ಬೇಂದ್ರೆ ಕಾವ್ಯ ಮತ್ತು ಶರೀರ ಶಾಸ್ತ್ರ

Author : ವಸಂತ ಕುಲಕರ್ಣಿ

Pages 84

₹ 50.00




Year of Publication: 2014
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಬೇಂದ್ರೆ ಕಾವ್ಯಕ್ಕೂ ಶರೀರಶಾಸ್ತ್ರಕ್ಕೂ (anatomy) ಎಲ್ಲಿಂದೆಲ್ಲಿಯ ಸಂಬಂಧವಯ್ಯ ಎಂದು ಯಾರಾದರೂ ಕೇಳಬಹುದು. ಆದರೆ ಎರಡಕ್ಕೂ ಸಂಬಂಧವಿದೆ ಎನ್ನುತ್ತಿರುವವರು ಯಾರೋ ಸಾಮಾನ್ಯರಲ್ಲ, ಅಥವಾ ಆ ಕಲ್ಪನೆ ಕವಿಸಮಯವೂ ಅಲ್ಲ. ಹಾಗೆ ಹೇಳುತ್ತಿರುವವರು ವೃತ್ತಿಯಿಂದ ವೈದ್ಯರಾದ ಡಾ.ವಸಂತ ಅನಂತ.ಕುಲಕರ್ಣಿ. 

ಬೇಂದ್ರೆಯವರ ಸಂಗದಲ್ಲಿ ಸಾಹಿತ್ಯದ ಸ್ಫೂರ್ತಿ ಪಡೆದ ಅವರು ತಮ್ಮದೇ ಆದ ವಿಚಾರಗಳನ್ನು ವರಕವಿಯ ಕಾವ್ಯಕೃಷಿಯ ಹಿನ್ನೆಲೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ವಿಶಿಷ್ಟ ಕೃತಿಯನ್ನು ’ಅಭಿನವ’ ಪ್ರಕಟಿಸಿದೆ. 

About the Author

ವಸಂತ ಕುಲಕರ್ಣಿ

ವೃತ್ತಿಯಿಂದ ವೈದ್ಯರು ಮತ್ತು ಪ್ರವೃತ್ತಿಯಿಂದ ವೈದ್ಯ ಸಾಹಿತಿಗಳೂ ಆದ ಅನಂತ ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರು. ಮಹಾತ್ಮ ಗಾಂಧಿ ಅವರಿಗೆ ನಿಕಟವರ್ತಿಯಾಗಿದ್ದ ತಂದೆ ಅನಂತರಾವ ಪ್ರಸಿದ್ಧ ವಕೀಲರು ತಾಯಿ ಲಕ್ಷ್ಮೀಬಾಯಿಯವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದವರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಅಥಣಿಯಲ್ಲಿ ಪಡೆದ ಅವರು ಹುಬ್ಬಳ್ಳಿಯ ಕೆ.ಎಂ.ಸಿ.ಯಲ್ಲಿ ಎಂ.ಬಿ.ಬಿ.ಎಸ್. ಹಾಗೂ ಮಿರಜದ ಜಿ.ಎಂಸಿಯಲ್ಲಿ ಎಂ.ಡಿ. ಮುಗಿಸಿದರು. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜ, ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜುಗಳಲ್ಲಿ ನಿರಂತರ ವೈದ್ಯ ಶಿಕ್ಷಣದಲ್ಲಿ ನಿರಂತರ ೪೫ ವರುಷಗಳ ಸೇವೆ-ಪ್ರಾಧ್ಯಾಪಕ ಹಾಗೂ ...

READ MORE

Related Books