ಬೇಂದ್ರೆಯವರ ಸಾಹಿತ್ಯದಲ್ಲಿ ಶರಣ ಚಿಂತನೆ

Author : ಜಿ. ಕೃಷ್ಣಪ್ಪ

₹ 30.00




Published by: ವಂಶಿ ಪಬ್ಲಿಕೇಷನ್ಸ್

Synopsys

ಜಿ. ಕೃಷ್ಣಪ್ಪ ಅವರು ’ಬೇಂದ್ರೆ ಕೃಷ್ಣಪ್ಪ’ ಎಂದೇ ಸಾಹಿತ್ಯಲೋಕದಲ್ಲಿ ಚಿರಪರಿಚಿತರು. ಅವರು ಬೇಂದ್ರೆಯವರ ಕವಿತೆ-ಸಾಹಿತ್ಯದಲ್ಲಿ ಇರುವ ಶರಣ ಚಿಂತನೆಯನ್ನು ಈ ಪುಟ್ಟ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನೆಲ ಮತ್ತು ನೆಲೆಯನ್ನು ಗಟ್ಟಿಗೊಳಿಸಿದ ವಚನ ಸಾಹಿತ್ಯ ಮತ್ತು ಅದು ಉಂಟು ಮಾಡಿದ ಪರಿಣಾಮ ಅಗಾಧವಾದುದು. ಕಲ್ಯಾಣದಲ್ಲಿ ನಡೆದಿತೆನ್ನಲಾದ ವಚನ ಚಳುವಳಿಯಲ್ಲಿ ಅಲ್ಲಮ ಮತ್ತು ಬಸವಣ್ಣನವರ ಪಾತ್ರ ಪ್ರಮುಖವಾದುದು. ಬೇಂದ್ರೆಯವರಿಗೆ ಅಲ್ಲಮನ ಮೇಲೆ ವಿಶೇಷ ಪ್ರೀತಿ ಇರುವುದಾದರೂ ಉಭಯ ನಾಯಕರ ಬಗ್ಗೆ ಅಪಾರ ಗೌರವವಿದೆ. ಬಸವಣ್ಣನವರ ಕೊನೆಯ ದಿನಗಳನ್ನು ಕುರಿತು ಬೇಂದ್ರೆಯವರು ’ತಲೆದಂಡ’ ಎಂಬ ನಾಟಕ ಬರೆಯಲು ಉದ್ದೇಶಿಸಿದ್ದರು. ಆ ನಾಟಕದ ಭಾಗವಾಗಿ ಕೆಲವು ಸೊಗಸಾದ ಕವಿತೆಗಳನ್ನೂ ಬೇಂದ್ರೆಯವರು ರಚಿಸಿದ್ದಾರೆ. ಶರಣರ ಚಿಂತನೆಗಳು ಬೇಂದ್ರೆಯವರ ಸಾಹಿತ್ಯದಲ್ಲಿ ಹೇಗೆ ಬೆರೆತು ಹೊಸರೂಪ ಪಡೆದಿವೆ ಎಂಬ ಅಂಶವನ್ನು ಕೃಷ್ಣಪ್ಪನವರು ವಿವರಿಸಿದ್ದಾರೆ.

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books