‘ಭಾನಾಮತಿ’ ಡಾ. ಸಿ. ಆರ್. ಚಂದ್ರಶೇಖರ್ ಅವರ ಮಾಯಾ-ಮಾಟ-ತಂತ್ರವಿದ್ಯೆಯ ಅಧ್ಯಯನ ವರದಿಯಾಗಿದೆ. ನಮ್ಮ ರಾಜ್ಯದ ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳ ಹತ್ತಾರು ಹಳ್ಳಿಗಳಲ್ಲಿ 'ಭಾನಾಮತಿ' ಎಂದು ಕರೆಯಿಸಿಕೊಳ್ಳುವ 'ಮಾಟವಿದ್ಯೆ'ಯಿಂದ ಜನಪೀಡನೆಯಾಗುತ್ತಿರುವುದು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಗಮನ ಸೆಳೆಯುವ ಸೂಚನೆ ಮೂಲಕ ಸರ್ಕಾರದ ಗಮನಕ್ಕೆ ಬಂದಿತ್ತು. ಭಾನಾಮತಿ ಸತ್ಯವೇ, ಮಿಥ್ಯವೇ ಇದರ ಉಪಟಳಕ್ಕೆ ಸಿಲುಕಿ ಸಂಕಟಕ್ಕೀಡಾಗಿರುವ ಜನರಿಗೆ ಏನು ಪರಿಹಾರ-ಇತ್ಯಾದಿ ವಿಚಾರಗಳನ್ನು ತಜ್ಞರುಗಳಿಂದ ಕೂಡಿದ ಸಮಿತಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಪರಿಷತ್ತು ಆದೇಶ ನೀಡಿತು. ಇದರಂತೆ ಬೆಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿಗಳು ಹಾಗೂ ವಿಧಾನ ಪರಿಷತ್ತಿನ ಸದಸ್ಯರೂ ಆದ ಡಾ. ಎಚ್. ನರಸಿಂಹಯ್ಯನವರ ಅಧ್ಯಕ್ಷತೆಯಲ್ಲಿ ಸಂಶೋಧನಾ ಸಮಿತಿಯನ್ನು ಸರ್ಕಾರ ನೇಮಿಸಿತು. ಈ ಸಮಿತಿಯ ಅಧ್ಯಯನ ವರದಿಯನ್ನು ಆಧರಿಸಿ ಕನ್ನಡದಲ್ಲಿ 'ಭಾನಾಮತಿ ಕಥೆ'ಯನ್ನು ಓದುಗರ ಮುಂದೆ ಇಟ್ಟಿದೆ. ವೈಜ್ಞಾನಿಕವಾಗಿ ಮೂಢನಂಬಿಕೆಗಳನ್ನು ವಿಶ್ಲೇಷಿಸುವ ಮಾರ್ಗವನ್ನು ಈ ಕಿರುಹೊತ್ತಿಗೆಯಲ್ಲಿ ಕಾಣಬಹುದು. 'ಭಾನಾಮತಿ'ಯನ್ನು ಅರ್ಥಮಾಡಿ ಕೊಳ್ಳಲು ಈ ಕಿರುಹೊತ್ತಿಗೆ ಸಾಕಷ್ಟು ನೆರವು ನೀಡುತ್ತದೆ.
©2025 Book Brahma Private Limited.