದಲ್ಲಿ ಮಹಾಮಾನವತಾವಾದಿ ಬಸವಣ್ಣನವರಿಂದ ಸ್ಥಾಪಿತವಾಗಿ, ಶರಣ ಚೆನ್ನಬಸವಣ್ಣನವರಿಂದ ನಿರ್ದಿಷ್ಟ ತಾತ್ವಿಕ ಸ್ವರೂಪವನ್ನು ಪಡೆದ ಧರ್ಮವಿದು. ಶರಣರು ಆಚರಿಸಿ ತೋರಿದ, ಶರಣರ ಸಾಧನೆಯಿಂದ ವ್ಯಾಪಕ ದೃಷ್ಟಿಯನ್ನು ಪಡೆದ ಈ ಧರ್ಮವು, ಸರ್ವಸಮಾನತೆಯ ಆಶಯವನ್ನು ಬಹುದೊಡ್ಡ ಪ್ರಮಾಣದಲ್ಲಿ ಈಡೇರಿಸಿದ ಜಾಗತಿಕ ಧರ್ಮವಾಗಿರುವುದು ವಿಶೇಷ. ವಿಶ್ವಗುರು ಬಸವಣ್ಣನವರ ಆಕರ್ಷಕ ವ್ಯಕ್ತಿತ್ವಕ್ಕೆ ಮಾರುಹೋದ ಸಾವಿರಾರು ಸಂಖ್ಯೆಯ ಸಾಧಕರು ದೇಶ-ವಿದೇಶಗಳಿಂದ ಬಂದು ಕಲ್ಯಾಣದಲ್ಲಿ ಸೇರಿದರು. ಸಮಾಜ, ಧರ್ಮ, ದರ್ಶನ, ಸಂಸ್ಕೃತಿಗಳನ್ನು ಕುರಿತು ಚಿಂತನ ಮಂಥನ ನಡೆಸಿದರು. ಚಿಂತನ ಮಂಥನಕ್ಕಾಗಿಯೇ ಅನುಭವ ಮಂಟಪವನ್ನು ನಿರ್ಮಿಸಿದರು. ಅಲ್ಲಿ ಲಿಂಗಾಯತ ಧರ್ಮದ ತಾತ್ವಿಕ ವಿವೇಚನೆ ಮಾಡಿದರು; ಅದನ್ನು ನಿತ್ಯನೂತನ ಮಾನವೀಯ ಮಟ್ಟಕ್ಕೇರಿಸಿದರು; ವಿಶ್ವಧರ್ಮವಾಗಿಸಿದರು. ಧರ್ಮಗುರು ಬಸವಣ್ಣನವರ ನೇತೃತ್ವದಲ್ಲಿ ದಲಿತರು, ದೀನರು ಹಲವು ಕಾರ್ಯಗಳನ್ನವಲಂಬಿಸಿದ ಕಾಯಕಜೀವಿಗಳು. ಅಂದು ತಮ್ಮ ಭಾವನೆಗಳಿಗೆ ಅಭಿವ್ಯಕ್ತಿಯನ್ನು ನೀಡಿ ವಚನಗಳನ್ನು ರಚಿಸಿದರು. ಈ ವಚನಗಳಲ್ಲಿ ನೀತಿ ಇದೆ, ತತ್ವಗಳ ಬೋಧನೆ ಇದೆ, ಅಂತರಂಗದ ನೋವು ನಲಿವುಗಳಿವೆ, ಸಾಮಾಜಿಕ ಜೀವನದ ಲೋಪದೋಷಗಳ ವಿಶ್ಲೇಷಣೆ ಇದೆ. ವಚನಗಳು ತಮ್ಮಲ್ಲಿರುವ ಸಾಹಿತ್ಯಕ ಮೌಲ್ಯಗಳಿಂದಾಗಿ ವಚನ ಸಾಹಿತ್ಯವೆಂಬ ಹೆಸರು ಪಡೆದುದಲ್ಲದೆ, ಕನ್ನಡ ಸಾಹಿತ್ಯಕ್ಕೆ ಅರ್ಥಪೂರ್ಣತೆ, ಜಾಗತಿಕ ಮಟ್ಟದ ಗೌರವ ಹಾಗೂ ಸಾರ್ವಕಾಲಿಕತೆಯನ್ನು ತಂದುಕೊಟ್ಟಿವೆ. ಲಿಂಗಾಯತ ಧರ್ಮ ಈ ವಚನಗಳಲ್ಲಿ ಹಾಸುಹೊಕ್ಕಾಗಿರುವುದನ್ನು ಕಾಣಬಹುದು. ಹರಿಹರ, ರಾಘವಾಂಕ, ಭೀಮಕವಿ, ಚಾಮರಸ ಮುಂತಾದ ಮಹಾನ್ ಕವಿಗಳು ಈ ವಚನಗಳನ್ನೇ ಆಧರಿಸಿ ಶರಣರ ಚರಿತ್ರೆಗಳನ್ನು, ಲಿಂಗಲೀಲಾ ವಿಲಾಸ ಚಾರಿತ್ರ, ಏಕೋತ್ತರ ಶತಸ್ಥಲದಂತಹ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಶೂನ್ಯಸಂಪಾದನೆಗಳು ವಚನಗಳ ಮೂಲಕ ಶರಣರ ಜೀವನ ಪ್ರಸಂಗಗಳನ್ನು ತುಂಬ ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಟ್ಟಿರುವುದನ್ನು ಕಾಣುತ್ತೇವೆ. ಲಿಂಗಾಯತ ಧರ್ಮ, ಸಮಾಜ, ಸಾಹಿತ್ಯ, ಸಂಸ್ಕೃತಿ ಮತ್ತು ತತ್ತ್ವಜ್ಞಾನಗಳಿಗೆ ಸಂಬಂಧಿಸಿದ ಅಮೂಲ್ಯ ಮತ್ತು ಅಪರೂಪದ ಗ್ರಂಥಗಳನ್ನು, ಸಮೃದ್ಧ ವಚನ ಸಾಹಿತ್ಯವನ್ನು ಒಂದೆಡೆ ಸಂಗ್ರಹಿಸಿ, ಪ್ರಕಟಿಸಿ ಓದುಗರಿಗೆ ಒದಗಿಸಿಕೊಡುವ, ಸಂಶೋಧಕರಿಗೆ ಸಾಂದರ್ಭಿಕ ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯೇ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ, ಗ್ರಂಥಾಲಯ ವಿಜ್ಞಾನದ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿ, 'ಅಭಿನವ ಎಸ್. ಆರ್. ರಂಗನಾಥ್' ಎಂಬ ಕೀರ್ತಿಗೆ ಭಾಜನರಾಗಿರುವ ಡಾ. ಎಸ್. ಆರ್. ಗುಂಜಾಳ ಅವರ ಕನಸಿನ ಕೂಸು ಈ ಗ್ರಂಥಾಲಯ, ಇಂದು ಸಾರ್ವಜನಿಕ ಸೇವೆಯಲ್ಲಿ ಇಪ್ಪತ್ತು ವಸಂತಗಳನ್ನು ಪೂರ್ಣಗೊಳಿಸಿ ಸಮೃದ್ಧವಾಗಿ ಬೆಳೆದು ನಿಂತಿದೆ. ತನ್ನ ಅನುಪಮ ಹಾಗೂ ವಿಶಿಷ್ಟ ಸೇವೆಯಿಂದಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮೊದಲ್ಗೊಂಡು ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರವಾಗಿರುವುದು ಈ ಸಂಶೋಧನ ಕೇಂದ್ರದ ಹೆಗ್ಗಳಿಕೆಯಾಗಿದೆ’ ಎಂದು ವಿಶ್ಲೇಷಿತವಾಗಿದೆ.

