ಬೇಂದ್ರೆಯವರು ಕವಿ ಹಾಗೂ ಮಾತುಗಾರ. ವಯೋವೃದ್ಧ ಬೇಂದ್ರೆ ಹಾಗೂ ಯುವಕ ಕವಿ ಚಂದ್ರಶೇಖರ ಪಾಟೀಲ ಅವರ ನಡುವಿನ ವಾಗ್ಯುದ್ಧವನ್ನು ಸೊಗಸಾಗಿ ಕಟ್ಟಿಕೊಡಲಾಗಿರುವ ಕೃತಿಯಿದು. ಬೇಂದ್ರೆಯವರ ಬಗ್ಗೆ ವಿಮರ್ಶಾತ್ಮಕ ಅನ್ನುವುದಕ್ಕಿಂತ ಹೆಚ್ಚಾಗಿ ಕಟುವಾದ ನೆಲೆಯಲ್ಲಿ ಮುಖಾಮುಖಿ ಆಗುವ ಕೃತಿಯಿದು. ಅಂಬಿಕಾತನಯದತ್ತರ ಕವಿತೆಗಳ ಬಗ್ಗೆ ಪ್ರೀತಿ-ಮೆಚ್ಚುಗೆಯ ಜೊತೆಯಲ್ಲಿಯೇ ಬೇಂದ್ರೆಯವರ ಬಗೆಗೆ ತಕರಾರು ವ್ಯಕ್ತಪಡಿಸುತ್ತದೆ. ಬೇಂದ್ರೆಯವರ ಇನ್ನೊಂದು ಮುಖವನ್ನು ಈ ಕೃತಿ ಅನಾವರಣ ಮಾಡುತ್ತದೆ.