ಭಕ್ತಿರಹಸ್ಯ ಅಥವಾ ಶ್ರೀ ಸಿದ್ಧರಾಮೇಶ್ವರ ನಾಟಕವು

Author : ಸಿಂಪಿ ಲಿಂಗಣ್ಣ

Pages 96

₹ 0.00




Year of Publication: 1951
Published by: ಉಷಾ ಪ್ರೆಸ್
Address: ಓಲ್ಡ್ ಪೋಸ್ಟ್ ಆಫೀಸ್ ರೋಡ್, ಮೈಸೂರು

Synopsys

‘ಭಕ್ತಿರಹಸ್ಯ’ ಹಿರಿಯ ಸಾಹಿತಿ ಸಿಂಪಿ ಲಿಂಗಣ್ಣ ಅವರ ನಾಟಕ. ಈ ಕೃತಿಗೆ ಮಧುರಚೆನ್ನ ಅವರು ಮುನ್ನುಡಿ ಬರೆದಿದ್ದಾರೆ. ನಾಟಕವು ಇತಿಹಾಸವಲ್ಲ, ಅದು ಕಾವ್ಯ ಒಂದು ತೋರಿಸಿ ಮತ್ತೊಂದನ್ನು ಕೈಗೆ ಹಚ್ಚುವ ಮಾಟಗಾರ್ತಿಯ ರೀತಿಯದ್ದು ಎನ್ನುತ್ತಾರೆ ಮಧುರಚೆನ್ನ.

ಸಿದ್ದರಾಮನ ಸೋಗು ಭಕ್ತಿಯ ರಹಸ್ಯ ಕತೆ ವಿಶೇಷವಾದದ್ದು. ಪುರಾಣದ ಸಿದ್ಧರಾಮನು ಪುರಾಣಕಾಲಕ್ಕೆ ಅನುಗುಣವಾಗಿದ್ದರೆ, ನಾಟಕದ ಸಿದ್ಧರಾಮನು ಈ ಕಾಲಕ್ಕೆ ಅನುರೂಪವಾದವನು. ಇವನು ಕೋಣೆಯಲ್ಲಿ ಕುಳಿತು ಹರಕುಎಲೆ ಮುದಿಹೂಗಳಿಂದ ಪೂಜಿಸುವ ಪ್ರಪಂಚಿಯಲ್ಲ. ಕೋಣೆಯಿಲ್ಲದ ರಾಜಧಾನಿಯಲ್ಲಿ ಲೆಕ್ಕವಿಲ್ಲದ ಭಂಡಾರವನ್ನು ಮುಚ್ಚಮಾಸದ ಮುನ್ನ ಉಂಡು-ಉಸುರುವ ಸವಿಗಾರನು, ಇಂದಿನವರೆಗೆ ಈ ಕಣ್ಣು ಮೂಡಬೇಕು ಭಕ್ತಿಯ ಬಾಗಿಲು ಆಗ ತೆರೆದೀತು. ಮುತ್ತಿ ನಿಂತ ಗಾಳಿ ಆಗ ಒಳಗೆ ಬಂದೀತು. ಎನ್ನುತ್ತಾ ನಾಟಕದ ಕುತೂಹಲವನ್ನು ಹೆಚ್ಚಿಸುತ್ತಾರೆ. ಈ ಕತೆ ಪುರಾಣಕತೆಯನ್ನೇ ಮುಂದಿಟ್ಟುಕೊಂಡು ಹೊಸಕಾಲಘಟ್ಟವನ್ನು ವಿವರಿಸುತ್ತದೆ. 

About the Author

ಸಿಂಪಿ ಲಿಂಗಣ್ಣ
(11 February 1905 - 05 May 1993)

ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಬೆಳದದ್ದು ಅಣ್ಣ ಅತ್ತಿಗೆಯರ ಆರೈಕೆಯಲ್ಲಿ. 1922ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದೆ ಶಿಕ್ಷಕರ ವೃತ್ತಿಯನ್ನು ಆಯ್ದುಕೊಂಡರು. ಶಿಕ್ಷಕರ ಟ್ರೈನಿಂಗ್‌ ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವರು ಬಹುಮಾನಗಳನ್ನು ಗಳಿಸಿದರು. 1925ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದೆಡೆಯಲ್ಲೆಲ್ಲಾ ಸೇವೆ ಸಲ್ಲಿಸಿ ...

READ MORE

Related Books