ಬೇರೆಯೇ ಮಾತು

Author : ದಿನೇಶ್ ಅಮಿನ್ ಮಟ್ಟು

Pages 408

₹ 380.00




Year of Publication: 2021
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್ ಹತ್ತಿರ, ವಿದ್ಯಾನಗರ, ಶಿವಮೊಗ್ಗ- 577203
Phone: 9448628511

Synopsys

‘ಬೇರೆಯೇ ಮಾತು’ ಓದುಗರ ಸಂಪಾದಕ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಆಯ್ದ ಲೇಖನಗಳ ಸಂಕಲನ. ಈ ಕೃತಿಯನ್ನು ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಸಂಪಾದಿಸಿದ್ದಾರೆ. ವಾಣಿಜ್ಯೋದ್ಯಮ ಪ್ರಭುಗಳ ಒಡೆತನ ಹಾಗೂ ಸಾಮಾಜಿಕ ಹಿತಾಸಕ್ತರ ಸಂಪಾದಕತ್ವದಲ್ಲಿ ಓದುಗ ವರ್ಗದ ಮನಸ್ಸಿಗೆ ಅನುದಿನವೂ ಮಿಥ್ಯವನ್ನು ಮುಟ್ಟಿಸಿ, ಅವರ ಮುಖಕ್ಕೆ ಮೂಡನಂಬಿಕೆಗಳ ಮಡಿಕೆ ತೊಡಿಸಿ, ಸಾರ್ವಜನಿಕ ಜೀವನದ ನಯವಂಚಕರಿಗೆ ಮೌಲ್ಯದ ಮಾತಿನ ನಿಲುವಂಗಿ ತೊಡಿಸಿ, ಉತ್ತಮರನ್ನು ಅದಮರೆಂದು ಚಿತ್ರಿಸಿ ಈ ದೇಶದ ಜನಜೀವನದ ಎಲ್ಲ ಕ್ಷೇತ್ರಗಳನ್ನೂ ಮಲಿನಗೊಳಿಸುತ್ತಿರುವ ಪತ್ರಿಕೆಗಳ ವಂಚನೆಯ ಜಾಲವನ್ನು ಬಯಲಿಗೆಳೆವ ಮಹದುದ್ದೇಶರಿಂದ ಉರಿಸಿದ ಪತ್ರಿಕೆ ಮುಂಗಾರು. ಈ ಪತ್ರಿಕೆಯ ಸಂಪಾದಕರಾಗಿ ಪತ್ರಿಕೊದ್ಯಮಕ್ಕೆ ಹೊಸ ಚೇತನವನ್ನು ನೀಡಿದ ಧೀಮಂತ ಪತ್ರಕರ್ತ ವಡ್ಡರ್ಸೆ ಅವರ ಮಹತ್ವದ ಲೇಖನಗಳನ್ನು ದಿನೇಶ್ ಅಮಿನ್ ಮಟ್ಟು ಅವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

About the Author

ದಿನೇಶ್ ಅಮಿನ್ ಮಟ್ಟು

ಪತ್ರಕರ್ತ, ಬರಹಗಾರ, ಸಾಮಾಜಿಕ ಚಿಂತಕ ದಿನೇಶ್‌ ಅಮೀನ್‌ ಮಟ್ಟು ಅವರು ಅವರ ಪ್ರಖರ ಲೇಖನಗಳ ಮೂಲಕವೇ ಪರಿಚಿತರು. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಅಂಕಣಕಾರರಾಗಿ ಕೆಲಸ ಮಾಡಿರುವ ಇವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಇವರು ಬರೆದ ಕೃತಿಯೆಂದರೆ ಪ್ರಜಾವಾಣಿಯಲ್ಲಿ ದೆಹಲಿ ನೋಟ ಅಂಕಣದಲ್ಲಿ ಪ್ರಕಟಗೊಂಡ ಲೇಖನಗಳ ಸಂಕಲಿತ ರೂಪ ದೆಹಲಿ ನೋಟ. ...

READ MORE

Related Books