ಬೇರು ಬಿಳಲು

Author : ರತ್ನಾಕರ ಸಿ. ಕುನುಗೋಡು

Pages 308

₹ 300.00




Year of Publication: 2021
Published by: ವಂಶಿ ಪಬ್ಲಿಕೇಷನ್ಸ್
Address: #4,ಗಾಯತ್ರಿ ಕಾಂಪ್ಲೆಕ್ಸ್, ಟಿ.ಬಿ. ಬಸ್ ಸ್ಟಾಪ್ ಹತ್ತಿರ, ಬಿ.ಹೆಚ್. ರಸ್ತೆ, ಸುಭಾಷ್ ನಗರ, ನೆಲಮಂಗಲ, ಬೆಂಗಳೂರು- 562123
Phone: 9916595916

Synopsys

ಡಾ. ರತ್ನಾಕರ ಸಿ. ಕುನುಗೋಡು ಅವರು ಪಿಹೆಚ್ ಡಿ ಪದವಿಗಾಗಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧ ‘ಬೇರು ಬಿಳಲು’ ಸಾಂಸ್ಕೃತಿಕ ಚರಿತ್ರೆಯ ಮರುರಚನಾ ನೆಲೆಗಳು. ಈ ಕೃತಿಗೆ ಡಾ. ರಾಮಚಂದ್ರಪ್ಪ ಎ.ಬಿ., ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, ಡಾ. ಸಬಿತಾ ಬನ್ನಾಡಿ ಅವರ ಬೆನ್ನುಡಿಯ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ 'ಪುರಾಣ, ಚರಿತ್ರೆ ಮತ್ತು ಜಾನಪದಗಳು ಆಧುನಿಕ ಕನ್ನಡ ನಾಟಕಗಳ ವಿಷಯಗಳಾಗಿ ಹೆಚ್ಚು ಒತ್ತಾಸೆಯನ್ನು ಪಡೆದಿರುವುದು ಮೇಲ್ನೋಟಕ್ಕೆ ಕಾಣಿಸುವ ಸಂಗತಿಯಾಗಿದೆ ಎನ್ನುತ್ತಾರೆ' ಡಾ. ಸಬಿತಾ ಬನ್ನಾಡಿ. ಜೊತೆಗೆ 'ಈ ಅಧ್ಯಯನವು ಈ ಅಂಶಗಳನ್ನು ಸಾಂಸ್ಕೃತಿಕ ಚರಿತ್ರೆಯನ್ನಾಗಿ ಗುರುತಿಸುವುದು ವಿಶೇಷವಾಗಿದೆ. ರಾಜ, ಮತ, ಗಂಡು, ಅಭಿವೃದ್ಧಿ ಮೊದಲಾದ ಯಾಜಮಾನ್ಯ ನೆಲೆಗಳು ಹೇಗೆ ನಮ್ಮೆಲ್ಲಾ ಚಿಂತನೆಗಳನ್ನು ಆಕ್ರಮಿಸಿಕೊಂಡಿರುತ್ತವೆ ಎಂಬುದನ್ನು ತೆರೆದು ತೋರುವಲ್ಲಿ ಈ ಅಧ್ಯಯನವು ಯಶಸ್ವಿಯಾಗಿದೆ' ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ರತ್ನಾಕರ ಸಿ. ಕುನುಗೋಡು

ಡಾ.ರತ್ನಾಕರ ಸಿ. ಕುನುಗೋಡು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಎರೆಕೊಪ್ಪದವರು. ತಾಯಿ-ನಿಂಗಮ್ಮ, ತಂದೆ- ಚನ್ನಬಸಪ್ಪ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಸ್ತುತ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸ.ಪ್ರ.ದ.ಕಾಲೇಜು, ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯ, ರಂಗಭೂಮಿ, ಸಂಘಟನೆ, ಸಾಮಾಜಿಕ ಪರಿವರ್ತನೆಗಳತ್ತ ಒಲವು ಮೂಡಿಸಿಕೊಂಡು ಕ್ರಿಯಾಶೀಲರಾಗಿರುವ ಅವರು ಕವಿತೆಗಳು ಮತ್ತು ಸಂಶೋಧನಾ ಲೇಖನಗಳ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಪಿಹೆಚ್ ಡಿ ಗಾಗಿ ಬೇರು ಬಿಳಲು ಎಂಬ ಸಂಶೋಧನಾ ಮಹಾಪ್ರಬಂಧವನ್ನು ರಚಿಸಿ ಪ್ರಕಟಿಸಿದ್ದಾರೆ. ...

READ MORE

Related Books