ಬೆಂಗಳೂರಿನ ಇತಿಹಾಸ

Author : ಬ.ನ. ಸುಂದರರಾವ್ (ವನವಿಹಾರಿ)

₹ 395.00




Published by: ಅಂಕಿತ ಪುಸ್ತಕ
Address: ಗಾಂಧಿ ಬಜಾರ್‌ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 08026617100

Synopsys

ಲೇಖಕ ಬ.ನ. ಸುಂದರರಾವ್ ಅವರ ಇತಿಹಾಸಕ್ಕೆ ಸಂಬಂಧಪಟ್ಟ ಕೃತಿ ʻಬೆಂಗಳೂರಿನ ಇತಿಹಾಸʼ. ಪುಸ್ತಕವು ಕೆಂಪೇಗೌಡರ ಕಾಲದಿಂದ ಇಂದಿನವರೆಗೆ ಇರುವ ಮಹಾನಗರ ಬೆಂಗಳೂರಿನ ಹುಟ್ಟು, ಬೆಳವಣಿಗೆ, ಕುರಿತಾದ ಇತಿಹಾಸದ ಸಮಗ್ರ ಚಿತ್ರಣವನ್ನು ಕಟ್ಟಿಕೊಡುತ್ತದೆ. ಇದರಲ್ಲಿ ʻಬೆಂಗಳೂರುʼ ಎಂಬ ಹೆಸರು ಬಂದ ಕುರಿತಾಗಿಯೂ ಹೇಳಲಾಗುತ್ತಿದೆ. ಹಾಗಾಗಿ ಕರ್ನಾಟಕ ರಾಜಧಾನಿಯ ಬಗೆಗಿನ ಹಲವಾರು ವಿಚಾರಗಳನ್ನು ಇಲ್ಲಿ ತಿಳಿಯಬಹುದಾಗಿದೆ.

About the Author

ಬ.ನ. ಸುಂದರರಾವ್ (ವನವಿಹಾರಿ)
(26 March 1918 - 08 October 1986)

ಮೂಲತಃ ಬೆಂಗಳೂರು ದಕ್ಷಿಣ ತಾಲೂಕಿನ ವರ್ತೂರಿನವರಾದ ಬ.ನ.ಸುಂದರಾವ್ ಅವರ ಕಾವ್ಯನಾಮ-ವನವಿಹಾರಿ. ತಂದೆ ನರಸಿಂಹ ಮೂರ್ತಿ,  ತಾಯಿ ವಸಂತ ಲಕ್ಷ್ಮಮ್ಮ. ಇವರ ತಾತ ರಾಮಣ್ಣನವರು ಸಂಸ್ಕೃತ, ಕನ್ನಡ, ತೆಲುಗು ಭಾಷೆಯಲ್ಲಿ ಪಂಡಿತರು. ವರ್ತೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣವನ್ನು ಇಮ್ಮಡಿ ಹಳ್ಳಿಯ ಶಂಕರನಾರಾಯಣದಲ್ಲಿ ಹಾಗೂ ಹೈಸ್ಕೂಲು ಶಿಕ್ಷಣವನ್ನು ಮಾಗಡಿಯಲ್ಲಿ , ನ್ಯಾಷನಲ್ ವಿದ್ಯಾ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದರು. ಕೆಲಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದು, ನಂತರ ಮೈಸೂರು ಸರಕಾರದ ವಿದ್ಯುಚ್ಛಕ್ತಿ ಮಂಡಲಿಯಲ್ಲಿ ಲೆಕ್ಕ ತನಿಖಾಧಿಕಾರಿಯಾಗಿದ್ದರು. ಅಂದಿನ ಶಿಕ್ಷಣ ಇಲಾಖೆಯ ನಿರ್ದೇಶಕ ಕೆ.ಎನ್. ಕಿಣಿಯವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಶಿಕ್ಷಣಗ್ರಂಥ ‘ನಮ್ಮ ವಿದ್ಯಾಭ್ಯಾಸ; ಕೃತಿ ರಚಿಸಿದ್ದಾರೆ. ಈ ಕೃತಿ ...

READ MORE

Related Books