ಬೆಳಗಾವಿ ಜಿಲ್ಲಾ ವಿಶಿಷ್ಟ ಸಾಧಕಿಯರು

Author : ಆಶಾ ಶಿವಾನಂದ ಯಮಕನಮರಡಿ

Pages 178

₹ 130.00




Year of Publication: 2015
Published by: ಆದಿತ್ಯ ಪಬ್ಲಿಕೇಷನ್ಸ್
Address: ಎಲ್.ಈ.ಜಿ-49, ಮಹಾಂತೇಶನಗರ, ಬೆಳಗಾವಿ.

Synopsys

ಲೇಖಕಿ ಆಶಾ ಯಮಕನಮರಡಿ ಅವರು ಬರೆದ ಕೃತಿ-ಬೆಳಗಾವಿ ಜಿಲ್ಲಾ ವಿಶಿಷ್ಟ ಸಾಧಕಿಯರು. ಕಿತ್ತೂರು ರಾಣಿ ಚೆನ್ನಮ್ಮಳ ಸಂಸ್ಥಾನ ವ್ಯಾಪ್ತಿಯ ಪ್ರದೇಶ ಎಂದೇ ಖ್ಯಾತಿಯ ಬೆಳಗಾವಿ ಜಿಲ್ಲೆಯಲ್ಲಿ ವಿಶೇಷವಾಗಿ ಮಹಿಳೆಯರು ಸಾಧಕಿಯರಿದ್ದು, ಅವರ ಸಾಧನೆಯ ಬದುಕನ್ನು ಲೇಖಕಿ ಕಟ್ಟಿಕೊಟ್ಟಿದ್ದಾರೆ.

ಸವದತ್ತಿಯ ಬಸಮ್ಮ ಅನಕ್ಷರಸ್ಥೆ, ಕೃಷಿಕಳು. ಬಿತ್ತನೆಯಿಂದ ಹಿಡಿದು ರಂಟೆ-ಕುಂಟೆಯಂತಹ ಕೆಲಸದ ಜೊತೆಗೆ ರಾಶಿಯಾದ ನಂತರ ಮಾರುಕಟ್ಟೆಗೆ ಧಾನ್ಯಗಳನ್ನು ಸಾಗಿಸುವ ವ್ಯವಹಾರದತನಕವೂ ಅವರದೇ ನೇತೃತ್ವ. ಲಕ್ಷ್ಮಿ ಅರಬೆಂಚಿ- ಜನಪದ ಸಾಹಿತ್ಯ ಸಂಗ್ರಾಹಕಿ.  ಪೂಜಾ ನಾಗಲಿಕರ್ ಎಂಬುವರು ವೈದ್ಯರಿದ್ದೂ ನೃತ್ಯದೆಡೆಗೆ ಅಪರಿಮಿತ ಆಸಕ್ತಿ, ಯೋಗ ಸಾಧಕಿ ಸತ್ಯ ಮೇಧಾವಿ, ಎಂಜಿನಿಯರಿಂಗ್ ಪದವೀಧರೆ. ಆದರೂ, ಯೋಗಾಸಕ್ತಿ ಅವರನ್ನು ಸೆಳೆದಿದ್ದು, ಜನಸಾಮಾನ್ಯರಿಗೆ ಯೋಗದ ಅರಿವು ಹಾಗೂ ಸಾಧನೆಗೆ ಪ್ರೇರಣೆಯಾಗಿ ತಾವೇ ವಿವಿದೆಡೆ ಹೋಗಿ ತರಬೇತಿ ನೀಡುತ್ತಾರೆ. ಜನರು ಅವರನ್ನು ಅಭಿಮಾನದಿಂದ ನಿತ್ಯ ಸಂಚಾರಿ ಎಂದೇ ಕರೆಯುತ್ತಾರೆ. ಹೀಗೆ, 22 ಜನ ಸಾಮಾನ್ಯ ಮಹಿಳೆಯರಲ್ಲಿ ಅಸಾಮಾನ್ಯ ಗುಣವನ್ನು ಗ್ರಹಿಸಿರುವ ಲೇಖಕಿ ಆಶಾ ಯಮಕನಮರಡಿ ಅವರು ಈ ಎಲ್ರಲ ಸಾಧಕಿಯರ  ಮಾದರಿ ಬದುಕು ಹಾಗೂ ಅನುಕರಣೀಯ ವ್ಯಕ್ತಿತ್ವವನ್ನು ಪರಿಚಯಿಸಿದ್ದು, ಸಾಹಿತ್ಯ ಸೇವೆಯ ಜವಾಬ್ದಾರಿ ದೃಷ್ಟಿಯಿಂದ ಗಮನಾರ್ಹವಾದುದು. 

About the Author

ಆಶಾ ಶಿವಾನಂದ ಯಮಕನಮರಡಿ

ಆಶಾ ಶಿವಾನಂದ ಯಮಕನಮರಡಿ ಅವರು ಮೂಲತಃ ಬೆಳಗಾವಿಯವರು. ರಾಜ್ಯಶಾಸ್ತ್ರ ಪದವೀಧರೆ. ಭಾವಬಂಧ, ಬೆಡಗಿನ ನವಿಲುಗರಿ (ಕವನ ಸಂಕಲನಗಳು), ಚಿಂತನಬಂಧ (ಅಂಕಣ ಬರೆಹ), ಬೆಳಗಾವಿ ಜಿಲ್ಲೆಯ ಸಾಧಿಕಿಯರ ಪರಿಚಯ-‘ಬೆಳಗಾಗಿ ಜಿಲ್ಲಾ ವಿಶಿಷ್ಟ ಸಾಧಕಿಯರು’ಕೃತಿ ಪ್ರಕಟಗೊಂಡಿದೆ. ಕಿತ್ತೂರು ರಾಣಿ ಚೆನ್ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿ ವೇದಿಕೆ, ಬೆಳಗಾವಿ, ಅಧ್ಯಕ್ಷತೆವಹಿಸಿದ್ದು, ಬೆಳಗಾವಿ ಜಿಲ್ಲಾ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಹಾಗೂ ಸಮಾಜ ಸೇವಾ ಸಂಸ್ಥೆಗಳ ಸದಸ್ಯತ್ವ ಹೊಂದಿದ್ದಾರೆ. ಉದಯ ಟಿ.ವಿ.ಯ ‘ಸಿರಿ’ಯಲ್ಲಿ ಊಲನ್ ಹೆಣಿಕೆ ಕುರಿತು ಕಾರ್ಯಕ್ರಮ, ಬೆಳಗಾವಿ ಆಕಾಶವಾಣಿಯಲ್ಲಿ ವೇಣುಧ್ವನಿಯಲ್ಲಿ ಹಲವು ...

READ MORE

Related Books