 

About the Author

ಜೋಳದರಾಶಿ ದೊಡ್ಡನಗೌಡ
(27 July 1910 - 10 May 1994)

ನಾಟಕಕಾರ, ಕವಿ, ಗಮಕಿ ಜೋಳದರಾಶಿ ದೊಡ್ಡನಗೌಡರು 1910 ಜುಲೈ 27ರಂದು ಬಳ್ಳಾರಿ ಜಿಲ್ಲೆಯ ಜೋಳದರಾಶಿ ಗ್ರಾಮದಲ್ಲಿ ಜನಿಸಿದರು. ತಂದೆ ಪಂಪನಗೌಡರು, ತಾಯಿ ರುದ್ರಮ್ಮ. ಜೋಳದರಾಶಿಯಲ್ಲಿಯೇ ಶೀಕ್ಷಣ ಪಡೆದ ಇವರು ಬಯಲಾಟದಲ್ಲಿ ವೇಶಕಟ್ಟುವುದರಲ್ಲಿ ತೊಡಗಿಕೊಂಡರು. ಕನ್ನಡ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಕನಕದಾಸರ ಪಾತ್ರ ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದೆ.  ಕನ್ನಡ ಮತ್ತು ತೆಲುಗು ಭಾಷೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ರಸವರ್ಷ, ಯಾತ್ರಿಕ, ನಮ್ಮ ಹಂಪೆ, ಗೌಡತಿ ಬರಲ್ಲಿಲ್ಲ, ರಾಮೇಶನ ವಚನಗಳು   ನೋಡ್ರವ್ವ ನಾಟಕ, ಅಭಯ, ಸಾಯದವನ ಸಮಾಧಿ, ಕ್ರಾಂತಿ ಪುರುಷ, ಕನಕದಾಸ ನಂದೇ ...

READ MORE

Related Books