ಬೆಪ್ಪು ತಕ್ಕಡಿ ಬೋಳೇಶಂಕರ

Author : ಚಂದ್ರಶೇಖರ ಕಂಬಾರ

Pages 72

₹ 70.00




Year of Publication: 1991
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 26617100, 26617755

Synopsys

ರಷ್ಯಾದ ಸಾಹಿತಿ ಟಾಲ್‌ಸ್ಟಾಯ್ ಅವರ ಕತೆ ಆಧರಿಸಿ ಚಂದ್ರಶೇಖರ ಕಂಬಾರರು ’ಬೆಪ್ಪುತಕ್ಕಡಿ ಬೋಳೇಶಂಕರ’ ನಾಟಕ ರಚಿಸಿದ್ದಾರೆ. ಈ ನಾಟಕವು ಸಮಾಜವಾದ, ಸಮಾನತೆ ಮತ್ತು ಶ್ರಮಸಂಸ್ಕೃತಿಯ ಮಹತ್ವವನ್ನು ಪ್ರತಿಪಾದಿಸುತ್ತದೆ. ಶ್ರಮ ಸಂಸ್ಕೃತಿಯ ಮೇಲೆ ನಂಬಿಕೆ ಇರುವವ ಬೋಳೇಶಂಕರ ಸಹಜ ಸಂತನಂತೆ ಬದುಕುತ್ತಿರುತ್ತಾನೆ. ಅವನ ಅಣ್ಣಂದಿರು ನಿರುಪಯುಕ್ತ ಭೂಮಿಯನ್ನು ಕೊಟ್ಟರೂ ಚಿಂತಿಸದೆ ಅದರಲ್ಲಿಯೇ ದುಡಿದು ನೆಮ್ಮದಿಯನ್ನು ಕಾಣುವ ಸ್ವಭಾವದವನು. ಪಿಶಾಚಿಗಳು ಬೋಳೇಶಂಕರನನ್ನು ಸಿಟ್ಟಿಗೇಳಿಸಿ, ಅವನ ಮನಸ್ಸನ್ನು ಪ್ರವೇಶಿಸಲು ನಡೆಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಪಿಶಾಚಿಗಳು, ಬೋಳೇಶಂಕರನಿಗೆ ಹೊಟ್ಟೆನೋವು ವಾಸಿಮಾಡುವ ಬೇರನ್ನು, ಧಾನ್ಯಗಳನ್ನು ಚಿನ್ನವನ್ನಾಗಿ ಮಾಡುವ ಮತ್ತು ಹುಲ್ಲಿನ ಎಸಳುಗಳನ್ನು ಸೈನಿಕರನ್ನಾಗಿ ಮಾಡುವ ಅಪರೂಪದ ಔಷಧ ಮತ್ತು ಮಂತ್ರಗಳನ್ನು ನೀಡುತ್ತವೆ. ರಾಜಕುಮಾರಿಯ ಹೊಟ್ಟೆನೋವು ಗುಣಪಡಿಸಿ, ಅವಳನ್ನು ಮದುವೆಯಾದರೂ, ರಾಜ-ರಾಣಿಯರೂ ಪ್ರತಿದಿನ ದುಡಿಯಲೇಬೇಉ ಎಂಬ ಕರಾರು ಹಾಕುತ್ತಾನೆ.

ಸೈತಾನನು ಬೋಳೇಶಂಕರನ ಅಣ್ಣಂದಿರ ಮನಸ್ಸು ಕೆಡಿಸಿ, ಅವನಿಂದ ಚಿನ್ನ ಮತ್ತು ಸೈನಿಕರನ್ನು ತಯಾರಿಸಿ ದೂರಾಗುತ್ತಾರೆ. ಕೊನೆಗೆ ದುರಾಸೆಯ ಬೆನ್ನುಹತ್ತಿ ನಾಶವಾಗುತ್ತಾರೆ. ಶ್ರಮದ ಮೇಲೆ ಅಪಾರ ನಂಬಿಕೆ ಇರುವ ಬೋಳೇಶಂಕರನ ಪ್ರಜೆಗಳೂ ತಲೆಯಿಂದ ಮಾಡುವ ಕೆಲಸದ ಹಿಂದೆ ಬೀಳದೆ ದುಡಿದ ಮಾಡುವ ಕೆಲಸವೇ ಶ್ರೇಷ್ಠ ಎನ್ನುವ ಮನೋಭಾವ ಹೊಂದಿರುತ್ತಾರೆ.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books