ಬೆಳ್ದಿಂಗ್ಳಪ್ಪನ ಪೂಜೆ

Author : ಅಗ್ರಹಾರ ಕೃಷ್ಣಮೂರ್ತಿ

Pages 80

₹ 18.00
Year of Publication: 1999
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಅಗ್ರಹಾರ ಕೃಷ್ಣ ಮೂರ್ತಿಯವರ ಪ್ರಕಾರ ಜಾನಪದ ಸಂಪ್ರದಾಯಗಳಲ್ಲಿ ಪೂಜೆಯೂ ಒಂದು ಪ್ರಮುಖ ಅಂಶ. ಲೇಖಕರು ಬೆಳ್ದಿಂಗಳಪ್ಪನ ಪೂಜೆ ಕುರಿತು ಈ ಗ್ರಂಥದಲ್ಲಿ ವಿವರಿಸಿದ್ದಾರೆ. ಜನಪದ ಸಂಸ್ಕೃತಿಯ ಭಾಗವಾಗಿರುವ ಬೆಳ್ದಿಂಗಳಪ್ಪನ ಪೂಜೆಯ ಸಂಪ್ರದಾಯ, ಸಾಂಸ್ಕ್ರತಿಕ ವಿಷಯಗಳನ್ನು ಈ ಕೃತಿಯು ಪರಿಚಯಿಸುತ್ತದೆ. ಬೆಳ್ದಿಂಗಳಪ್ಪನ ಪೂಜೆ ಯಾವಾಗ, ಎಲ್ಲಿ ಯಾವ ಸಮಯದಲ್ಲಿ , ಹೇಗೆ ಹುಟ್ಟಿಕೊಂಡಿದ್ದು ,ಅದರ ಆರಂಭ , ಪೂಜೆಯ ಒಟ್ಟು ಸಾಂಕೇತಿಕತೆ ಈ ಎಲ್ಲ ಸಂಗತಿಗಳನ್ನು ಲೇಖಕರು ಈ ಪುಸ್ತಕದಲ್ಲಿ ವಿವರವಾಗಿ ಕಟ್ಟಿಕೊಟ್ಟಿದ್ದಾರೆ.

About the Author

ಅಗ್ರಹಾರ ಕೃಷ್ಣಮೂರ್ತಿ
(18 January 1953)

ಲೇಖಕ ಅಗ್ರಹಾರ ಕೃಷ್ಣಮೂರ್ತಿಯವರು ಜನಿಸಿದ್ದು ಜನವರಿ 18-1953ರಲ್ಲಿ. ತುಮಕೂರು ಜಿಲ್ಲೆಯ ಜೆಟ್ಟಿ ಅಗ್ರಹಾರದಲ್ಲಿ ಜನಿಸಿದ ಕೃಷ್ಣಮೂರ್ತಿ ಕರ್ನಾಟಕದ ಅತ್ಯಂತ ಅಲ್ಪಸಂಖ್ಯಾತ ಜಾತಿಗಳಲ್ಲೊಂದಾದ ಜೆಟ್ಟಿ ಜನಾಂಗದ ಏಕಮಾತ್ರ ಲೇಖಕರು ಎನ್ನಬಹುದು. ಎಪ್ಪತ್ತರ ದಶಕದಲ್ಲಿ ಹಲವು ಎಳೆಯ ಲೇಖಕರನ್ನು ಬೆಳೆಸಿದ ಸಮಾಜವಾದಿ ಯುವಜನ ಸಭಾದಲ್ಲಿ ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್, ಗೋಪಾಲಗೌಡ ಮೊದಲಾದವರ ಶಿಷ್ಯರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ಹಲವು ಗುರುಗಳಿಗೆ ಶಿಷ್ಯವೃತ್ತಿ ಮಾಡಿದವರು. ಬೆಂಗಳೂರಿನಲ್ಲಿ ಕನ್ನಡ ಎಂ.ಎ.ಓದಿದ ಕೃಷ್ಣಮೂರ್ತಿ, ಒಂದೆರಡು ತಿಂಗಳು ಬಂಗಾರಪ್ಪನವರ ಆಫೀಸಿನಲ್ಲಿ ಸೆಕ್ರೆಟರಿಯಾಗಿ ಕೆಲಸ ಮಾಡಿದ್ದಾರೆ. ಆನಂತರ ಒಂದೆರಡು ವರ್ಷ ಕಾಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಕೆಲವು ವರ್ಷ ಆಕಾಶವಾಣಿಯಲ್ಲೂ ಕೆಲಸ ...

READ MORE

Related Books