ಬೆಟ್ಟದ ನವಿಲುಗಳು

Author : ಕೇಶವ ಮಳಗಿ

Pages 125

₹ 100.00

Buy Now


Year of Publication: 2018
Published by: ಕಥನ ಪ್ರಕಾಶನ, ಬೆಂಗಳೂರು
Phone: 94483 34622

Synopsys

ಕವಿ, ಕಥೆಗಾರ, ಕಲಾವಿದ, ಸಾಕ್ಷ್ಯಚಿತ್ರ ನಿರ್ಮಾಪಕ, ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದ ಚಲಂ ಬೆನ್ನೂರಕರ್ ಬದುಕಿದ್ದಾಗ ಅವರ ಯಾವ ಪುಸ್ತಕಗಳೂ ಪ್ರಕಟವಾಗಲಿಲ್ಲ.

ಅವರು ತೀರಿಕೊಂಡ ಎರಡು ವರ್ಷಗಳ ಬಳಿಕ ಸಂಸ್ಮರಣೆಯ ನೆಪದಲ್ಲಿ  ಕನ್ನಡದ ಅತ್ಯುತ್ತಮ ಬರಹಗಾರರಾದ ಚಂದ್ರಶೇಖರ ತಾಳ್ಯ ಮತ್ತು ಕೇಶವ ಮಳಗಿ ಅವರ ಬರಹಗಳನ್ನು ಸಂಪಾದಿಸಿದ್ದಾರೆ. ಕನ್ನಡದಲ್ಲಿ ಬರೆದ ಕಥೆ, ಕವಿತೆಗಳಲ್ಲದೆ, ಇಂಗ್ಲಿಷ್‌ನಲ್ಲಿ ಬರೆದ ಲೇಖನ, ಸಂದರ್ಶನ, ಪತ್ರಗಳನ್ನೂ ಅವುಗಳ ಅನುವಾದವನ್ನೂ ನೀಡಲಾಗಿದೆ. 

About the Author

ಕೇಶವ ಮಳಗಿ

ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...

READ MORE

Related Books