ಬೇಂದ್ರೆ ಕಾವ್ಯದ ಪ್ರತಿಮಾ ಸೃಷ್ಟಿ

Author : ಶೇಷ ನವರತ್ನ

Pages 1




Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಈ ಶತಮಾನದ ಅತ್ಯಂತ ಪ್ರಭಾವಶಾಲೀ ದಾರ್ಶನಿಕ ಕವಿಯಾದ ಡಾ. ಬೇಂದ್ರೆ, ಕನ್ನಡ ಜನವಾಣಿಯಲ್ಲಿಯೇ ಅಂತಃಕರಣದ ಜಿಜ್ಞಾಸೆಯ ಅನಂತತೆಯನ್ನು, ಪರಮಾರ್ಥದರ್ಶನದ ತಾತ್ವಿಕ ಔನ್ನತ್ಯವನ್ನು ಸಮರ್ಥವಾಗಿ ಅಭಿವ್ಯಕ್ತಗೊಳಿಸಿದ್ದಾರೆ. ಬೇಂದ್ರೆ ದರ್ಶನ Pedantic ಎನಿಸುವುದಿಲ್ಲ. ಏಕೆಂದರೆ, ಅದು ಪುಸ್ತಕಪಾಂಡಿತ್ಯದಿಂದ ಉದ್ಭವವಾದ ಬೌದ್ಧಿಕವಿಲಾಸವಲ್ಲ. ಊಹಾಚಮತ್ಕಾರವಲ್ಲ, ಜೀವನದಿಂದ ಒಡಮೂಡಿದ ಅರಿವಿನ ಆಮೋದವದು. ಅಂತೆಯೇ ಬೇಂದ್ರದರ್ಶನಕ್ಕೆ ಜೀವಂತಿಕೆಯಿದೆ. ಸ್ವಂತಿಕೆಯಿದೆ. ಪ್ರಗಲ್ಯತೆಯಿದೆ. ಹೀಗೆ ಬೇಂದ್ರೆ ಸಾಹಿತ್ಯದ ಅಧ್ಯಾಯನ ಮಾಡಬೇಕೆಂದಿರುವವರಿಗೆ ಈ ಕೃತಿ ಒಂದು ಆಕರ ಗ್ರಂಥದಂತಿದೆ ಎಂಬುದು ’ಬೇಂದ್ರೆ ಕಾವ್ಯದ ಪ್ರತಿಮಾ ಸೃಷ್ಟಿ’ಯನ್ನು ಬಲ್ಲವರ ಮಾತು. 

ಶೇಷನವರತ್ನ ಅವರು ಬರೆದಿರುವ ಕೃತಿ ಬೇಂದ್ರೆ ಸಾಹಿತ್ಯ ಕುರಿತ ಪುಸ್ತಕಗಳಲ್ಲೇ ಅನುಪಮವಾದುದು. 

About the Author

ಶೇಷ ನವರತ್ನ
(05 May 1950 - 15 December 2013)

ಶೇಷ ನವರತ್ನ ಅವರು 1950 ರ ಮೇ 5ರಂದು ಧಾರವಾಡದಲ್ಲಿ ಜನಿಸಿದರು. ಎಂ.ಎ. (ಇಂಗ್ಲಿಷ್) ಪದವೀಧರರು. ಸಾಹಿತ್ಯಕ ಮತ್ತು ತತ್ವಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕಜಾಜೂರು ಪಿಯು ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತರು.  ಧರ್ಮಗಳು, ಕರ್ಮ ಸಿದ್ದಾಂತ ಮತ್ತು ಪುನರ್ಜನ್ಮ ಮನಸೋಲ್ಲಾಸ, ನಿರ್ಣಯ ಸಿಂಧು, ಮಹಾಭಾರತದಲ್ಲಿ ಧರ್ಮ, ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ (ಸಾಹಿತ್ಯಕ-ತತ್ವಶಾಸ್ತ್ರೀಯ). ಹರೆಯದ ಹುಚ್ಚು, ಊರ್ಮಿಳಾ, ಮಲನಾಡ ಗಿಣಿ, ಮೀರಾಬಾಯಿ (ಕವನ ಸಂಕಲನ).  ಕಬೀರ್, ಸೂರದಾಸ್ ಮುಂತಾದವರ ಕವಿತೆಗಳ ಅನುವಾದ. ಅವರಿಗೆ ವೇದಾಂತರತ್ನ, ಉಜ್ಜನಿ ಸದ್ಧರ್ಮ ಪೀಠ, ಆರ್ಯ ಸಮಾಜ ಮುಂತಾದ ಗೌರವಗಳು ಸಂದಿವೆ. 2013ರ ಡಿಸೆಂಬರ್ 15ರಂದು ನಿಧನರಾದರು. ...

READ MORE

Related Books