ಬೀರದೇವರ ಅವತಾರಗಳು

Author : ಚಂದ್ರಕಾಂತ ಬಿಜ್ಜರಗಿ

Pages 176

₹ 150.00




Year of Publication: 2011
Published by: ಶೈಲಚಂದ್ರ ಪ್ರಕಾಶನ
Address: ದರ್ಗಾ, ಸೆಂಟ್ರಲ್‌ ಜೈಲ್ ಹತ್ತಿರ, ವಿಜಯಪುರ 586103
Phone: 9448336151, 81476 22775.

Synopsys

ವೀರನೇ ಬೀರ' ಎನ್ನುವ ಲೇಖಕರು ’ವೀರಪ್ಪನೇ ಬೀರಪ್ಪ. ಬೀರಪ್ಪನು ಬ್ರಹ್ಮನ (ಭರಮ) ಪುತ್ರ’ ಎಂದು ವ್ಯಾಖ್ಯಾನಿಸುತ್ತಾರೆ. ’ಸ್ಥಳೀಯ ಪುರಾಣಗಳು ಬೀರಪ್ಪನನ್ನು ಕುಬ್ಜಗೊಳಿಸಿವೆ. ಬೀರಪ್ಪ-ಭರಮ ಪೌರಾಣಿಕ ಪುರುಷರಲ್ಲ ಐತಿಹಾಸಿಕ ಪುರುಷ’ ಎಂಬುದು ಅವರ ವಾದ. ಬೀರಪ್ಪನು ಕ್ರಿ.ಪೂ.1500 ಆಸುಪಾಸಿನಲ್ಲಿ ಇಂದಿನ ಹಿಮಾಚಲಪ್ರದೇಶ, ಅರುಣಾಂಚಲದ ಉತ್ತರಭಾಗದಲ್ಲಿದ್ದ ಬ್ರಹ್ಮಾವೃತ್ತ ಪ್ರದೇಶದಲ್ಲಿದ್ದವನು ಎಂದು ಲೇಖಕರು ವಿವರಿಸುತ್ತಾರೆ.  ರಾಜನೇ ದೇವರು ಎಂಬ ನಂಬಿಗೆಯ ಕಾಲದಲ್ಲಿದ್ದ ವ್ಯಕ್ತಿಯಾದ್ದರಿಂದ ಮರಣಾನಂತರ ರೂಢಿಗೆ ಅನುಗುಣವಾಗಿ ಆ ಭಾಗದ ಅಲೆಮಾರಿ ಮೇಷಪಾಲಕರ ದೈವವಾದ’ ಎಂದು ವಿವರಿಸುತ್ತಾರೆ. ಮೇಷಪಾಲಕರ ಗುಂಪಗಳು ದಕ್ಷಿಣಕ್ಕೆ ವಲಸೆ ಬರುವಾಗ ಆತನ ಮೂರ್ತಿಗಳನ್ನು ಜೊತೆಗೆ ತಂದರು. ಅವುಗಳನ್ನು ಓರಿಸಾದ ಪುರಿ, ಮಹಾರಾಷ್ಟ್ರದ ಪಂಢರಪುರ, ಆಂಧ್ರದ ತಿರುಪತಿ ಬೆಟ್ಟ, ತಿರುಚಿಯಲ್ಲಿ ಶ್ರೀರಂಗ ಮುಂತಾದ ಕಡೆಗಳಲ್ಲಿ ಬೀರಪ್ಪನನ್ನು ಪ್ರತಿಷ್ಠಾಪಿಸಿದರು ಎನ್ನುವ ಲೇಖಕರು ’ಅಂದಿನ ಬೀರಪ್ಪನೇ ಕಾಲಾಂತರದಲ್ಲಿ ಬಲಭದ್ರ, ವಿಠ್ಠಲ, ತಿರುಪತಿ ತಿಮ್ಮಪ್ಪ, ಶ್ರೀರಂಗ ಮುಂತಾದ ಪುಣ್ಯಕ್ಷೇತ್ರಗಳಾದವು’ ಎಂದು ಅಭಿಪ್ರಾಯಪಡುತ್ತಾರೆ.

About the Author

ಚಂದ್ರಕಾಂತ ಬಿಜ್ಜರಗಿ
(27 September 1949)

ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು.  ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...

READ MORE

Related Books