ಬಾಯಾರಿದ ಬೆಂಗಳೂರು

Author : ಟಿ.ಎಂ. ಶಿವಶಂಕರ್‌

Pages 230

₹ 175.00




Year of Publication: 2018
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ೨
Phone: 08022107704

Synopsys

ಬೆಂಗಳೂರು ಎಂಬ ಮಹಾನಗರಿ ಬಾಯಾರಿದ ಹಂತಕ್ಕೆ ಬರುವವರೆಗಿನ ಭೂಗೋಳ, ನಗರವನ್ನು ಆಳಿದ ಕಟ್ಟಿದ ಪಾಳೇಗಾರರ ಮನೆತನಗಳು, ವೈಜ್ಞಾನಿಕ ಇತಿಹಾಸ ಮುಂತಾದ ಎಲ್ಲ ಸಮಾಜ ವಿಜ್ಞಾನದ ಆಯಾಮಗಳನ್ನು ಅಂಕಿ ಅಂಶ, ನಕ್ಷೆಗಳ ಸಹಿತ ವಿವರಿಸಲಾಗಿದೆ.

About the Author

ಟಿ.ಎಂ. ಶಿವಶಂಕರ್‌

ಟಿ.ಎಂ. ಶಿವಶಂಕರ್ ಅವರು ಬಿ.ಎಸ್ಸಿ. ಪದವೀಧರರಾಗಿದ್ದು, ಮಾನಸಗಂಗೋತ್ರಿಯಲ್ಲಿಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಹಾಯಕ ವಿಜ್ಞಾನಿಯಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಿರಿಯ ಭೂವಿಜ್ಞಾನಿಯಾಗಿ ನಿವೃತ್ತರಾಗಿದ್ದಾರೆ. ತಮ್ಮ ಇಡೀ ಸೇವಾವಧಿಯನ್ನು ಅಂತರ್ಜಲ ಶೋಧನಾ ವಿಭಾಗದಲ್ಲಿಯೇ ಕಳೆದು, ಅಂತರ್ಜಲದ ಬಗ್ಗೆ ವಿಶೇಷ ಜ್ಞಾನ ಪಡೆದಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ  ಸ್ನಾತಕೋತ್ತರ ಪದವಿ ಪಡೆದು ಹವ್ಯಾಸಿ ಬರಹಗಾರರಾಗಿದ್ದಾರೆ. ಇವರ ಬಹಳಷ್ಟು ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ...

READ MORE

Reviews

ಬಾಯಾರಿದ ಬೆಂಗಳೂರು ಲೇಖಕರು: ಟಿ.ಎಂ.ಶಿವಶಂಕರ ಪ್ರಕಾಶಕರು: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು. ದೂರವಾಣಿ: 22107704 ಪುಟಗಳು: 208+8 ಬೆಲೆ:₹175 ಸೃಷ್ಟಿಗೆ ಮೂಲ ಘಟಕಗಳಾಗಿ ಕಂಡುಕೊಂಡ ಪಂಚ ಮಹಾಭೂತಗಳ ಪಂಕ್ತಿಯಲ್ಲಿ ನೆಲಕ್ಕೆ ಮೊದಲ ಸ್ಥಾನವಾದರೆ, ಜಲಕ್ಕೆ ಮೂರನೇ ಸ್ಥಾನ ಎಂಬತೆ ಬಾಯಾರಿದ ಬೆಂಗಳೂರು ಎಂಬ ಪುಸ್ತಕವನ್ನು ಟಿ.ಎಂ.ಶಿವಶಂಕರ್‌ ಲೇಖಕರಾಗಿ ಹೋರ ತಂದಿದ್ದಾರೆ. ಈ ಪುಸ್ತಕದಲ್ಲಿ ಲೇಖಕರು ಬೇಂಗಳೂರಿನ ಇತಿಹಾಸವನ್ನು ಮತ್ತು ಬೆಳೆದು ಬಂದ ರೀತಿಯನ್ನು ಹಾಗೇಯೇ ಬೆಂಗಳೂರಿನ ಕೆರಗಳು ಯಾವ ರೀತಿಯಲ್ಲಿ ರೂಪುಗೊಂಡಿದ್ದು ಜಲಮಂಡಳಿಯು ನೀರುನ್ನು ಪೂರೈಸುವಲ್ಲಿ ಹೇಗೆ ಪಾತ್ರ ವಹಿಸುತ್ತಿದೆ ಎಲ್ಲೆಲ್ಲಿಂದ ನೀರನ್ನು ಬೆಂಗಳೂರಿಗೆ ಪೂರೈಸುತ್ತಿದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಈ ಪುಸ್ತಕವು 20 ಅಧ್ಯಾಯ ಅಥವಾ ಸಂಗತಿಗಳನ್ನು ಒಳಗೊಂಡಿದ್ದು ಅದರಲ್ಲಿ ಸದಾ ಬಾಯಾರಿದ ನಗರ ಎಂಬ ಸಂಗತಿಯಲ್ಲಿ ನೀರಿನ ಮಹತ್ವವನ್ನು ಮತ್ತು ಜಲದ ವಿತರಣೆಯನ್ನು ಮತ್ತು ಜಲ ಎಷ್ಟು ಪ್ರಮಾಣದಲ್ಲಿ ನಮಗೆ ಸಿಗುತ್ತಿದೆ ಇಂಬುದನ್ನು ಈ ಒಣದು ಸಂಗತಿಯಲ್ಲಿ ಲೇಖಕರು ವಿವಿರಿಸಿದ್ದಾರೆ. ಬೆಂಗಳೂರಿನಲ್ಲಿ ಬದುಕುತ್ತಿರು ಪ್ರತಿಯೋಬ್ಬರಿಗೂ ಪುಸ್ತಕವು ಸಹಕಾರಿಯಾಗಿದೆ.

ಕೃಪೆ: ಪ್ರಜಾವಾಣಿ

https://www.prajavani.net/artculture/book-review/pustaka-vimarse-647658.html

Related Books