ಬೇಂದ್ರೆಯವರ ಮರಾಠಿ ಸಾಹಿತ್ಯ ಕೃಷಿ

Author : ವಿಠಲರಾವ್ ಟಿ. ಗಾಯಕ್ವಾಡ್

Pages 126

₹ 40.00




Year of Publication: 2010
Published by: ಪ್ರಸಾರಾಂಗ, ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌
Address: ಸಾಧನಕೇರಿ, ಧಾರವಾಡ-8

Synopsys

ಮರಾಠಿ ಮನೆಮಾತಿನ ಕನ್ನಡದ ವರಕವಿ ದ.ರಾ.ಬೇಂದ್ರೆಯವರು ಮರಾಠಿಯಲ್ಲಿ ರಚಿಸಿ, ಪ್ರಕಟಿಸಿದ ಮೂರು ಕೃತಿಗಳು ಮಹಾರಾಷ್ಟ್ರ ಮತ್ತು ಕರ್ನಾಟಕಗಳ ನಡುವಿನ ಧಾರ್ಮಿಕ ಸಾಂಸ್ಕೃತಿಕ, ಭಾಷಿಕ ಬಾಂಧವ್ಯವನ್ನು ಸುಂದರವಾಗಿ ಮನಗಾಣಿಸುವ ನಿದರ್ಶನವಾಗಿವೆ. ಬೇಂದ್ರೆಯವರ ಮರಾಠಿ ಗದ್ಯದ ವಿಚಾರಶೀಲತೆ ಮತ್ತು ಪದ್ಯವಿನ್ಯಾಸದ ಹೃದ್ಯ ಗುಣಗಳನ್ನು ವಿದ್ಧಲರಾವ ಗಾಯಕವಾಡರ ಪ್ರಬಂಧ ದಾಖಲಿಸಿದೆ.

About the Author

ವಿಠಲರಾವ್ ಟಿ. ಗಾಯಕ್ವಾಡ್
(22 July 1960)

ಡಾ.ವಿಠಲರಾವ್ ಟಿ. ಗಾಯಕ್ವಾಡ್ ಅವರು ಮೂಲತಃ ಬಳ್ಳಾರಿಯವರು. 22-07-1960ರಂದು ಜನಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಅಧ್ಯಯನ ಮತ್ತು ವಿಮರ್ಶೆ, ಮರಾಠಿ ಸಾಹಿತ್ಯ ಅಧ್ಯಯನ ಮತ್ತು ವಿಮರ್ಶೆ, ಸಾಂಸ್ಕೃತಿಕ ಮತ್ತು ತೌಲನಿಕ ಅಧ್ಯಯನ, ಭಾಷಾಂತರ ಅಧ್ಯಯನ, ಮರಾಠಿ ಮತ್ತು ಇಂಗ್ಲಿಷಿನಿಂದ ಕೃತಿಗಳ ಭಾಷಾಂತರ, ಮಹಿಳಾ ಅಧ್ಯಯನ (ಲಿಂಗ ಸಂಬಂಧಿ ಅಧ್ಯಯನ) ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ಲಜ್ಜಾಗೌರಿ (ಅನುವಾದ), ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ, ಶ್ರೀ ರಾಮಾಯಣ ದರ್ಶನಂ ನಲ್ಲಿ ಪೌರಾಣಿಕತೆ, ...

READ MORE

Related Books