ಬೆಸ್ಟ್ ಆಫ್ ಬಿ.ಜಿ.ಲ್ ಸ್ವಾಮಿ

Author : ಬೇಲೂರು ರಾಮಮೂರ್ತಿ

Pages 176

₹ 150.00




Year of Publication: 2007
Published by: ಅಂಕಿತ ಪುಸ್ತಕ
Address: 53, ಗಾಂದಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು -04

Synopsys

ಸಸ್ಯವಿಜ್ಞಾನಿ, ಲೇಖಕ, ವಿದ್ವಾಂಸರಾದ ಬಿ.ಜಿ.ಎಲ್ ಸ್ವಾಮಿ ಅವರ ಆಯ್ದ ಹಾಸ್ಯ ಪ್ರಸಂಗಗಳನ್ನು ಬೇಲೂರು ರಾಮಮೂರ್ತಿ ಅವರು ಸಂಪಾದಿಸಿ ’ಬೆಸ್ಟ್ ಆಫ್ ಬಿಜಿಎಲ್ ಸ್ವಾಮಿ’ ಪುಸ್ತಕವನ್ನು ಹೊರತಂದಿದ್ದಾರೆ.

ಈ ಕೃತಿಯಲ್ಲಿ ಅವರ ಪ್ರಕಟಿತ ಕೃತಿಯೊಳಗಿನ ಆಯ್ದ ಕೆಲವು ಪ್ರಸಂಗಗಳನ್ನು ಕೊಡಲಾಗಿದೆ. ಬದುಕಿನ ಎಲ್ಲ ಮಜಲುಗಳಲ್ಲೂ ಹಾಸ್ಯವನ್ನು ಕಂಡುಕೊಂಡು ಹಾಸ್ಯಪ್ರವೃತ್ತಿಯನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ವಿಭಿನ್ನ ಮಾದರಿಯಲ್ಲಿ ತೋರಿಸಿಕೊಟ್ಟವರು ಬಿಜಿಎಲ್ ಸ್ವಾಮಿ.

ಹಾಸ್ಯಜೀವಿ ಸ್ವಾಮಿಯವರ ಬದುಕಿನ ಅನೇಕ ಹಾಸ್ಯಮಯ ಪ್ರಸಂಗಗಳನ್ನು ಓದುಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಒಂದೆಡೆ ಸೇರಿಸಿ ಈ ಕೃತಿಯ ಮೂಲಕ ಪ್ರಕಟಿಸಿದ್ದಾರೆ.

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books