ಬೆಂಪೂರೇಶ್ವರಸ್ಥಾನದ ದೇವಾಲಯಗಳು-ಶಾಸನಗಳು

Author : ಪಿ.ವಿ.ಕೃಷ್ಣಮೂರ್ತಿ

Pages 82

₹ 250.00




Year of Publication: 2022
Published by: ಧಾಮೋದರ ಪ್ರಕಾಶನ

Synopsys

ಲೇಖಕ ಪಿ.ವಿ.ಕೃಷ್ಣಮೂರ್ತಿ ಅವರು ಶಾನಗಳ ಕುರಿತು ಬರೆದ ಕೃತಿ ಬೆಂಪೂರೇಶ್ವರಸ್ಥಾನದ ದೇವಾಲಯಗಳು-ಶಾಸನಗಳು. ಇಂದು ಬೆಂಗಳೂರು ನಗರದಲ್ಲಿರುವ ಬೆಂಪೂರೇಶ್ವರ ಸ್ಥಾನವೆಂಬ ಬೇಗೂರು ಅತಿ ಪ್ರಾಚೀನ ಇತಿಹಾಸ ಪರಂಪರೆಯುಳ್ಳ ಸ್ಥಳ. ಇಲ್ಲಿನ ನಾಗೇಶ್ವರ ದೇವಾಲಯದ ಸಂಕೀರ್ಣಗಂಗ-ಚೋಳರ ಕಾಲದ ವಾಸ್ತುಶಿಲ್ಪ ರಚನೆಗಳಿಂದ ಕೂಡಿ ವಿಶಿಷ್ಠವಾಗಿದೆ. ಇಲ್ಲಿ ಬೆಂಗುಳೂರನ್ನು ಉಲ್ಲೇಖಿಸುವ ಮೊದಲ ಶಾಸನ ಹಾಗೂ ಅಂದಿನ ಕಾಲದ ಯುದ್ಧ ಬೀಕರತೆ ನೈಜತೆಯನ್ನು ಬಿಂಬಿಸುವ ಪ್ರಸಿದ್ಧ ಬೇಗೂರು ವೀರಗಲ್ಲು ಶಿಲ್ಪವು ಜಗತ್ಪ್ರಸಿದ್ಧವಾಗಿದೆ. ಇಷ್ಟು ಮಹತ್ವವುಳ್ಳ ಈ ಕ್ಷೇತ್ರದ ಬಗ್ಗೆ ಒಂದು ಸ್ತೂಲ ಪರಿಚಯದ ಕೃತಿ ಇದಾಗಿದೆ. 

About the Author

ಪಿ.ವಿ.ಕೃಷ್ಣಮೂರ್ತಿ
(05 January 1951)

ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು  ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ‍.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ...

READ MORE

Related Books