ಬೆಂಕಿಯಲ್ಲಿ ಬೆಂದ ಬಂಗಾರ

Author : ವಿಶ್ವನಾಥಶೆಟ್ಟಿ (ಪಾಂಗಾಳ)

Pages 149

₹ 150.00




Year of Publication: 2018
Published by: ಅಭಿಜಿತ್ ಪ್ರಕಾಶನ
Address: # ಎ/404, ವಿನಾಯಕ ಆಶೀಷ್, ಎಂ.ಎಂ.ಎಂ. ರಸ್ತೆ, ಪಿ & ಟಿ ಕಾಲೊನಿ ಹತ್ತಿರ, ಮುಲುಂದ (ಪಶ್ಚಿಮ) ಮುಂಬೈ-400080

Synopsys

ಲೇಖಕ ವಿಶ್ವನಾಥ ಶೆಟ್ಟಿ (ಪಾಂಗಾಳ) ಅವರ ಕೃತಿ-ಬೆಂಕಿಯಲ್ಲಿ ಬೆಂದ ಬಂಗಾರ. ಮರಾಠಿ ವಾಙ್ಮಯದಲ್ಲಿ ಸಂತ ಶ್ರೀ ಜ್ಞಾನೇಶ್ವರರಿಗೆ ವಿಶಿಷ್ಟ ಸ್ಥಾನವಿದೆ. ಶ್ರೀ ಸಂತ ಜ್ಞಾನೇಶ್ವರರ ಜೀವನ ಚರಿತ್ರೆ ಇದು. ಇವರ ಬದುಕು ಅನೇಕ ಅಗ್ನಿದಿವ್ಯಗಳನ್ನು ಹಾದು ಬಂದಿದೆ. ಹಿಂದೂ ಧರ್ಮದಲ್ಲಿಯ ಅಸಂಖ್ಯ ಲೋಪದೋಷಗಳನ್ನು ನಿವಾರಿಸಲು, ಮೌಢ್ಯಗಳನ್ನು ನಿವಾರಿಸಲು ಯತ್ನಿಸಿದರು. ಸಂಸ್ಕೃತದಲ್ಲಿಯ ಭಗವದ್ಗೀತೆಯನ್ನು ಸರಳೀಕರಣಗೊಳಿಸಿ ಅದನ್ನು ಮರಾಠಿಯಲ್ಲಿ ‘ಜ್ಞಾನೇಶ್ವರಿ’ ಶೀರ್ಷಿಕೆಯಡಿ ಕೃತಿಯನ್ನು ನೀಡಿದ್ದಾರೆ. ಅನುಭವಾಮೃತ ಎಂಬುದು ಇವರ ಮೇರು ಕೃತಿ. ನರಹರಿತೀರ್ಥರಿಂದ ಕರ್ನಾಟಕದಲ್ಲಿ ದಾಸಕೂಟ ಆರಂಭವಾದರೆ ಅದಕ್ಕೂ ಸ್ವಲ್ಪ ಮುಂಚೆ ಮಹಾರಾಷ್ಟ್ರದಲ್ಲಿ ಸಂತ ಶ್ರೀ ಜ್ಞಾನೇಸ್ವರರಿಂದ ವಾರಕರಿ ಪಂಥಕ್ಕೆ ನಾಂದಿ ಹಾಡಿದರು. ಈ ಎರಡೂ ಪಂಥಗಳಲ್ಲಿಯ ಸಾಮ್ಯತೆ ಎಂದರೆ ಕೃಷ್ಣಭಕ್ತಿ. ಇದು ವಿಠಲ ಭಕ್ತಿಯೂ ಹೌದು. ಕನ್ನಡಿಗರು ಹಾಗೂ ಮರಾಠಿಗಳು ಇದನ್ನು ಒಪ್ಪಿದ್ದಾರೆ. ಪಂಢರಾಪುರದ ವಿಠಲನೇ ಇಲ್ಲಿಯ ಕೇಂದ್ರ ಶಕ್ತಿ. ಸಂತ ಜ್ಞಾನೇಶ್ವರರು 13ನೇ ಶತಮಾನದವರು ಎಂದು ಹೇಳಲಾಗುತ್ತಿದೆ. ಸಂತರ ಬದುಕು-ದಿವ್ಯದೃಷ್ಟಿಯನ್ನು ಕಟ್ಟಿಕೊಡುವ ಕೃತಿ. 

About the Author

ವಿಶ್ವನಾಥಶೆಟ್ಟಿ (ಪಾಂಗಾಳ)
(10 May 1948)

ಲೇಖಕ ವಿಶ್ವನಾಥ ಶೆಟ್ಟಿ (ಪಾಂಗಾಳ) ಅವರು ಮೂಲತಃ ಉಡುಪಿ ಜಿಲ್ಲೆಯ ಪಾಂಗಾಳದವರು. ತಂದೆ ಅಂತಯ್ಯಶೆಟ್ಟಿ, ತಾಯಿ ರಾಧಾ. ಪಾಂಗಾಳದಲ್ಲಿ ಪ್ರಾಥಮಿಕ ಹಾಗೂ ದಂಡತೀರ್ಥದಲ್ಲಿ ಪ್ರೌಢಶಿಕ್ಷಣ, ಮುಂಬೈಯ ಶಾರದಾ ವಿಜಯ ರಾತ್ರಿ ಶಾಲೆಯಲ್ಲಿ ಕಾಲೇಜು ಶಿಕ್ಷಣ ಪೂರೈಸಿದರು. ಬಾಹ್ಯ ವಿದ್ಯಾರ್ಥಿಯಾಗಿ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಬಿ.ಎ ಪದವೀಧರರು. ಇವರು ಬರೆದ ಕಥೆ,ಕವನ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪುಣೆಯಲ್ಲಿ ಬಂಟರ ಸಂಘದಿಂದ ಪ್ರಕಟವಾಗುವ ತ್ರೈಮಾಸಿಕ ‘ಕಲ್ಪವೃಕ್ಷ’ ಪತ್ರಿಕೆಯ ಸಂಪಾದಕರು. ಮರಾಠಿಗರಿಗೆ ಕನ್ನಡ ಕಲಿಸುವ ಚಟುವಟಿಕೆಯಲ್ಲಿ ಉತ್ಸುಕರು. ಪುಣೆಯಲ್ಲಿ ಕನ್ನಡ ಸಂಘ, ತುಳುಕೂಟದ ಸದಸ್ಯರು.  ಶ್ರೀ ಅಯ್ಯಪ್ಪ ಸ್ವಾಮಿ ...

READ MORE

Related Books