ಭಾವ ಬಂಧುರ

Author : ತಿಲಕನಾಥ ಮಂಜೇಶ್ವರ

Pages 264

₹ 150.00




Year of Publication: 2017
Published by: ಚಾರುಮತಿ ಪ್ರಕಾಶನ
Address: ಚಾರುಮತಿ ಪ್ರಕಾಶನ, 224, 4ನೇ ಮೇನ್, 3ನೇ ಕ್ರಾಸ್, ಚಾಮರಾಜಪೇಟೆ, ಬೆಂಗಳೂರು-18

Synopsys

ರಾಮನಗರದ ಗ್ರಾಮೀಣ ಕಲಾವಿದರ ಜಾನಪದ ಲೋಕವನ್ನು ಪರಿಚಯಿಸಿದ್ದಾರೆ ಲೇಖಕರು. ಸಂದರ್ಶನ, ವ್ಯಕ್ತಿ ಪರಿಚಯ, ಕೃತಿಪರಿಚಯ ಇವೆಲ್ಲವೂ ಒಂದು ಸಮಾನ ಭಾವ ಬಂಧುರವನ್ನು ನಮ್ಮೊಳಗೆ ನಿರ್ಮಿಸುತ್ತದೆ. ಜಾನಪದ ಬದುಕಿನ ಕುರಿತಂತೆ ರಾಜಕೀಯ ನಾಯಕರ ಮತ್ತು ಸಮಾಜದ ಅಸ್ಪಶ್ಯತೆಯ ಕುರಿತಂತೆಯೂ ಅವರು ಗಮನ ಸೆಳೆಯುತ್ತಾರೆ. ಇದರ ಜೊತೆಗೆ ನಾಗೇಗೌಡರ ಅಪರೂಪದ ಸಂದರ್ಶನ, ಜಾನಪದ ಜಗತ್ತಿನ ಕುತೂಹಲಕಾರಿ ವಿಷಯಗಳನ್ನು ಹೊರಗೆಡಹುತ್ತದೆ. ತಮಿಳುನಾಡಿನ ಜಾನಪದ ಕಲೆ ತರಕೂ, ವಿದೂಷಕ ಶ್ರೇಷ್ಠ ಮಿಜಾರ್ ಅಣ್ಣಪ್ಪ, ಕಿನ್ನರಿ ಜೋಗಿ ಬಿ. ವಿ. ಕಾರಂತ, ರಂಗಭೂಮಿ ಕಲಾವಿದೆ ಚಿಂದೋಡಿ ಲೀಲಾ, ಗಿನ್ನೆಸ್ ದಾಖಲೆ ಸೇರಿದ ಸುರಭಿ ಥಿಯೇಟರ್, ಪರಮೇಶ್ವರ ಭಟ್ ಹೀಗೆ ಇವರು ಕಟ್ಟಿಕೊಡುವ ವ್ಯಕ್ತಿತ್ವಗಳು ವ್ಯಕ್ತಿಚಿತ್ರದಾಚೆಗೆ ನಮ್ಮನ್ನು ಆವರಿಸಿಕೊಳ್ಳುತ್ತದೆ.

About the Author

ತಿಲಕನಾಥ ಮಂಜೇಶ್ವರ
(19 November 1947)

ಪತ್ರಕರ್ತ, ಲೇಖಕ ತಿಲಕನಾಥ ಮಂಜೇಶ್ವರ ಅವರು ಹುಟ್ಟಿದ್ದು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಬಳಿಯ ಕುಂಜತ್ತೂರು ಗ್ರಾಮದಲ್ಲಿ. ತಂದೆ- ವೆಂಕಪ್ಪ, ತಾಯಿ- ಆನಂದಿ. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದ ಅವರು ತರಂಗ ವಾರ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದರು. ಆನಂತರದಲ್ಲಿ ತರಂಗದ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕತಾ ಸಂಕಲನಗಳು ‘ಕಿಲಕಿಲನಗೆಯೊಡತಿ’ ಹಾಗೂ ಹೆಜ್ಜೆ ಗುರುತು. ಅವರ ರಾಜೀವ, ಬಿಂಬ ಪಲಾಯನ ಕಾದಂಬರಿಗಳು ನವಭಾರತ ಪತ್ರಿಕೆಯಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟವಾಗಿವೆ. ಅಲ್ಲದೇ ಮರ್ಮರ ಮತ್ತು ಅನುಪಲ್ಲವಿ ಕಾದಂಬರಿಗಳು ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಬಿಡಿ ಬರಹಗಳು ಕರ್ಮವೀರ, ...

READ MORE

Related Books