ಬೀchi: ಬುಲೆಟ್ಸು..ಬಾಂಬ್ಸು.. ಭಗವದ್ಗೀತೆ

Author : ಬಿ.ಎಸ್. ಕೇಶವರಾವ್

Pages 208

₹ 108.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಬೀchi ಅವರ ನಗೆಬರೆಹಗಳು ಬಾಂಬ್ ಹಾಗೂ ಬುಲೆಟ್ ಗಳಿದ್ದ ಹಾಗೆ. ಎಂಥಹ ಗಂಭೀರ ಸ್ವಭಾವದವರಿದ್ದರೂ ಅವರ ಮುಖದ ಮೇಲೆ ನಗೆ ನವಿಲು ಕುಣಿಯುವ ಹಾಗೆ ಮಾಡುವುದು ಇವುಗಳ ಸ್ವರೂಪ. ಮನದ ಬೇನೆಗೆ ಸೂಕ್ತ ಮದ್ದು ಆಗುವ ಈ ನಗೆ ಬರೆಹಗಳನ್ನು ಲೇಖಕ ಬಿ.ಎಸ್. ಕೇಶವರಾವ್ ಅವರು ಸಂಗ್ರಹಿಸಿ, ಅವುಗಳ ಮೂಲಕ ಬೀchi ಅವರ ಬದುಕಿನ ಎತ್ತರವನ್ನು, ಸಮಾಜದ ಅಭಿವೃದ್ಧಿ ಬಗ್ಗೆ ಅವರಿಗಿರುವ ಕಳಕಳಿಯನ್ನು ಮತ್ತು ಮನುಷ್ಯರು ಮನುಷ್ಯರಾಗೇ ಬದುಕಬೇಕು ಎಂಬ ಆಶಯವನ್ನು ತೋರಿದ ಕೃತಿ ಇದು.

About the Author

ಬಿ.ಎಸ್. ಕೇಶವರಾವ್
(15 December 1935)

ಮೂಲತಃ ಮೈಸೂರಿನವರಾದ (ಜನನ: 15-12-1935)  ಬಿ.ಎಸ್. ಕೇಶವರಾವ್ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ, ನಟ, ರಂಗಕರ್ಮಿ. ತಂದೆ ಬಿ.ಕೆ. ಸುಬ್ಬರಾವ್, ತಾಯಿ ನಾಗಲಕ್ಷ್ಮಮ್ಮ. ಮೈಸೂರಿನ ಸೇಂಟ್ ಫಿಲೋಮಿನ ಕಾಲೇಜಿನಿಂದ ಇಂಟರ್ ಮೀಡಿಯೆಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಡಿಪ್ಲೊಮಾ, ಮದರಾಸಿನ ಟೆಕ್ನಿಕಲ್ ಟೀಚಿಂಗ್ ಇನ್‌ಸ್ಟಿಟ್ಯೂಟಿನಿಂದ ಪದವಿ ಪಡೆದರು. ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಮೇಲ್ವಿಚಾರಕರಾಗಿ. ನಂತರ ಕಡಕ್‌ವಾಸ್ಲಾ, ಪೂನ, ಧೂಂಡ್‌ನಲ್ಲಿ ಕೆಲಕಾಲ. ನಂತರ ಅವರು ಶಿಕ್ಷಣ ಇಲಾಖೆಯಲ್ಲಿ ಅಧ್ಯಾಪಕರಾಗಿ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾದರು. ರಂಗ ಕಲಾವಿದರಾಗಿ, ಆಕಾಶವಾಣಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ನಟಿಸಿ ನಿರ್ದೇಶಿಸಿದರು. ಶಿವರಾಮಕಾರಂತರ ಅಧ್ಯಕ್ಷತೆಯಲ್ಲಿ (1955) ನಡೆದ ಕನ್ನಡ ಸಾಹಿತ್ಯ ...

READ MORE

Related Books